AVIN TV

Latest Online Breaking News

ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆ ಸಕಲ ಸಿದ್ದತೆ :- ಮುಖ್ಯ ಶಿಕ್ಷಕಿ ರಾಮಸುಬ್ಬಮ್ಮ.ಜಿ. #avintvcom

Featured Video Play Icon

ನಾಳೆಯಿಂದಲೇ ಹೊಸ ವರ್ಷದ ವಿದ್ಯಾಗಮ ಪುನರಾಂಭ: ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆ ಸಕಲ ಸಿದ್ದತೆ :- ಮುಖ್ಯ ಶಿಕ್ಷಕಿ ರಾಮಸುಬ್ಬಮ್ಮ.ಜಿ.
ಬಾಗೇಪಲ್ಲಿ:-ಬರೋಬ್ಬರಿ 10 ತಿಂಗಳ ನಂತರ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ನಾಳೆಯಿಂದ ಆರಂಭವಾಗುತ್ತಿದ್ದು ಸರ್ಕಾರಿ ಪ್ರೌಢಶಾಲೆ ಘಂಟಂವಾರಿಪಲ್ಲಿ ಶಾಲೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿರುವುದಾಗಿ ಸರ್ಕಾರಿ ಪ್ರೌಢಶಾಲೆ ಘಂಟಂವಾರಿಪಲ್ಲಿ ಶಾಲೆಯ ಮುಖ್ಯ ಶಿಕ್ಷಕಿಯಾದ ರಾಮಸುಬ್ಬಮ್ಮ. ಜಿ. ಪತ್ರಿಕೆಗೆ ವಿಷಯವನ್ನು ಹಂಚಿಕೊಂಡು ಮಾತನಾಡಿ
10 ನೇ ತರಗತಿ ತರಗತಿಗಳು ನಾಳೆಯಿಂದ ಆರಂಭವಾಗಲಿದ್ದು, ಇದರೊಂದಿಗೆ 6 ರಿಂದ 9ನೇ ತರಗತಿಗೆ ಶಾಲೆಗಳಲ್ಲಿ ವಿದ್ಯಾಗಮ ಕಲಿಕೆ ಶುರುವಾಗಲಿದೆ ಎಂದು ಹೇಳಿದರು.
ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತರಗತಿಗಳನ್ನು ನಡೆಸಲು ಸಿದ್ದತೆ ಕೈಗೊಳ್ಳಲಾಗಿದೆ. ಮಧ್ಯಾಹ್ನದ ಬಿಸಿಯೂಟ ನೀಡುವುದಿಲ್ಲ, ಬದಲಿಗೆ ಆಹಾರಧಾನ್ಯ ವಿತರಿಸಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಗ್ರಾಮ ಪಂಚಾಯತಿ ವತಿಯಿಂದ ಸ್ಯಾನಿಟೈಸರ್ ಮಾಡಲಾಗಿದೆ ಸ್ಯಾನಿಟೈಸರ್
ಬಳಕೆ, ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ.ಮಕ್ಕಳು ಮನೆಯಿಂದಲೇ ನೀರಿನ ಬಾಟಲ್ ತರಲು ಸೂಚನೆ ನೀಡಲಾಗಿದೆ, ಶಿಕ್ಷಣ ಇಲಾಖೆ ನಿಗದಿಪಡಿಸಿದ ಪಠ್ಯ ಕ್ರಮವನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಪೋಷಕರ ಒಪ್ಪಿಗೆ ಕಡ್ಡಾಯವಾಗಿದೆ,ಶಿಕ್ಷಕರು ಕಡ್ಡಾಯವಾಗಿ ಕರೋನ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.
ನಾಳೆ ಮುಖ್ಯೋಪಾಧ್ಯಾಯರು, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ,ಸದಸ್ಯರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದ ಸಮ್ಮುಖದಲ್ಲಿ ವಿದ್ಯಾಗಮ ಕಾರ್ಯಕ್ರಮ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!