AVIN TV

Latest Online Breaking News

ನಿಪ್ಪಾಣಿ ಮತಕ್ಷೇತ್ರದ ಗಾಯಕನವಾಡಿ ಗ್ರಾಮಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ #avintvcom

Featured Video Play Icon

ಗಾಯಕನವಾಡಿ

ನಿಪ್ಪಾಣಿ ಮತಕ್ಷೇತ್ರದ ಗಾಯಕನವಾಡಿ ಗ್ರಾಮಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೇಟಿ ನೀಡಿ, ಗಣೇಶ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ, ಗಾಯಕನವಾಡಿ ಮತ್ತು ಕೋಡ್ನಿ ಗ್ರಾಮ ಪಂಚಾಯತ್ ನ ಚುನಾಯಿತ ಸದಸ್ಯರಿಗೆ ಅಭಿನಂದನೆ ಹಾಗೂ ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಚುನಾವಣೆಯಲ್ಲಿ ಆಯ್ಕೆಯಾದ ನೂತನ ಸದಸ್ಯರು ತಮ್ಮೂರಿನ ಅವಶ್ಯಕತೆಗಳನ್ನು ಅರಿತು ಹಳ್ಳಿಗಾಡಿನ ಸರ್ವತೋಮುಖ ಏಳಿಗೆಗಾಗಿ ಶ್ರಮವಹಿಸಬೇಕು. ಸುವ್ಯವಸ್ಥಿತ ಸ್ಥಳೀಯ ಆಡಳಿತದ ಮೂಲಕ ಗ್ರಾಮೀಣ ಭಾಗದ ಜನರ ಜೀವನಮಟ್ಟವನ್ನು ಸುಧಾರಿಸಬೇಕು. ಸರ್ವರೊಂದಿಗೆ ಸಕಲರ ಏಳಿಗೆ ಎಂಬ ಧ್ಯೇಯದೊಂದಿಗೆ ಎಲ್ಲ ವರ್ಗದ ಜನರ ಪ್ರಗತಿಗಾಗಿ ಕಾರ್ಯೋನ್ಮುಖರಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಮನೆ ಮನೆಗೂ ತಲುಪಿಸಿ, ಸುಖೀ ಗ್ರಾಮ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಸಂದೇಶ ನೀಡಿದರು.

 

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಸದಾಶಿವ ಬೂದಿಹಾಳೆ, ನಿಪ್ಪಾಣಿ ನಗರಸಭೆ ಅಧ್ಯಕ್ಷರಾದ ಶ್ರೀ ಜಯವಂತ ಭಾಟಲೆ, ಗಣ್ಯರು, ಜನಪ್ರತಿನಿಧಿಗಳು, ನಗರಸಭೆ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

निपाणी मतदारसंघातील गायकनवाडी गावाला राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी भेट देऊन, गणेश मंदिरात श्री देवाची पूजा करून, गायकनवाडी आणि कोड्नी ग्रामपंचायतीला निवडून आलेल्या सदस्यांच्या अभिनंदन व सत्कार कार्यक्रमात भाग घेऊन, समारंभाला उद्देशून संबोधित केले.

निवडून आलेल्या नवीन सदस्यांनी आपल्या गावाच्या गरजा लक्षात घेऊन, गावाच्या सर्वांगीण विकासासाठी परिश्रम घेतले पाहिजे. सुव्यवस्थित स्थानिक शासनाद्वारे ग्रामीण भागातील लोकांचे जीवनमान सुधारले पाहिजे. सर्व वर्गातील सर्व लोकांसाठी समृद्धीचे ध्येय ठेवून समाजाच्या समृद्धीसाठी प्रयत्न केले पाहिजेत, केंद्र व राज्य सरकारच्या जनपर योजना लोकांच्या दारापर्यंत पोहोचवून, सुखी गाव निर्माण कार्यात सर्वांनी सहभागी झाले पाहिजे असे सांगितले.

यावेळी तालुका पंचायत सदस्य श्री सदाशिव बुदिहाळे, निपाणी नगरपालिकेचे श्री जयवंत भाटले, मान्यवर, लोकप्रतिनिधी, नगरसेवक, ग्रामपंचायत सदस्य, पक्षाचे कार्यकर्ते, ग्रामस्थ उपस्थित होते.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!