AVIN TV

Latest Online Breaking News

ತಾಲ್ಲೂಕು, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಚುನಾವಣೆ ತಯಾರಿಯಲ್ಲಿ ಆಮ್ ಆದ್ಮಿ ಪಕ್ಷ #avintvcom

Featured Video Play Icon

ತಾಲ್ಲೂಕು, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಚುನಾವಣೆ ತಯಾರಿಯಲ್ಲಿ ಆಮ್ ಆದ್ಮಿ ಪಕ್ಷ: ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್*

– ತಾಲ್ಲೂಕು, ಜಿಲ್ಲಾ ಮಟ್ಟದಲ್ಲೂ ದೆಹಲಿ ಮಾದರಿ ಅಭಿವೃದ್ಧಿಗೆ ಮುನ್ನುಡಿ ಬರೆಯಲಿದ್ದೇವೆ-

ಬೆಂಗಳೂರು ಜನವರಿ 22: ಕರ್ನಾಟಕದಲ್ಲಿ ಮುಂಬರುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆಗೆ ನಮ್ಮ ಪಕ್ಷವು ಸಂಘಟಿತವಾಗಿ ಕೆಲಸ ಮಾಡುತ್ತಿದ್ದು, ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಸುತ್ತಿದೆ.  ಸಾಕಷ್ಟು ಯುವ ಜನತೆ ಪಕ್ಷದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಪ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಯಲ್ಲೂ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅರವಿಂದ್ ಕೇಜ್ರಿವಾಲ್ ಅವರ ದೆಹಲಿ ಮಾದರಿಗೆ ರಾಷ್ಟದ ಜನ ಮನಸೋತಿದ್ದಾರೆ. ಬಿಜೆಪಿ ಕಾಂಗ್ರೆಸ್ ಹೊರತಾಗಿ ಪರ್ಯಾಯ ರಾಜಕೀಯ ಪಕ್ಷವನ್ನು ಎದುರು ನೋಡುತ್ತಿದ್ದು ಇದಕ್ಕೆ ಉದಾಹರಣೆಯಾಗಿ ಇತ್ತೀಚೆಗೆ ರಾಷ್ಟ್ರದಾದ್ಯಂತ ಅನೇಕ ರಾಜ್ಯಗಳಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಿರುವುದು ಬದಲಾವಣೆಯ ಮುನ್ನುಡಿ ಎಂದರು.

ಇಡೀ ದೇಶದಲ್ಲಿ 2011-12 ರ ಹೊತ್ತಿಗೆ ಜನ ಲೋಕಪಾಲ್ ಕಾಯ್ದೆ ಜಾರಿಗೆ ಬರಬೇಕು ಎಂದು ಪ್ರಬಲ ಹೋರಾಟ ನಡೆಯುತ್ತಿತ್ತು. ಆಗ ನಾನು ಕರ್ನಾಟಕದಲ್ಲಿ ನಡೆಯುತ್ತಿದ್ದ ” ಭ್ರಷ್ಟಾಚಾರದ ವಿರುದ್ದ ಭಾರತ ಆಂದೋಲನದಲ್ಲಿ” ಭಾಗವಹಿಸಿದ್ದೆ ಆಗ ಕರ್ನಾಟಕದಲ್ಲಿ ಇದ್ದ ಲೋಕಾಯುಕ್ತ ಸಂಸ್ಥೆ,

ಸಂತೋಷ್ ಹೆಗಡೆಯವರ ದಕ್ಷತೆ ಕಂಡು ಕರ್ನಾಟಕದ ಬಗ್ಗೆ ಹೆಮ್ಮೆ ಪಟ್ಟಿದ್ದೆ. ಇಂತಹ ಮಾದರಿ ಸಂಸ್ಥೆ ರಾಷ್ಟ್ರ ಮಟ್ಟದಲ್ಲಿ ಬೇಕೆ ಬೇಕು ಎಂದು ಅನಿಸಿತ್ತು ಆದರೆ ಇಂದಿನ ಪರಿಸ್ಥಿತಿ ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ಲೋಕಾಯುಕ್ತವನ್ನು ಹಾಳುಗೆಡವಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನಡೆಯುತ್ತಿರುವ ಎಲ್ಲಾ ಭ್ರಷ್ಟಾಚಾರಗಳಿಗೆ ಮುನ್ನುಡಿ ಬರೆದರು. ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಲೋಕಾಯುಕ್ತ ಮರಳಿ ತರುವುದಾಗಿ ಹೇಳಿದ್ದ ಯಡಿಯೂರಪ್ಪ ಅವರು ಈಗ ಲೋಕಾಯುಕ್ತವನ್ನೇ ಬಳಸಿಕೊಂಡು ತಮ್ಮ ಮೇಲಿದ್ದ ಭೂ ಹಗರಣವನ್ನೇ ಖುಲಾಸೆಗೊಳಿಸುತ್ತಿದ್ದಾರೆ ಎಂದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!