ಸುಮಾರು ಇಪ್ಪತ್ತಕ್ಕೂ ಹೆಚ್ಚು ಮನೆಗಳನ್ನು ಕಳೆದುಕೊಂಡ ಬಡವರು ಬೀದಿಗೆ ಬಿದ್ದಿದ್ದಾರೆ. #avintvcom

ಬಾಗಲಕೋಟೆ ಬ್ರೇಕಿಂಗ್
ಯಾವುದೇ ನೋಟಿಸ ನೀಡದೇ ಬಡಜನರ ಮನೆಗಳನ್ನು ತೆರವುಗೊಳಿಸಿದ ಸರ್ಕಾರ
ಸುಮಾರು ಇಪ್ಪತ್ತಕ್ಕೂ ಹೆಚ್ಚು ಮನೆಗಳನ್ನು ಕಳೆದುಕೊಂಡ ಬಡವರು ಬೀದಿಗೆ ಬಿದ್ದಿದ್ದಾರೆ.
ಹೌದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ನಡೆದ ಘಟನೆ
ಬುಧವಾರ ನಸುಕಿನ ಜಾವ 5 ಗಂಟೆಗೆ ಜಮಖಂಡಿ ತಾಲೂಕು ಆಡಳಿತ ಯಾವುದೇ ನೋಟಿಸ ನೀಡದೆ ತೆರವು ಕಾರ್ಯಾಚರಣೆ ನಡೆಸಿದರು.
ನಸುಕಿನ ಚಳಿಯಲ್ಲಿ ಚಿಕ್ಕಮಕ್ಕಳು ಹಾಗು ವೃದ್ಧರು ಮನೆ ಕಳೆದುಕೊಂಡು ಚಳಿ ತಾಳಲಾರದೆ ನಡುಗುತ್ತಾ ಬೀದಿಯಲ್ಲಿ ನಿಂತಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಸುಮಾರು 20 ವರ್ಷಗಳ ಹಿಂದೆ ಸರ್ಕಾರಿ ಗಾಂವಟನ ಜಾಗದಲ್ಲಿ ಬಡವರು ಮನೆ ಕಟ್ಟಿಕೊಂಡು ಕೂಲಿನಾಲಿ ಮಾಡುತ್ತಾ ವಾಸಿಸುತ್ತಿದ್ದರು. ಸರ್ಕಾರಿ ಕ್ರೀಡಾಂಗಣ ಮಾಡುವ ಉದ್ದೇಶದಿಂದ ಮನೆ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಬೇಜವಬ್ದಾರಿತನ ಉತ್ತರ ನೀಡುತ್ತಿದ್ದಾರೆ.
ಬಡವರು ವಾಸವಿದ್ದ ಮನೆ ತೆರುವುಗೊಳಿಸಿ ಕ್ರೀಡಾ ಮೈದಾನ ಮಾಡಿವ ಉದ್ದೇಶವಾದರೂ ಏನಿತ್ತು ಎಂಬುವುದು ಗ್ರಾಮಸ್ಥರ ಆರೋಪ.
ತೆರುವು ಕಾರ್ಯಾಚರಣೆಯಲ್ಲಿ ತಹಶೀಲ್ದಾರ ಸಂಜಯ ಇಂಗಳೆ ಇದ್ದರು.