ಕೋವಿಡ್ ನಿಯಮ ಗಾಳಿಗೆ ತೂರಿದ ಕುಡಚಿ ಶಾಸಕ ಪಿ ರಾಜೀವ್ ಹಾಗೂ mlc ಮಹಾಂತೇಶ್ ಕವಟಗಿಮಠ #avintvcom

ರಾಯಬಾಗ ವರದಿ.
ಕೋವಿಡ್ ನಿಯಮ ಗಾಳಿಗೆ ತೂರಿದ ಕುಡಚಿ ಶಾಸಕ ಪಿ ರಾಜೀವ್ ಹಾಗೂ mlc ಮಹಾಂತೇಶ್ ಕವಟಗಿಮಠ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಜನತಾ ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಚುನಾಯಿತರಾದ ನೂತನ ಸದಸ್ಯರಿಗೆ ಸತ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಗಿತ್ತು
ಕುಡಚಿ ಶಾಸಕ ಹಾಗೂ ತಾಂಡ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಪಿ. ರಾಜೀವ್ ಹಾಗೂ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ನೇತೃತ್ವದಲ್ಲಿ ನೂತನ ಗ್ರಾಮ ಪಂಚಾಯಿತಿ ಸದಸ್ಯ ರಿಗೆ ಸತ್ಕಾರವನ್ನು ಹಮ್ಮಿ ಕೊಳ್ಳಗಿತ್ತು
ಮಹಾಮಾರಿ ಕೊರೊನ ನಿರ್ವಹಣೆಗೆ ಸರಕಾರ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ
ಹಾಗೆಯೇ ಹೊಸ ತಲೆಮಾರಿನ ಕೋವಿಡ್ ದಿನೇ ದಿನೇ ತನ್ನ ಕರಾಳ ಛಾಯೆ ಮುಂದುವರಿಸುತ್ತಿದೆ
ಇಂತಹ ಸಂದರ್ಭದಲ್ಲಿ ಶಾಸಕರು ಕೋವಿಡನ ಯಾವುದೇ ನಿಯಮ ಪಾಲನೆ ಮಾಡದೆ ಸಾಮಾಜಿಕ ಅಂತರ ವಿಲ್ಲದೆ ನೂತನ ಸದಸ್ಯರಿಗೆ ಸತ್ಕರಿಸಿದ್ದಾರೆ
ಸ್ವತಹ ಶಾಸಕರು ಹಾಗೂ ಸರಕಾರದ ಮುಖ್ಯ ಸಚೇತಕರಾದ ಕವಟಗಿಮಠ ಮತ್ತು ವೇದಿಕೆ ಮೇಲೆ ಯಾರು ಸಹಿತ ಮಾಸ್ಕ ದರಿಸದೆ ಕಾರ್ಯಕ್ರಮ ನಡೆಸಿದ್ದಾರೆ
ಮೊನ್ನೆ ಮೊನ್ನೆಯಷ್ಟೇ ಗಾರೆ ಕೆಲಸ ಮಾಡುವ ಮಹಿಳೆ ಅತ್ತು ಅತ್ತು ಬೇಡಿಕೊಂಡಿದ್ದಾಳೆ ಅದು ಇಡೀ ರಾಜ್ಯಾದ್ಯಂತ ವಿಡಿಯೋ ವೈರಲ ಆಗಿರೋದನ್ನ ನೀವು ನೋಡಿದ್ದೀರಿ ದಿನದ ಕೂಲಿ ಬಿಡದೆ ಮಾಸ್ಕ್ ದರಿಸಿಲ್ಲ ಎಂದು ಅವಳಿಗೆ ದಂಡ ವಿಧಿಸಿದ್ದಾರೇ
ಹಾಗಾದ್ರೆ ಇವರಿಗೆ ಯಾರು ದಂಡ ವಿಧಿಸುವರು
ಎಲ್ಲೋ ಒಂದುಕಡೆ ಅನ್ನಿಸುತ್ತೆ ಬಡವರಿಗೆ ಒಂದು ಕಾನೂನು ಅಧಿಕಾರ ದಲ್ಲಿ ಇರುವಂತಹ ರಿಗೆ ಇನ್ನೊಂದು ಕಾನೂನು ಅಂತಾ ಇದು ಬಹಳ ವಿಪರ್ಯಾಸವಾಗಿದೆ
ವರದಿ ಪೀರು ನಂದೇಶ್ವರಃ ಬೆಳಗಾವಿ