AVIN TV

Latest Online Breaking News

ಅಪ್ಪಟ ಮೋದಿ ಭಕ್ತನ ಸರಳ ಹುಟ್ಟುಹಬ್ಬಆಚರಣೆ…..ಶ್ರೀಯುತ ಸಂಜಯ್ ಕೊಟ್ಟಿಗೆಹಾರ ರವರು#avintvcom

Featured Video Play Icon

ಅಪ್ಪಟ ಮೋದಿ ಭಕ್ತನ ಸರಳ ಹುಟ್ಟುಹಬ್ಬಆಚರಣೆ…..

ದಿನಾಂಕ 16-1-2021ರ ಶನಿವಾರ ಸಂಜೆ 6:30ಕ್ಕೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಸಾರ್ವಜನಿಕ ಸ್ಥಳವಾದ ಪೆಟ್ರೋಲ್ ಬಂಕ್ ನಲ್ಲಿ ಆತ್ಮೀಯರು ನೆರವೇರಿಸಿದರು. ಶ್ರೀಯುತ ಸಂಜಯ್ ಕೊಟ್ಟಿಗೆಹಾರ ರವರು ಅವಿವಾಹಿತರಾಗಿದ್ದು ತನ್ನ ಆತ್ಮೀಯ ಬಳಗದೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿಸಿಕೊಂಡರು ತಂದೆ ಸುಂದರೇಶಗೌಡ ಸರ್ಕಾರಿ ನೌಕರಿಯಲ್ಲಿದ್ದರು ಸಹ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಜನಾನುರಾಗಿಯಾಗಿ ಜೀವನ ನಡೆಸಿದವರು ತಾಯಿ ಯಶೋದಮ್ಮ ಸಹಹೃದಯಿ ಯಾಗಿದ್ದು, ಎಲ್ಲ ಜಾತಿ ಜನಾಂಗ ದವರನ್ನು ತನ್ನ ಕುಟುಂಬ ದವರೆಂದು ಭಾವಿಸಿದ ಮಹಾನ್ ಗೃಹಿಣಿ, ಅತೀ ಹೆಚ್ಚು ಮಳೆ ಬೀಳುವ ಕೊಟ್ಟಿಗೆಹಾರದ ದೇವನಗೂಲ್ ಇವರ ಹುಟ್ಟುಸ್ಥಳವಾದರೂ ಕಾಡು ಪ್ರಾಣಿಗಳು ಮತ್ತು ಮಳೆಗೆ ನಲುಗಿ ಕೃಷಿ ಲಾಭದಾಯಕವಾಗುವುದಿಲ್ಲವೆಂದು ತಿಳಿದು ಮಾಯಾನಗರಿ ಬೆಂಗಳೂರಿನಲ್ಲಿ ವೃತ್ತಿಮಾಡುತಿದ್ದರು ನಂತರ ದೇಶಾದ್ಯಂತ ವ್ಯಾಪಿಸಿರುವ ಮೊಬೈಲ್ ಸೇಲ್ಸ್ ಅಂಡ್ ಸರ್ವಿಸ್ ನ ಸಂಗೀತ ಮೊಬೈಲ್ ಸೆಂಟರ್ ನಲ್ಲಿ ವೃತ್ತಿ ಜೀವನ ಆರಂಭಿಸಿದರು. ಪ್ರಾಮಾಣಿಕ ಸಜ್ಜನ ಸಹೃದಯಿಯಾದ ಇವರನ್ನು ಸಂಗೀತ ಮೊಬೈಲ್ ಸಂಸ್ಥೆ ಗುರುತಿಸಿ ಅನೇಕ ಉನ್ನತ ಹುದ್ದೆಗಳನ್ನು ನೀಡಿದರು ಸಹ ತನ್ನ ಹುಟ್ಟೂರು ಮೂಡಿಗೆರೆಯಲ್ಲಿ ಸಂಸ್ಥೆಯ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ನೇಹ ಜೀವಿಯಾದ ಇವರು ಸಂಸ್ಥೆಗೆ ಬರುವ ನೂರಾರು ಗ್ರಾಹಕರನ್ನು ಸಂಸ್ಥೆಯತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಟ್ಟಾ ಹಿಂದೂ ಪರವಾದ ಈ ವ್ಯಕ್ತಿಗೆ ತಾಲೂಕು ಹಾಗೂ ಜಿಲ್ಲೆಯ ವಿಶ್ವಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಶ್ರೀರಾಮಸೇನೆ, ಭಜರಂಗದಳ ಇನ್ನು ಹಿಂದೂಪರ ಸಂಘಟನೆಗಳಲ್ಲಿ ಛಾಪು ಮೂಡಿಸಿಕೊಂಡಿದ್ದಾರೆ. ಕಳೆದ ವರ್ಷ ಪ್ರವಾಹ ಪೀಡಿತ ಪ್ರದೆಶಗಳಲ್ಲಿ ತನ್ನ ಜೀವವನ್ನ ಲೆಕ್ಕಿಸದೆ ಜನರ ರಕ್ಷಣೆಗೆ ನಿಂತ ಅಪತ್ಬಾಂದವ.ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚದ ಉಪಾಧ್ಯಕ್ಷರಾಗಿ, ಮೂಡಿಗೆರೆ ತಾಲೂಕು ಯುವ ಮೋರ್ಚದ ಅಧ್ಯಕ್ಷರಾಗಿ ಕಾರ್ಯನಿವಹಿಸುತಿದ್ದಾರೆ
ಕೊಟ್ಟಿಗೆಹಾರದ ಗೆಳಯರ ಬಳಗಲ್ಲಿ ಗುರುತಿಸಿ ಕೊಂಡಿದ್ದಾರೆ. ತಾಲೂಕು ಕನ್ನಡ ಪರಿಷತ್ ವತಿಯಿಂದ ಮೂಡಿಗೆರೆಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೀಡಿದ ಬಹು ದೊಡ್ಡ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದಾರೆ. ಅಂತಾರಾಷ್ಟ್ರೀಯ ಸಂಸ್ಥೆ ಯಾದ ಜೆಸಿಐ ಬಣಕಲ್ ನ ಉಪಾಧ್ಯಕ್ಷರಾಗಿ ಕಾರ್ಯನಿವಹಿಸುತಿದ್ದಾರೆ. ಇಡಿ ರಾಜ್ಯದಲ್ಲಿ ಹಣ ಖರ್ಚು ಮಾಡದೆ ಬರಿಗಾಲಲ್ಲಿ ನಡೆದು ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಜಯಶೀಲರಾದ ಮೂಡಿಗೆರೆ ತಾಲೂಕು ನಿಡುವಾಳೆ ಗ್ರಾಮಪಂಚಾಯಿತಿ ಸದಸ್ಯ ನವೀನ್ ಹಾವಳಿ ಯವರ ಗೆಲುವಿಗೆ ಮೂಲ ಕಾರಣಕರ್ತರಾಗಿದ್ದಾರೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೆಲವು ಗುಣಲಕ್ಷಣಗಳನ್ನು ಅಳವಡಿಸಿಕೊಂಡಿರುವವರಲ್ಲಿ ತಾಲೂಕಿಗೆ ಮೊದಲಿಗರಾಗಿದ್ದರೆ. ಎಲ್ಲ ರಾಜಕೀಯ ಪಕ್ಷಗಳ ಸಂಘಸಂಸ್ಥೆಗಳ ಜನಮನ್ನಣೆ ಪಡೆದಿರುವ ಇವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳು ದೊರೆಯಲಿ. ಸರಳ ಜೀವನ ಉತ್ತಮ ಆರೋಗ್ಯ ಆಯಸ್ಸು ನೀಡುತ್ತದೆ.ಎಂಬುದನ್ನು ಅಳವಡಿಸಿ ಕೊಂಡಿದ್ದಾರೆ. ಒಂದೇ ಮತ ಒಂದೇ ದೇಶ ಅವರ ಧ್ಯೆಯವಾಕ್ಯ. ವರದಿ ಮಗ್ಗಲಮಕ್ಕಿ ಗಣೇಶ್ ನ್ಯೂಸ್ ಬ್ಯುರೋ ಅವಿನ್ ಟಿವಿ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!