AVIN TV

Latest Online Breaking News

ಕೋವಿಡ್-19 ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಬಂದ್ ಆಗಿದ್ದ ಶಾಲಾ-ಕಾಲೇಜುಗಳು ಪುನಾರಾರಂಭಗೊಂಡ ಹಿನ್ನಲೆ…#avintvcom

ಬೆಂಗಳೂರು

“ಶ್ರವಣದೋಷ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿ”

ಕೋವಿಡ್-19 ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಬಂದ್ ಆಗಿದ್ದ ಶಾಲಾ-ಕಾಲೇಜುಗಳು ಪುನಾರಾರಂಭಗೊಂಡ ಹಿನ್ನಲೆಯಲ್ಲಿ, ಇಂದು ಬೆಂಗಳೂರಿನ ಲಿಂಗರಾಜಪುರಂನಲ್ಲಿರುವ, ಡಾ. ಎಸ್.ಆರ್ ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರುಭೇಟಿ ನೀಡಿದರು. ಈ ವೇಳೆ ಅಲ್ಲಿನ ಶಾಲಾ ಮಕ್ಕಳು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಸಂಸ್ಥೆಯ ಮೂಲಸೌಕರ್ಯ ವ್ಯವಸ್ಥೆಯನ್ನು ಪರಿಶೀಲಿಸಿ, ಸಿಬ್ಬಂದಿ ವರ್ಗದ ಜತೆ ಸಮಾಲೋಚನೆ ನಡೆಸಿದರು. ನಂತರ ಮಕ್ಕಳ ಶೈಕ್ಷಣಿಕ ಚಟುವಟಿಕೆ ಹಾಗೂ ಅವರು ತಯಾರಿಸಿದ ಕರಕುಶಲ ವಸ್ತುಗಳನ್ನು ವೀಕ್ಷಿಸಿ, ಅವರ ಪ್ರತಿಭೆ ಉತ್ತುಂಗದ ಶಿಖರಕ್ಕೇರಲಿ ಎಂದು ಹಾರೈಸಿದರು.

ಶಬ್ಧ ಜಗತ್ತಿನ ಪರಿಚಯವೇ ಇಲ್ಲದ ಇಂತಹ ಮಕ್ಕಳಿಗೆ ಆತ್ವವಿಶ್ವಾಸವೊಂದೇ ಆಧಾರ. ಹೀಗಾಗಿ ಇಂತಹ ಮಕ್ಕಳ ಆರೋಗ್ಯ, ಪೋಷಣೆ, ಶಿಕ್ಷಣ ಹಾಗೂ ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮ ಜವಾಬ್ದಾರಿ. ಅವರಿಗೆ ಉತ್ತಮ ಶಿಕ್ಷಣ, ಆತ್ಮಸ್ಥೈರ್ಯ ತುಂಬಿ, ಅವರನ್ನು ಸಮಾಜ ಮುಖ್ಯವಾಹಿನಿಗೆ ತರಬೇಕು. ಈ ನಿಟ್ಟಿನಲ್ಲಿ ಶ್ರವಣ ದೋಷ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ನಮ್ಮ ಶ್ರಮ ಅವಿರತವಾಗಿರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಶ್ರೀಮತಿ ಪದ್ಮಪ್ರಭಾ, ಆಡಳಿತಾಧಿಕಾರಿ ಜಯರಾಮ್ ಹಾಗೂ ಸಂಸ್ಥೆಯ ಸಿಬ್ಬಂದಿ  ಉಪಸ್ಥಿತರಿದ್ದರು.

“श्रवण दोष असणाऱ्या मुलांमध्ये आत्मविश्वास वाढावा”

कोविड -19 पार्श्वभूमीवर खबरदारीचा उपाय म्हणून बंद झालेल्या शाळा-महाविद्यालये पुन्हा सुरू झालेल्या पार्श्वभूमीवर आज बेंगळुरूच्या लींगराजपुरं येथील डॉ. एस.आर चंद्रशेखर वॉक आणि श्रवण संस्थेला राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी भेट दिली. याच दरम्यान तेथील शालेय मुलांनी मनापासून स्वागत केले  त्यानंतर संस्थेच्या पायाभूत सुविधांचा आढावा घेण्यासाठी कर्मचार्‍यांशी सल्लामसलत केली. नंतर मुलांच्या शैक्षणिक क्रियाकलाप आणि त्यांनी तयार केलेल्या हस्तकला पाहणी करून, त्यांची प्रतिभा उत्तुंग भरारी घेऊ अशा शुभेच्छा दिल्या.

शब्द जगाचा परिचित नसलेल्या अशा मुलांना आत्मविश्वास एकमात्र आधार आहे. यासाठी अशा मुलांचे आरोग्य, पोषण, शिक्षण आणि त्यांची कौशल्ये ओळखणे आणि प्रोत्साहित करणे ही आपली जबाबदारी आहे. त्यांना चांगला

शिक्षण, आत्मविश्वास वाढवून, त्यांना समाजाच्या मुख्य प्रवाहात आणण्याची गरज आहे. या पार्श्वभूमीवर श्रवण वंचित मुलांच्या विकासासाठी आमचा प्रयत्न राहील असे सांगितले.

यावेळी प्राचार्य सौ. पद्मप्रभा, प्रशासकीय अधिकारी जयराम व संस्थेचे कर्मचारी उपस्थित होते.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!