ಅಥಣಿ ತಾಲೂಕಿನ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಗೆ ಚಕ್ಕಡಿ ಗಾಡಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ #avintvcom

ವರದಿ ಅಥಣಿ
ಚಕ್ಕಡಿ ಗಾಡಿ ಹಾಗೂ ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ
ಅಥಣಿ ತಾಲೂಕಿನ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದ ಚಕ್ಕಡಿ ಗಾಡಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಚಕ್ಕಡಿ ಯಲ್ಲಿದ್ದ 2 ಜನರಿಗೆ ಗಂಭೀರ ಗಾಯಗಳಾಗಿವೆ ಮುಂದೆ ಇದ್ದ ಎತ್ತುಗಳಿಗೆ ದೊಡ್ಡ ಪ್ರಮಾಣದಲ್ಲಿ ಗಾಯಗಳಾಗಿವೆ ಸ್ಥಳದಲ್ಲಿ ಜಮಾಯಿಸಿದ ಜನರ ಸಹಾಯದಿಂದ ಇಬ್ಬರು ಗಾಯಾಳುಗಳನ್ನು ಹಾಗೂ ಎತ್ತುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ
ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಗೆ ನೆರೆ ರಾಜ್ಯವಾದ ಮಹಾರಾಷ್ಟ್ರದಿಂದ ಕಬ್ಬು ಕಟಾವು ಮಾಡಲು ಬಂದಿದ್ದರು.
ನಂತರ ಮಾತನಾಡಿದ ಕಾರ್ಖಾನೆಯ ಕಾರ್ಮಿಕ ನಮಗೆ ಮೊದಲು ಈ ತರಹದ ಘಟನೆಗಳು ನಡೆದಿದ್ದು ಯಾವುದೇ ರೀತಿಯ ಪರಿಹಾರಗಳನ್ನು ಕೊಟ್ಟಿಲ್ಲ ಮತ್ತು ನಮ್ಮ ಕಡೆಯಿಂದ ಇನ್ಸೂರೆನ್ಸ್ ಸಲುವಾಗಿ ಹಣವನ್ನು ಪಡೆದರು ಅದರ ಬಗ್ಗೆ ಯಾವುದೇ ಮಾಹಿತಿಗಳು ಮತ್ತು ದಾಖಲೆಗಳನ್ನು ನಮಗೆ ನೀಡಿಲ್ಲ ನಾವು ಹೊರರಾಜ್ಯಗಳಿಂದ ಇಲ್ಲಿ ಕೆಲಸ ಮಾಡಲು ಬಂದಿದ್ದೇವೆ ಇದರ ಸಂಪೂರ್ಣ ಜವಾಬ್ದಾರಿಯನ್ನು ಕಾರ್ಖಾನೆಯ ತೆಗೆದುಕೊಳ್ಳಬೇಕು ಹಾಗೂ ಸೂಕ್ತ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು
ನಂತರ ಮಾತನಾಡಿದ ಕೃಷ್ಣ ಸಹಕಾರಿ ಕಾರ್ಖಾನೆಯ ಅಧ್ಯಕ್ಷರಾದ ಪರಪ್ಪ ಸವದಿ ಅವರು ಅಪಘಾತವಾದ ಚಕ್ಕಡಿ ವಾಹನಕ್ಕೂ ಹಾಗೂ ಎತ್ತುಗಳಿಗೆ ಸೂಕ್ತ ಪರಿಹಾರವನ್ನು ನಮ್ಮ ಕಾರ್ಖಾನೆ ವತಿಯಿಂದ ನೀಡಲಾಗುವುದು ಮತ್ತು ಎಲ್ಲ ಸಿಬ್ಬಂದಿಗಳಿಗೂ ಡ್ರೆಸ್ ಹೆಲ್ಮೆಟ್ಸ್ ನೀಡಲಾಗಿದೆ ಹಾಗೂ ಪ್ರತಿ ಸಿಬ್ಬಂದಿಗೂ ಇನ್ಶುರೆನ್ಸ್ ಮಾಡಿಸಲಾಗುವುದು ಎಂದು ಹೇಳಿದರು
ವರದಿ ರಾಹುಲ್ ಅಥಣಿ