AVIN TV

Latest Online Breaking News

ನೀರು ಸಂರಕ್ಷಣೆ ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಸಮುದಾಯ ವಂತಿಗೆ ಸಂಗ್ರಹಣೆ ಅಭಿಯಾನ ನಡೆಸಲಾಯಿತು #avintvcom

Featured Video Play Icon

ಬೀದರ್ ಜಿಲ್ಲೆಯ ಔರಾದ್ ತಾಲೂಕ

**ವಿಜಯ ಎಮ್.ಎಸ್

ಔರಾದ್ ಬಾ**

ಔರಾದ ತಾಲೂಕಿನ ವಾಡಗಂವ್ ಗ್ರಾಮ ಪಚಾಯತ್ ವ್ಯಾಪ್ತಿಯಲ್ಲಿ ಬರುವ ಸೋರಳಿ ಗ್ರಾಮದಲ್ಲಿ ಲಾಲ ಬಹಾದ್ದೂರ ಎಜುಕೇಷನ್ ಸೊಸೈಟಿ ವತಿಯಿಂದ, ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಸಂರಕ್ಷಣೆ ಅರಿವು  ಮೂಡಿಸುವ ಕಾರ್ಯಕ್ರಮ ಹಾಗೂ ಸಮುದಾಯ ವಂತಿಗೆ ಸಂಗ್ರಹಣೆ ಅಭಿಯಾನ ನಡೆಸಲಾಯಿತು.

ಕಾರ್ಯಕ್ರಮ ದಲ್ಲಿ ಜೆ ಜೆ ಎಮ್ ತಂಡದ ನಾಯಕರು ಡಾಕ್ಟರ್ ನಂದಕುಮಾರ್ , ಅವರು ಮಾತನಾಡಿ ಯೋಜನೇಯ ಅಡಿ ಪ್ರತಿ ಮನೆ ಮನೆ  ಶುದ್ಧ ಕುಡಿಯುವ ನಲ್ಲಿ ನೀರಿನ ವ್ಯವಸ್ಥೆ ಆಗುತ್ತಿದೆ ಈಗಾಗಲೇ ಕಾಮಗಾರಿ ಚಾಲನೆಯಲ್ಲಿದೆ, ಸಮುದಾಯದ ಸಹಭಾಗಿತ್ವದೊಂದಿಗೆ ಮಾಡುತ್ತಿರುವ ಕೆಲಸವಿದು, ಪ್ರತಿಯೊಬ್ಬರೂ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು, 10 ಪ್ರತಿಶತ ಸಮುದಾಯ ವಂತಿಗೆ ಸಂಗ್ರಹಣೆ ಮಾಡಬೇಕು, ಕುಡಿಯುವ ನೀರು ಪೊಲು ಮಾಡುವದನ್ನು ನಿಲ್ಲಿಸಿ ಮುಂದಿನ ಪೀಳಿಗೆಗೆ ನೀರು ಉಳಿಸಿ ಎಂದು ಹೇಳಿದರು, ನಂತರ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಅನಿಲಕುಮಾರ ಮಾತನಾಡಿ ಯೋಜನೆ ಬಗ್ಗೆ ಮಾಹಿತಿ ನೀಡಿ ಸಮುದಾಯ ವಂತಿಗೆ ಸಂಗ್ರಹಿಸಲು ವಿನಂತಿ ಮಾಡಿಕೊಂಡರು ಹಾಗೂ ಬಚ್ಚಲು ಗುಂಡಿ ಪ್ರತಿ ಮನೆ ಮನೆಗೆ ಹಾಕಿಸಿಕೊಳ್ಳಲು ಹೇಳಿದರು, ಈ ದಿವಸ ಒಟ್ಟು 6500 ರೂ ಸಮುದಾಯ ವಂತಿಗೆ ಜಮೆ ಮಾಡಲಾಯಿತು.   ಕಾರ್ಯಕ್ರಮಕ್ಕೆ  ಜೆ ಜೆ ಎಮ್ ತಂಡದ ನಾಯಕರು ಡಾಕ್ಟರ್ ನಂದಕುಮಾರ್ ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿಲಕುಮಾರ ಅವರು, ಕಾರ್ಯದರ್ಶಿ ಮಾರುತಿ ಅವರು, ಜೇ ಜೇ ಏಮ್ ತಂಡದ ಅಭಿಯಂತರು ಸಚ್ಚಿದಾನಂದ ಹಾಗೂ ಓಂಕಾರ, ಅಂಗನಾವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಗ್ರಾಮಪಂಚಾಯತ್ ಸದಸ್ಯರು ಸಮುದಾಯದ ಸದಸ್ಯರು ಉಪಸ್ಥಿತರಿದರು, ಕಾರ್ಯಕ್ರಮಕ್ಕೆ ದಿಲೀಪ ( ಸಮಾಜ ಅಭಿವೃದ್ಧಿ ಪರಿಣತರು) ಸ್ವಾಗತ ಭಾಷಣ ಮಾಡಿದರು ಹಾಗೂ ಅಮರನಾಥ ಬಿರಾದಾರ (ಐ ಇ ಸಿ ಪರಿಣಿತರು) ಕಾರ್ಯಕ್ರಮಕ್ಕೆ ವಂದನೆ ಹೇಳಿದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

October 2021
M T W T F S S
 123
45678910
11121314151617
18192021222324
25262728293031
error: Content is protected !!