day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಅರಣ್ಯದಂಚಿನ ಪ್ರದೇಶ,ಕಾಫಿ ತೋಟಗಳಲ್ಲಿ ಕಾಣ ಸಿಗುತ್ತಿದ್ದ ಕಾಡಾನೆಗಳ ಹಿಂಡು ಇದೀಗ ನಗರ ಪ್ರದೇಶದತ್ತ #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಅರಣ್ಯದಂಚಿನ ಪ್ರದೇಶ,ಕಾಫಿ ತೋಟಗಳಲ್ಲಿ ಕಾಣ ಸಿಗುತ್ತಿದ್ದ ಕಾಡಾನೆಗಳ ಹಿಂಡು ಇದೀಗ ನಗರ ಪ್ರದೇಶದತ್ತ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ನಾಡಿನತ್ತ ಸಲಗ ಫ್ಯಾಮಿಲಿ

ಕೊಡಗು: ಅರಣ್ಯದಂಚಿನ ಪ್ರದೇಶ,ಕಾಫಿ ತೋಟಗಳಲ್ಲಿ ಕಾಣ ಸಿಗುತ್ತಿದ್ದ ಕಾಡಾನೆಗಳ ಹಿಂಡು ಇದೀಗ ನಗರ ಪ್ರದೇಶದತ್ತ ಕಂಡುಬರುತ್ತಿದೆ.ಕುಶಾಲನಗರ ಸಮೀಪದ ಸೀಗೆ ಹೊಸೂರಿಗೆ ಸೇರಿದ ಬಾಣಾವರ ಮೀಸಲು ಅರಣ್ಯ ಪ್ರದೇಶದಿಂದ ಕಣಿವೆ ಸೇತುವೆ ಬಳಿ ಕಾಣಿಸಿಕೊಂಡ ಕಾಡಾನೆಗಳಿಂದ ಸ್ಥಳೀಯರು ಆತಂಕಕ್ಕೆ ಈಡಾಗಿದ್ದಾರೆ.ಇನ್ನು ಏಕಾಏಕಿ ಆನೆಗಳು ಅಡ್ಡಾಡುತ್ತಿದ್ದ ಕಾರಣ ಕುಶಾಲನಗರ ಹಾಸನ ನಡುವೆ ಟ್ರಾಫಿಕ್ ಜಾಂ ಉಂಟಾಗಿತ್ತು.ಸೀಗೆಹೊಸೂರಿನ ಮುಖ್ಯರಸ್ತೆಯಲ್ಲೇ ಹಿಂಡಿನಿಂದ ಬೇರ್ಪಟ್ಟ ಒಂಟಿ ಸಲಗ ಅಡ್ಡದಿಡ್ಡಿ ಓಡಾಡುತ್ತಿದ್ದಲ್ಲದೆ, ಕಾವೇರಿ ನದಿ ತಟ ಕಣಿವೆ ಸೇತುವೆ ಬಳಿ ಗ್ರಾಮಸ್ಥರ ಚೀರಾಟದಿಂದ ದಿಕ್ಕಾಪಾಲಾಗಿತ್ತು. ಇನ್ನು ಇದೇ ಹಿಂಡಿನಲ್ಲಿ ಇದ್ದ ಕೆಲವು ಆನೆಗಳು ಚಿಕ್ಕಬೆಟ್ಟ ಪ್ರದೇಶದ ಮನೆ ಮೇಲೆ ದಾಳಿ ಮಾಡಿ,ದನದ ಕೊಟ್ಟಿಗೆ ನುಸುಳಿದ ವೇಳೆ ಹಸುವೊಂದಕ್ಕೆ ಗಾಯವಾಗಿದೆ, ಕೊಡಗು ಮೈಸೂರು ಗಡಿಯಾಗಿರುವ ಹಿನ್ನಲೆಯಲ್ಲಿ ಯಾವ ಜಿಲ್ಲೆಯ ಅರಣ್ಯ ಇಲಾಖೆಯವರು ಕಾರ್ಯಾಚರಣೆ ಮಾಡಬೇಕು ಎನ್ನುವಷ್ಟರಲ್ಲೇ ಹಲವು ನಷ್ಟಗಳು ಸಂಭವಿಸಿದ್ದು ಬಳಿಕ ಬಂದ ತಂಡ ಮೈಸೂರಿನ ಪಿರಿಯಾಪಟ್ಟಣದ ತಂಡ ಪಟಾಕಿ ಸಿಡಿಸಿ ಕಾಡಾನೆಗಳನ್ನು ಮತ್ತು ಕಾಡಿಗೆ ಓಡಿಸುವ ಕೆಲಸ ಮಾಡಿದರು.

About Author