ಜನರಲ್ ತಿಮ್ಮಯ್ಯ ಮ್ಯೂಸಿಯಮ್ ಉದ್ಘಾಟನೆಗೆ ಮಡಿಕೇರಿಗೆ ಬರಲಿದ್ದಾರೆ ರಾಷ್ಟ್ರಪತಿ. #avintvcom

ಜನರಲ್ ತಿಮ್ಮಯ್ಯ ಮ್ಯೂಸಿಯಮ್ ಉದ್ಘಾಟನೆಗೆ ಮಡಿಕೇರಿಗೆ ಬರಲಿದ್ದಾರೆ ರಾಷ್ಟ್ರಪತಿ.
ಕೊಡಗು: ವೀರ ಸೇನಾನಿ ಕೊಡಗಿನ ಕುವರ ಜನರಲ್ ತಿಮ್ಮಯ್ಯ ಬಾಳಿಬದುಕಿದ ಸನ್ನಿಸೈಡ್ ಮನೆ ಕಡೆಗೂ ವಸ್ತುಸಂಗ್ರಹಾಲಯವಾಗಿದ್ದು ಕಡೆಗೂ ಉದ್ಗಾಟನೆ ಭಾಗ್ಯ ದೊರೆತಿದೆ.
ಫೆಬ್ರವರಿ 6 ರಂದು ಜಿಲ್ಲಾಕೇಂದ್ರ ಮಡಿಕೇರಿಯಲ್ಲಿ ಉದ್ಗಾಟನೆಗೆ ಮುಹೂರ್ತ ನಿಗಧಿಯಾಗಿದ್ದು,ದೇಶದ ಮೊದಲ ಪ್ರಜೆ ರಾಷ್ಟ್ರಪತಿ ರಾಮನಾಥ್ ಕೋವಿಂಧ್. ಲೋಕಾರ್ಪಣೆ ಮಾಡಲಿದ್ದಾರೆ.
ಮಡಿಕೇರಿಯಲ್ಲಿ ನಿರ್ಮಾಣ ಆಗಿರುವ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ.
ತಿಮ್ಮಯ್ಯ ಹುಟ್ಟಿದ ಮನೆ ಸನ್ನಿ ಸೈಡ್ ವಿಶಿಷ್ಠವಾದ ವಸ್ತುಸಂಗ್ರಹಾಲಯವಾಗಿದ್ದು ಜನರಲ್ ತಿಮ್ಮಯ್ಯ ಬಾಲ್ಯದಿಂದ ತಮ್ಮ ಸೇವಾವಧಿಯ ಅಪರೂಪದ ಚಿತ್ರಗಳು,ಆಯುಧಗಳು ಕಳೆದ ವರ್ಷ ಸೇನೆಯಿಂದ ನೀಡಲಾದ ಬೋಫೋರ್ಸ್ ಟ್ಯಾಂಕರ್ ಇಲ್ಲಿ ಗಮನ ಸೆಳೆಯಲಿದೆ.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ –
ಜನರಲ್ ತಿಮ್ಮಯ್ಯ ಫೋರಮ್ ಅಧ್ಯಕ್ಷ ಕೆ.ಸಿ. ಸುಬ್ಬಯ್ಯ ಆಹ್ವಾನದ ಮೇರೆಗೆ ಕೊಡಗಿಗೆ ಬರುತ್ತಿರುವ ರಾಷ್ಟ್ರಪತಿ.
ಫೆಬ್ರವರಿ 6 ರಂದು ಮಧ್ಯಾಹ್ನ 3.15 ರಿಂದ ಸಂಜೆ 4 ಗಂಟೆ ವರೆಗೆ ಕಾರ್ಯಕ್ರಮ ನಿಗಧಿಪಡಿಸಲಾಗಿದೆ.
ಕೊಡಗಿನ ಪಾಲಿಗೆ ಅತ್ಯಂತ ಮಹತ್ವದ ಕಾರ್ಯಕ್ರಮ ಇದಾಗಲಿದ್ದು,ಯೋಧರ ನಾಡಿನ ಗರಿಮೆ ಹೆಚ್ಚಿಸಲಿದೆ.