ಮಾಳಿ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ- ಸಂತೋಷ ಬಡಕಂಬಿ #avintvcom

ಮಾಳಿ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ- ಸಂತೋಷ ಬಡಕಂಬಿ
ಅಥಣಿ- ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲ ಮಾಳಿ/ಮಾಲಗಾರ ಸಮಾಜದಲ್ಲಿ ಕೃಷಿ ಕ್ಷೇತ್ರದಲ್ಲಿ ಗಣನೀಯವಾದಂತಹ ಸಾಧನೆ ಮಾಡಿ ಮುಖ್ಯಮಂತ್ರಿಗಳಿಂದ ಶ್ರೇಷ್ಠ ಕೃಷಿಕ ಮಹಿಳೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡು ಹೆಮ್ಮೆಪಡುವಂತಹ ಸಾಧನೆ ಮಾಡಿದ್ದ ಶ್ರೀಮತಿ ಮಹಾದೇವಿ ವಣದೆ ಅವರು ಅಗಲಿದ್ದು ಮಾಳಿ/ಮಾಲಗಾರ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಅವರು ಸ್ಥಳೀಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಪುಲೆಬ್ರಿಗೇಡ್ ವತಿಯಿಂದ ಹಮ್ಮಿಕೊಂಡ ಶ್ರೀಮತಿ ಸಾವಿತ್ರಿಬಾಯಿ ಫುಲೆ ಅವರ ಜಯಂತ್ಯೋತ್ಸವ ಪೂರ್ವಭಾವಿ ಸಭೆ ಹಾಗೂ ಮಹಾದೇವಿ ವಣದೆ ಅವರ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಪ್ರತಿವರ್ಷದಂತೆ ಈ ವರ್ಷವೂ ಸಹ ಜನೇವರಿ ೦೩ ರಂದು ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಬೆಳಿಗ್ಗೆ 08 ಗಂಟೆಗೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದು ವಿಶೇಷವಾಗಿ ಮಹಿಳಾ ಶಿಕ್ಷಕೀಯರಿಂದ ಸಾವಿತ್ರಿಬಾಯಿ ಅವರ ಕುರಿತಾಗಿ ಉಪನ್ಯಾಸವಿದೆ ಈ ಸಮಾರಂಭದಲ್ಲಿ ತಾಲೂಕಿನ ಎಲ್ಲ ಜನರು ಪಾಲ್ಗೊಳ್ಳುವಂತೆ ಕರೆ ನೀಡಿದರು.
ಅನಂತರ ಮಾತನಾಡಿದ ಮುಖಂಡ ರವಿ ಬಡಕಂಬಿ ಇಡೀ ದೇಶದ ಮಹಿಳೆಯರ ಶಿಕ್ಷಣಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನು ಅರ್ಪಣೆ ಮಾಡಿದಂತಹ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದಂದು ಅವರ ತ್ಯಾಗ, ಸಾಮಾಜಿಕ ಕ್ರಾಂತಿ, ಹೋರಾಟದ ಮಾಹಿತಿಯನ್ನು ತಿಳಿದು ನಮ್ಮ ಜೀವನದಲ್ಲಿ ಅವರ ಮೌಲ್ಯಗಳನ್ನು ಅಳವಡಿಸಿಕೊಳ್ಳೋಣ ಅದಕ್ಕಾಗಿ ಎಲ್ಲರೂ ಭಾಗವಹಿಸಿ ಎಂದರು.
ಈ ವೇಳೆ ಮಲ್ಲಿಕಾರ್ಜುನ ಬುಟಾಳಿ, ಪರಶುರಾಮ ಸೋನಕರ, ನಾಗಪ್ಪ ಉಗಾರೆ, ರಮೇಶ ಮಾಳಿ, ಮಹಾಂತೇಶ ಮಾಳಿ, ಶ್ರೀಶೈಲ ಬಡಕಂಬಿ, ಪ್ರಶಾಂತ ತೋಡಕರ, ಶಿವಲಿಂಗ ಬೆಳ್ಳಂಕಿ, ಮಹಾದೇವ ಚಮಕೇರಿ, ಪ್ರವೀಣ ಮಾಳಿ, ಮಲ್ಲಿಕಾರ್ಜುನ ಪ್ಯಾಟಿ, ಶ್ರೀಕಾಂತ ಬಡಕಂಬಿ, ಮುರುಗೇಶ ಮೋಳೆ, ಶಂಕರ ಬಡಕಂಬಿ, ಬಸವರಾಜ ಬಡಕಂಬಿ, ಸಿದ್ದು ಹೊನ್ನೊಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು..
ಪೊಟೊ ಶೀರ್ಷಿಕೆ- ಶ್ರೀಮತಿ ಸಾವಿತ್ರಿಬಾಯಿ ಫುಲೆ ಅವರ ಜಯಂತ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಫುಲೆಬ್ರಿಗೇಡ್ ಸದಸ್ಯರು..
ವರದಿ ಪೀರು ನಂದೇಶ್ವರಃ