AVIN TV

Latest Online Breaking News

ಶೋಷಿತ ಸಮುದಾಯ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆಯವರು- ಶಿಕ್ಷಕಿ ರೇಣುಕಾ ಬಡಕಂಬಿ. #avintvcom

Featured Video Play Icon

ಶೋಷಿತ ಸಮುದಾಯ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆಯವರು- ಶಿಕ್ಷಕಿ ರೇಣುಕಾ ಬಡಕಂಬಿ.

 

ಅಥಣಿ- ಸಾವಿತ್ರಿಬಾಯಿ ಪುಲೆ ಭಾರತದ ಇತಿಹಾಸದಲ್ಲಿ ಮಹಿಳಾ ಶಿಕ್ಷಣ ಪರವಾದಂತಹ ಕ್ರಾಂತಿಗಳ ಮೂಲಕ ಇತಿಹಾಸದಲ್ಲಿ ದಾಖಲಾಗಿದ್ದಾರೆ ತಮ್ಮ ಪತಿ ಜ್ಯೋತಿಬಾಪುಲೆಯವರ ಜೊತೆ ಸೇರಿ ಮಹಿಳೆಯರ ಹಾಗೂ ಶೋಷಿತರ ಶಿಕ್ಷಣಕ್ಕಾಗಿ ಶ್ರಮಿಸಿದರು ಮುಂದೆ ತಮ್ಮ ಜೀವನವನ್ನು ಬಹುಸಂಖ್ಯಾತ ಸಮುದಾಯದ ದಲಿತರು, ಮಹಿಳೆಯರು, ಆದಿವಾಸಿಗಳು, ಹಿಂದುಳಿದವರು, ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಮುಡಿಪಾಗಿಟ್ಟರು. ಆದರೆ ಅವರ ಈ ಎಲ್ಲ ಶೋಷಿತ ಸಮುದಾಯಗಳಿಗೆ ನೀಡಿರುವ ಕೊಡುಗೆಯನ್ನು ಸಾರ್ವಜನಿಕ ವಲಯ ಕಡೆಗಣಿಸಿದೆ ತಮ್ಮ ಪತಿ ಜೋತಿಭಾ ಫುಲೆ ಜೊತೆ ಸೇರಿ ಪ್ರಾರಂಭಿಸಿದ ಮೊದಲ ಹೆಣ್ಣು ಮಕ್ಕಳ ಶಾಲೆಗೆ ಮೊದಲ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದರು ಆದ್ದರಿಂದ ಅವರನ್ನು ಭಾರತದ ಮೊದಲ ಶಿಕ್ಷಕಿ ಎಂದು ಕರೆಯುತ್ತಾರೆ ಎಂದು ಶಿಕ್ಷಕಿ ರೇಣುಕಾ ಬಡಕಂಬಿ ಅವರು ಹೇಳಿದರು.

ಅವರು ಸ್ಥಳೀಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಆವರಣದಲ್ಲಿ ಫುಲೆಬ್ರಿಗೇಡ್ ಅಥಣಿ ವತಿಯಿಂದ ಹಮ್ಮಿಕೊಂಡ ಸಾವಿತ್ರಿಬಾಯಿ ಫುಲೆ ಅವರ ೧೩೦ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡುತ್ತಾ ಮೇಲ್ವರ್ಗದ ಜನರು ಸಾವಿತ್ರಿಬಾಯಿಯವರು ಒಬ್ಬ ಮಹಿಳೆ ಮತ್ತು ಹಿಂದುಳಿದ ವರ್ಗದವಳು ಎನ್ನುವ ಕಾರಣಕ್ಕಾಗಿ ಅವರ ಮೇಲೆ ಕೆಸರನ್ನು ಎಸೆದರು. ಆದರೆ ಇದ್ಯಾವುದೂ ಕೂಡಾ ಅವರನ್ನು ಸಾಮಾಜಿಕ ಸುಧಾರಣೆ ಯತ್ನದಿಂದ ಹಿಂದೆ ಸರಿಯಲಿಲ್ಲ ಸಾವಿತ್ರಿ ತಾಯಿ ಯವರ ಕಲಿಕೆಯ ಭೋಧನಾ ಮಾದರಿಯು, ಪಾಲ್ಗೊಳ್ಳುವಿಕೆ, ಸೃಜನಶೀಲತೆಯಿಂದ ಕೂಡಿತ್ತು, ಆಗ ಅಸ್ತಿತ್ವದಲ್ಲಿದ್ದ ವೈದಿಕ ಶಾಹಿವ್ಯವಸ್ಥೆಯ ಪ್ರತಿಬಂಧಕ ಕಲಿಕೆಗಿಂತ ಭಿನ್ನವಾಗಿತ್ತು ಎಂದು ಹೇಳಿದರು.

ನಂತರ ಇನ್ನೋರ್ವ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಮಾಲಾ ಖಲಾಟೆ ಅವರು ಸಾಮಾಜಿಕ ಬದಲಾವಣೆಯನ್ನು ತಳಮಟ್ಟದಿಂದಲೇ ಬದಲಾಗಬೇಕೆಂದು ಬಯಸಿದ್ದ ಸಾವಿತ್ರಿಬಾಯಿ ಅವರು ಆಗಿನ ಕಟು ಸಂಪ್ರದಾಯ ನೀತಿ ಪದ್ಧತಿಗಳನ್ನು ತಿರಸ್ಕರಿಸಿದರು. ಅವರ ಕಾರ್ಯಗಳಿಗೆ ಪತಿ ಜ್ಯೋತಿ ಬಾಫುಲೆ ಬೆಂಬಲವಾಗಿ ನಿಂತರು. ಸಾವಿತ್ರಿಬಾಯಿಯವರು ಹಳೆಯ ಸಂಪ್ರದಾಯಗಳಿಗೆ ಅಂತ್ಯಹಾಡಿ, ಅಂತರಜಾತಿ ವಿವಾಹವನ್ನು ಪ್ರೋತ್ಸಾಹಿಸಿ ಅಂತ ದಂಪತಿಗಳಿಗೆ ಆಶ್ರಯವನ್ನು ನೀಡಿದರು. ತಮ್ಮ ಸಮಾಜ ಕಾರ್ಯದ ಭಾಗವಾಗಿ ಶಾಲಾ ಸಂಸ್ಥೆ . ಮಹಿಳಾ ಸೇವಾ ಮಂಡಳ(೧೮೫೨) ,ರೈತ ಮತ್ತು ಕಾರ್ಮಿಕರಿಗಾಗಿ ರಾತ್ರಿ ಶಾಲೆ(೧೮೫೫), ಅನಾಥ ಆಶ್ರಮ(೧೮೬೩), ಶಿಶು ಹತ್ಯೆ ನಿಷೇಧದ ಆಶ್ರಮ(೧೮೫೩), ಭೀಕರ ಬರಗಾಲ ನಿರ್ವಹಿಸಲು ಆಹಾರ ಕೇಂದ್ರಗಳ ಸ್ಥಾಪನೆ(೧೮೭೫-೭೭), ಈ ಮೂಲಕ ಅವರು ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಬರಪರಿಹಾರದಂತಹ ಸಮಾಜ ಸುಧಾರಣೆಯಂತಹ ಕಾರ್ಯಗಳನ್ನು ಕೈಗೊಂಡರು ಎಂದು ಹೇಳಿದರು.

ನಂತರ ಸಮಾರಂಭದಲ್ಲಿ ನೂತನವಾಗಿ ಗ್ರಾ.ಪಂ ಸದಸ್ಯರಾಗಿ ಆಯ್ಕೆಯಾದ ಫುಲೆಬ್ರಿಗೇಡ್ ಸದಸ್ಯರಾದ ಪರಶುರಾಮ ಸೋನಕರ, ಸುಧಾ ದಿವಾನಮಳ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಕಾರ್ಯಕ್ರಮದಲ್ಲಿ ಮಾಳಿ ಸಮಾಜದ ಮುಖಂಡರಾದ ಸಂತೋಷ ಬಡಕಂಬಿ, ರವಿ ಬಡಕಂಬಿ, ರಮೇಶ ಮಾಳಿ, ಬಸವರಾಜ ಹಳ್ಳದಮಳ, ಗಿರೀಶ ದಿವಾನಮಳ, ಅನೀಲ ತೆವರಟ್ಟಿ, ನಾಗಪ್ಪಾ ಉಗಾರೆ, ಮಲ್ಲಿನಾಥ ಪ್ಯಾಟಿ, ಅರುಣ ಬಡಕಂಬಿ, ಸಿದ್ದು ಹೊನ್ನೋಳ್ಳಿ, ಪ್ರವೀಣ ಮಾಳಿ, ಶ್ರೀಶೈಲ ಬಡಕಂಬಿ, ಶಂಕರ ಬಡಕಂಬಿ, ಶ್ರೀಕಾಂತ ಬಡಕಂಬಿ, ಪುಂಡಲೀಕ ಮಾಳಿ, ಕಿರಣ ಮಾಳಿ, ಅರುಣ ಚಮಕೇರಿ, ಪರಶುರಾಮ ಭಂಗಿ, ಮಹಾಂತೇಶ ಭಾಸಿಂಗಿ, ಶಿವಪ್ಪಾ ಹಲವೇಗಾರ, ನಾಗರಾಜ ತೆವರಟ್ಟಿ, ಮಹಾಂತೇಶ ಬಡಕಂಬಿ, ಸಂತೋಷ ಗೊಂಧಳಿ, ಮಹಾಂತೇಶ ಮಾಳಿ, ಮಹಾದೇವ ಚಮಕೇರಿ, ಮುರುಗೇಶ ಮೋಳೆ, ಸದಾಶಿವ ಲಗಳಿ, ಪ್ರೇಮಾ ಬುಟಾಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕ ಸಂತೋಷ ಬಡಕಂಬಿ ನಿರೂಪಿಸಿ ವಂದಿಸಿದರು.

ಪೊಟೊ ಶೀರ್ಷಿಕೆ- ಫುಲೆಬ್ರಿಗೇಡ್ ಅಥಣಿ ವತಿಯಿಂದ ಹಮ್ಮಿಕೊಂಡ ಸಾವಿತ್ರಿಬಾಯಿ ಫುಲೆ ಅವರ ೧೩೦ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಳಿ/ಮಾಲಗಾರ ಸಮುದಾಯವರು(೦೩ಅಥಣಿ-

 

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!