AVIN TV

Latest Online Breaking News

ಬಣಕಲ್ ಗ್ರಾಮದ ಸರ್ವೆ ನಂ 353 ರಲ್ಲಿರುವ ಆಟದ ಮೈದಾನವನ್ನು ಸಾರ್ವಜನಿಕರಿಗೆ ಅನುಕೂಲವಾಗುವಂತೆ…. #avintvcom

Featured Video Play Icon

ಬಣಕಲ್ ಕ್ರೀಡಾಂಗಣ ವಿವಾದ:ಇಂದು(ಮಂಗಳವಾರ) ಬಣಕಲ್ ಬಂದ್

ಅನಿರ್ದಿಷ್ಟಾವಧಿ ಧರಣಿ

 

:ಬಣಕಲ್ ಗ್ರಾಮದ ಸರ್ವೆ ನಂ 353 ರಲ್ಲಿರುವ ಆಟದ ಮೈದಾನವನ್ನು ಸಾರ್ವಜನಿಕರಿಗೆ ಅನುಕೂಲವಾಗುವಂತೆ  ಪಕ್ಕ ಪೋಡ್ ಬದಲಾಯಿಸಲು ಒತ್ತಾಯಿಸಿ ಇಂದು ಬಣಕಲ್ ಬಂದ್‍ಗೆ ಕರೆ ನೀಡಲಾಗಿದ್ದು ಅನಿರ್ದಿಷ್ಟಾವಧಿ ಧರಣಿ ನಡೆಯಲಿದೆ.

ಸಾರ್ವಜನಿಕ ಕ್ರೀಡಾಂಗಣ ಹೋರಾಟ ಸಮಿತಿಯ ಸದಸ್ಯ ವಿನಯ್ ಶೆಟ್ಟಿ ಮಾತನಾಡಿ ಬಣಕಲ್ ಗ್ರಾ.ಪಂಯ ಸರ್ವೆ ನಂ 353 ರಲ್ಲಿರುವ ಆಟದ ಮೈದಾನದಲ್ಲಿ ಪೋಲಿಸ್ ಇಲಾಖೆ, ಗ್ರಾ.ಪಂ ಮತ್ತು ಸಾರ್ವಜನಿಕರ ಗಮನಕ್ಕೆ ತರದೆ ಪಕ್ಕಾ ಪೋಡ್ ಮಾಡಿದ್ದು ಮೈದಾನ ಸುತ್ತ ಬೇಲಿ ನಿರ್ಮಾಣ ಮಾಡಲಾಗುತ್ತಿದೆ.  ಇದರಿಂದ ಸಾರ್ವಜನಿಕರಿಗೆ ಆಟದ ಮೈದಾನವೆ ಇಲ್ಲದಂತಾಗಿದೆ. ಇದರಿಂದಾಗಿ ಸಾರ್ವಜನಿಕ ಕ್ರೀಡಾಂಗಣ ಹೋರಾಟ ಸಮಿತಿಯ ಮೂಲಕ ಬಣಕಲ್ ಗ್ರಾಮಸ್ಥರು ಹೋರಾಟಕ್ಕೆ ಮುಂದಾಗಿದ್ದು ಇಂದು ಅನಿರ್ದಿಷ್ಟಾವಧಿ ಧರಣಿ ಹಾಗೂ ಬಣಕಲ್ ಬಂದ್‍ಗೆ ನಡೆಯಲಿದೆ ಎಂದರು.

ಸಾರ್ವಜನಿಕ ಕ್ರೀಡಾಂಗಣ ಹೋರಾಟ ಸಮಿತಿಯ ಅಭಿಷೇಕ್ ಮಾತನಾಡಿ ಬಣಕಲ್ ಭಾಗದ ಎಲ್ಲಾ ಸಂಘ ಸಂಸ್ಥೆಗಳ ಸಹಕಾರದೊಂಡಿಗೆ ಹೋರಾಟ ಪ್ರಾರಂಭಿಸಿದ್ದು ಇಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಬಣಕಲ್ ಬಂದ್‍ಗೆ ಕರೆ ನೀಡಲಾಗಿದೆ. ಬೆಳಿಗ್ಗೆ ಬಣಕಲ್ ಪೆಟ್ರೋಲ್ ಬಂಕ್ ನಿಂದ ಮೆರವಣಿಗೆ ಮೂಲಕ ಕ್ರೀಡಾಂಗಣಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಿ ಕ್ರೀಡಾಂಗಣದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಲಾಗುವುದು ಎಂದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!