AVIN TV

Latest Online Breaking News

ಕಾರ್ಯದರ್ಶಿಯಾದ ಮೊಹಮ್ಮದ್ ಮೊಹಸಿನ್ ಅವರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು #avintvcom

Featured Video Play Icon

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಉಸ್ಮಾನ ಪಟೇಲ್ ಅವರ ಅಧ್ಯಕ್ಷತೆಯಲ್ಲಿರುವ ಪಟೇಲ್ ಹೆಲ್ತ್ ಕೇರ್ ಆಸ್ಪತ್ರೆ ಮುಂದೆ ಮಾನ್ಯ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಹಾಗೂ ಪುನರ್ವಸತಿ ಪುನರ್ ನಿರ್ಮಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾದ ಮೊಹಮ್ಮದ್ ಮೊಹಸಿನ್ ಅವರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಮಹಮ್ಮದ್ ಮೋಸಿನ್ ಅವರು ತಾವು ನಡೆದುಕೊಂಡ ಬಂದ ಹಾದಿ ಹಾಗೂ ಹುಟ್ಟೂರು ಮತ್ತು ವಿಜಯಪುರಕ್ಕೆ ಇರುವಂತಹ ಸಂಬಂಧದ ಬಗ್ಗೆ ವಿವರಣೆ ನೀಡಿದರು ಹಾಗೂ ಕೊಲ್ಹಾರ ನೂತನ ತಾಲೂಕು ರಚನೆಯಾಗಲು ತಮ್ಮ ಸಹಾಯ ಸಲಹೆ ಇದೆಯೆಂದು ಹೇಳಿದರು ಮತ್ತು ಈಗಿನ ತಾಲೂಕು ಕಚೇರಿಗಳು ಆಗಲು ನನ್ನಿಂದ ಯಾವುದೇ ಸಹಾಯ ಬೇಕಾದರೂ ತಮಗೆ ಮಾಡುತ್ತೇನೆಂದು ಕೋಲಾರಕ್ಕೆ ಕೂಡ ಇರುವಂತಹ ಒಳ್ಳೆಯ ಸಂಬಂಧದ ಬಗ್ಗೆ ಹೇಳಿದರು ಮತ್ತು ನನಗೆ ತಂದೆ-ತಾಯಿಯವರು ನನಗೆ ಯಾವುದೇ ಆಸ್ತಿ ಮಾಡಿಲ್ಲ ಕೇವಲ ನನಗೆ ಒಳ್ಳೆಯ ಶಿಕ್ಷಣ ಕೊಟ್ಟು ಈ ಮಟ್ಟಕ್ಕೆ ಬೆಳೆಯಲು ಕಾರಣರಾಗಿದ್ದಾರೆ ಹಾಗೆಯೇ ನೀವು ಕೂಡ ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಮಕ್ಕಳನ್ನೇ ಆಸ್ತಿ ಮಾಡಿ ಅವರು ಕೂಡ ಉನ್ನತ ಹುದ್ದೆ ಅಲಂಕರಿಸಲು ಒಳ್ಳೆಯ ಶಿಕ್ಷಣ ಕೊಡಿಸಿ ಎಂದರು ಮತ್ತು ಈ ವೇಳೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಮಾನ್ಯ ಉಸ್ಮಾನ್ ಪಟೇಲ್ ಖಾಣ್ಣವರ ಅತಿ ವಿಶ್ವಾಸ ಹಾಗೂ ಧೈರ್ಯದಿಂದ ಹೇಳಬೇಕಾದರೆ ವಿಜಯಪುರ ಜಿಲ್ಲಾಧಿಕಾರಿಯಾಗಿದ್ದಾಗ ಅವರು ಮಾಡಿದಂತ ಅಭಿವೃದ್ಧಿ ಕೆಲಸಗಳಿಗೆ ಅವರಿಗೆ ಇನ್ನು ಆದರೂ ಸಹಿತ ವಿಜಯಪುರದಲ್ಲಿ ಕೆಲಸಗಳಿಗೆ ಹೆಸರುವಾಸಿ ಯಾರಾದರೂ ಇದ್ದರೆ ಮೊಹಮ್ಮದ್ ಮೋಸಿನ್ ಸಾಹೇಬರು ಎಂದು ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಹಾಗೂ ನಮ್ಮ  ಜುಮನ್ ಸಂಸ್ಥೆ ಈ ಮಟ್ಟಕ್ಕೆ  ಬೆಳೆಯಬೇಕಾದರೆ ನನಗೆ ಮಹಮ್ಮದ್ ಮೋಸಿನ್ ಸಾಹೇಬರ ಸಲಹೆ ಸಹಕಾರ ಬಹಳ ದೊಡ್ಡದಾಗಿದೆ ಎಂದರು

ಮತ್ತು ಕರ್ನಾಟಕದಲ್ಲಿ ಬಿಜೆಪಿ ಸರಕಾರವಿದ್ದರೂ ಕೂಡ ಅವರಿಗೆ ದಿಟ್ಟತನ ಪ್ರಮಾಣಿಕತೆ ಸಾಹಸಕ್ಕೆ ಮೆಚ್ಚಿ ಅವರಿಗೆ ಪ್ರಧಾನಕಾಯದರ್ಶಿ ಹುದ್ದೆ  ಕೊಟ್ಟಿದ್ದಕ್ಕೆ ಸರಕಾರಕ್ಕೂ ಕೂಡ ಧನ್ಯವಾದ ಹೇಳುತ್ತೇನೆ ಎಂದರು

ನಂತರ ಕೊನೆಯಲ್ಲಿ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಮಾತನಾಡಿ ಮಹಮ್ಮದ್ ಮೋಸಿನ್ ಅವರು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಹಾಗೂ ಅವರ ಮಠಕ್ಕೆ ಬಂದ ಅನುದಾನ ನೋಡಲು ಬೆಂಗಳೂರು ಕ್ಕೆ ಹೋದಾಗ ಬರಿ ಸ್ವಾಮಿಗಳ ಕೊಂದರು ಎಂದು ಎದ್ದು ನಿಂತಾಗ ಅವರ ಸರಳತೆ ಹಾಗೂ ಅವಸರ ಜೀವಿ ಎಂಬುದು ಮತ್ತು ಪ್ರಮಾಣಿಕರು ಎಂದು ಅವರ ಬಗ್ಗೆ ಒಳ್ಳೆಯ ಅಭಿಪ್ರಾಯದ ನುಡಿಗಳನ್ನು ಹೇಳಿದರು ಕೊಲ್ಹಾರ  ಪಟ್ಟಣ ಪುನರ್ವಸತಿಯ  ಮುಳುಗಡೆಯ ಅನುದಾನದಲ್ಲಿ ಆದಂತ ಅನ್ಯಾಯವನ್ನು ಸರಿಪಡಿಸುತ್ತಾರೆ ಎಂದರು  ಈ ವೇಳೆಯಲ್ಲಿ ಅನೇಕ ಮುಖಂಡರು ಊರಿನ ಪ್ರಮುಖರು ಅಲ್ಪಸಂಖ್ಯಾತ ಶಿಕ್ಷಕರ ಸಂಘದಿಂದ  ಹಾಗೂ ಕಂದಾಯ ಇಲಾಖೆ ಅವರಿಂದ ಅವರಿಗೆ ಸನ್ಮಾನ ಮಾಡಿದರು ಈ ಕಾರ್ಯಕ್ರಮದಲ್ಲಿ ಊರಿನ ಪ್ರಮುಖರಾದ ಚಂದ್ರಶೇಖರಯ್ಯ ಗಣಕುಮಾರ್ ಶ್ರೀಶೈಲ್ ಪತಂಗಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷಾದ ಈರಣ್ಣ ಕುಮಾರ್ ನಬೀಸಾಬ್ ಹೊನ್ಯಾಳ ಕಾರ್ಯಕ್ರಮದ ನಿರೂಪಣೆಯನ್ನು ಪತ್ರಕರ್ತರಾದ ಪರಶುರಾಮ್ ಗಣಿ ಅವರು ನಿರ್ವಹಿಸಿದರು ನೂರಾರು ಜನರು ಉಪಸ್ಥಿತರಿದ್ದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!