ಪ್ರಪಂಚದಾದ್ಯಂತ ತಲ್ಲಣ ಎಬ್ಬಿಸಿ,ದೇಶಾದ್ಯಂತ ಗಾಬರಿ ಮೂಡಿಸಿದ್ದ ಮಹಾಮಾರಿ COVID -19 ಗೆ ಸ್ವದೇಶಿ ಲಸಿಕೆ #avintvcom

ಮೂಡಿಗೆರೆ ಸ್ಕೌಟ್ ಮತ್ತು ಗೈಡ್ಸ್ ಸಾದನೆಯ ಒಂದು ನೊಟ…..
ಪ್ರಪಂಚದಾದ್ಯಂತ ತಲ್ಲಣ ಎಬ್ಬಿಸಿ,ದೇಶಾದ್ಯಂತ ಗಾಬರಿ ಮೂಡಿಸಿದ್ದ ಮಹಾಮಾರಿ COVID -19 ಗೆ ಸ್ವದೇಶಿ ಲಸಿಕೆ ಸಿದ್ಧವಾಯಿತು.ಜನರ ದುಗುಡ ದೂರವಾಗೋ ಕಾಲ ಸನ್ನಿಹಿತವಾಯಿತು.ಜಿಲ್ಲಾಡಳಿತ ಚಿಕ್ಕ ಮಗಳೂರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕ್ಕಮಗಳೂರು, ತಾಲೂಕು ಸಾರ್ವಜನಿಕ ಆಸ್ಪತ್ರೆ ಮೂಡಿಗೆರೆ ವತಿಯಿಂದ ದಿನಾಂಕ 08/01/2021 ರಂದು ಕೋವಿದ್- 19 ಮಾದರಿ ಲಸಿಕಾ ಕೇಂದ್ರವನ್ನು
ಉದ್ಘಾಟಿಸಲಾಯಿತು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರಾಣೇಶ್ ಉಪಸ್ಥಿತರಿದ್ದರು. ಶಾಸಕರಾದ ಶ್ರೀ ಕುಮಾರಸ್ವಾಮಿ, ತಾಲೂಕ್ ಪಂಚಾಯಿತಿ ಅದ್ಯಕ್ಸರಾದ ಬಾರತಿರವೀಂದ್ರ.ಮಾಜಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಕೆ.ಸಿ ರತನ್ ,
ಟಿ ಎ ಪಿ ಸಿ ಎಮ್ ಎಸ್ ಅದ್ಯಕ್ಷರಾದ ಜಯಂತ್ ,ತಾಲೂಕು ವೈದ್ಯಾಧಿಕಾರಿಗಳು,ಆಸ್ಪತ್ರೆಯ ಸಿಬಂಧಿಗಳು ಉಪಸ್ಥಿತರಿದ್ದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಗ್ಗಲಮಕ್ಕಿಗಣೇಶ. ಮೂಡಿಗೆರೆಯ ಸ್ಕೌಟ್ ಮಾಸ್ಟರ್ ಶ್ರೀ ಚೇತನ್ ಎಚ್.ಸಿ.
ಮತ್ತಿತರರು ಭಾಗವಹಿಸಿದ್ದರು.
ಕೊವಿಡ್ ಮಹಾಮಾರಿ ಬಂದಾಗ ಮೂಡಿಗೆರೆಯ ಎಲ್ಲಾ ಕಡೆ ಸರ್ಕಾರದ ಜೊತೆ ಸೇರಿ ಜೀವದ ಹಂಗು ತೊರೆದು ಸ್ವಯಂ ಸೇವಕ ರಾಗಿ ಸೇವೆ ಸಲ್ಲಿಸಿದ್ದಾರೆ.
ಮುಂದೆಯೂ ಸಹ ದೇಶಕ್ಕೆ ಆಪತ್ತು ಬಂದಾಗ ನಮ್ಮ ಸಂಸ್ಥೆಯ ಸಹಕಾರ ಸದಾ ಇರುತ್ತದೆ ಎಂದರು.ಎಂತಹ ಕಠಿಣ ಪರಿಸ್ಥಿತಿಯಲ್ಲೂ ನಮ್ಮ ಸಹಕಾರ ಇದೆ ಎಂದರು
ವರದಿ.
ಮಗ್ಗಲಮಕ್ಕಿಗಣೇಶ.
ಬ್ಯೂರೊ ನ್ಯೂಸ್.