ಬೆಂಗಳೂರಿನ ಯಲಹಂಕದಲ್ಲಿರುವ ಮಾತೃ ವಿಶೇಷ ಮಕ್ಕಳ ಕಲಿಕಾ ಕೇಂದ್ರಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ #avintvcom
ಬೆಂಗಳೂರು
“ವಿಶೇಷ ಮಕ್ಕಳ ಬಾಳು ಹಸನಾಗಿಸಲು ಸದಾ ಸಿದ್ಧ”
ಬೆಂಗಳೂರಿನ ಯಲಹಂಕದಲ್ಲಿರುವ ಮಾತೃ ವಿಶೇಷ ಮಕ್ಕಳ ಕಲಿಕಾ ಕೇಂದ್ರಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಭೇಟಿ ನೀಡಿ ಕೊರೊನಾ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಶಾಲೆಗಳು ಪುನರಾರಂಭಗೊಂಡ ಸಲುವಾಗಿ ಕಲಿಕಾ ಕೇಂದ್ರದಲ್ಲಿ ದೀಪ ಬೆಳಗಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ನಂದಾದೀಪದಂತೆ ಪ್ರಜ್ವಲಿಸಲಿ ಎಂದು ಹಾರೈಸಿದರು. ನಂತರ ಶಾಲಾ ಮೂಲಸೌಕರ್ಯ ವ್ಯವಸ್ಥೆಯನ್ನು ಪರಿಶೀಲಿಸಿ, ಅಲ್ಲಿನ ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿದರು. ಬಳಿಕ ಮಕ್ಕಳ ದೈಹಿಕ ಶಿಕ್ಷಣ ಚಟುವಟಿಕೆಗಳಿಗೆ ಸಂಬಂಧಿಸಿದ ಒಳಾಂಗಣ ಹಾಗೂ ಹೊರಾಂಗಣ ಆಟೋಟದ ವ್ಯವಸ್ಥೆಯನ್ನು ವೀಕ್ಷಿಸಿದರು.
ವಿಶೇಷ ಪುಟಾಣಿಗಳು ಭಗವಂತನ ಮಕ್ಕಳು. ಅಂಗವೈಕಲ್ಯತೆ ಅನ್ನೋದು ಶಾಪವಲ್ಲ. ಇಂತಹ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿ, ಅವರನ್ನು ಸಶಕ್ತರನ್ನಾಗಿಸುವುದೇ ನಮ್ಮ ಧ್ಯೇಯವಾಗಿದೆ. ಮುಗ್ಧ ಮನಸ್ಸಿನ ವಿಶೇಷ ಮಕ್ಕಳಿಗೆ ಆರೋಗ್ಯ, ಪೋಷಣೆ, ಶಿಕ್ಷಣ ಅತ್ಯಗತ್ಯವಾಗಿದೆ. ಹೀಗಾಗಿ ಅವರ ಬಾಳು ಪ್ರಜ್ವಲಿಸಲು ನಮ್ಮ ಸೇವೆ ಸದಾ ಇರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲಿಕಾ ಕೇಂದ್ರದ ಅಧ್ಯಕ್ಷರಾದ ಶ್ರೀ ಎಸ್.ಶಂಕರಪ್ಪ, ವ್ಯವಸ್ಥಾಪಕ ಟ್ರಸ್ಟಿಗಳಾದ ಶ್ರೀಮತಿ ಮುಕ್ತಾ, ಸಲಹಾ ಸಮಿತಿಯ ಸದಸ್ಯರಾದ ಶ್ರೀ ಗುರುಪ್ರಸಾದ್, ಶ್ರೀ ಚಂದ್ರಶೇಖರ್ ಪುಟ್ಟಪ್ಪ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
“विशेष मुलांचे जीवन घडवण्यासाठी सदा सज्ज”
बेंगळूरुच्या यलहंका येथील भाषा विशेष मुलांच्या केंद्राची राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी भेट दिली. कोरोनाच्या काळात बंद झालेल्या शाळा पुन्हा सुरू करण्यासाठी शिक्षण केंद्रात दीप प्रज्वलन करून विद्यार्थ्यांचे भविष्य उज्वल करण्यास सांगितले. मग शालेय पायाभूत सुविधांचा आढावा घेतला आणि येथील कर्मचाऱ्यांशी सल्लामसलत केली. नंतर मुलांच्या शारीरिक शिक्षणविषयक उपक्रमांशी संबंधित मैदानी खेळांच्या प्रणाली पहिल्या गेल्या.
विशेष पृष्ठे परमेश्वराची मुले आहेत. अपंगत्व हा शाप नाही. अशा मुलांना प्रेरणा आणि सशक्त बनविणे हे आमचे ध्येय आहे. निरपराध मनाच्या खास मुलांसाठी आरोग्य, पोषण आणि शिक्षण आवश्यक आहे. आमची सेवा त्यांचे जीवन उजळ करण्यासाठी नेहमीच असते असे सांगीतले.
यावेळी शिक्षण केंद्राचे अध्यक्ष श्री. एस. शंकरप्पा व्यवस्थापकीय ट्रस्टी श्रीमती. मुक्ता, सलाहा समितीचे सदस्य श्री. गुरुप्रसाद, श्री. चंद्रशेखर पुट्टप्पा आणि सल्लागार समितीचे सदस्य व कर्मचारी उपस्थित होते.