ಪಕ್ಷದ ವರಿಷ್ಟರಿಗೆ ಯಾರು ಬಕೆಟ್ ಹಿಡಿಯುತ್ತಾರೋ ಅವರಿಗೆ ಮಾತ್ರ ಅಧಿಕಾರ ಸಿಗುತ್ತದೆ. #avintvcom

ಬಕೆಟ್ ಹಿಡಿಯುವವರಿಗೆ ಮಾತ್ರ ಮಂತ್ರಿಗಿರಿ:ಶಾಸಕ ಅಪಚ್ಚು ರಂಜನ್ ಆಕ್ರೋಶ
ಕೊಡಗು:ಈ ಭಾರಿಯೂ ಕೊಡಗಿಗೆ ಮಂತ್ರಿ ಸ್ಥಾನ ಸಿಗುವ ಭಾಗ್ಯವಿಲ್ಲ.ಪಕ್ಷದ ವರಿಷ್ಟರಿಗೆ ಯಾರು ಬಕೆಟ್ ಹಿಡಿಯುತ್ತಾರೋ ಅವರಿಗೆ ಮಾತ್ರ ಅಧಿಕಾರ ಸಿಗುತ್ತದೆ. ರಾಜ್ಯದ ಯಾವುದೇ ಮಂತ್ರಿಗಳು ನಾಯಕರು,ಅಧಿಕಾರಿಗಳು ಕೊಡಗಿಗೆ ಆಗಮಿಸಿದರೆ ಜಿಲ್ಲೆಯನೊನು ಹಾಡಿ ಹೊಗಳಿ ಗಡಿ ದಾಟುತ್ತಿದ್ದಂತೆ ಭೂತದ ಬಾಯಲ್ಲಿ ಭಗವತ್ ಗೀತೆ ಎನ್ನುವಂತೆ ಜಿಲ್ಲೆಯನ್ನು ಮರೆತುಬಿಡುತ್ತಾರೆ.ಪುಟ್ಟ ಜಿಲ್ಲೆ ಅಭಿವೃದ್ದಿಯಿಂದ ಕುಂಠಿತವಾಗಿದೆ,ಸತತ ಪ್ರಾಕೃತಿಕ ವಿಕೋಪ,ಕಾಡು ಪ್ರಾಣಿಗಳ ಹಾವಳಿ,ರೈತರ ಸಮಸ್ಯೆ ಹೀಗೆ ಹತ್ತು ಹಲವು ಇದ್ದರೂ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.ಜಿಲ್ಲೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರದಲ್ಲಿ ವಿರಾಜಪೇಟೆ ಕ್ಷೇತ್ರದಿಂದ ಕೆ.ಜಿ ಬೋಪಯ್ಯ ನಾಲ್ಕು ಭಾರಿ,ಮಡಿಕೇರಿ ಕ್ಷೇತ್ರದಿಂದ ಅಪಚ್ಚು ರಂಜನ್ ಐದು ಭಾರಿ ಆಯ್ಕೆ ಆಗಿದ್ದು ಕಳೆದ ಅವಧಿಯಲ್ಲಿ ಕೆಲ ತಿಂಗಳುಗಳ ಕಾಲ ರಂಜನ್ ಕ್ರೀಡಾ ಸಚಿವರಾಗಿದ್ದರು,ಹಾಗೆ ಬೋಪಯ್ಯ ಕೆಲ ತಿಂಗಳು ಸ್ಪೀಕರ್ ಆಗಿರುವುದು ಹೊರತು ಪಡಿಸಿ ಉಸ್ತುವಾರಿ ಸಚಿವರನ್ನೂ ಹರ ಜಿಲ್ಲೆಯವರಿಗೆ ನೀಡುತ್ತಿರುವುದು ಜಿಲ್ಲಾ ಬಿಜೆಪಿಯಲ್ಲಿ ಅಸಮಧಾನ ಮೂಡಿಸಿದೆ.