day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ದಿ/ವಿ.ಜಿ.ಸಿದ್ದಾರ್ಥರವರ ಪುತ್ತಳಿ ಅನಾವರಣ ಕಾರ್ಯಕ್ರಮ.#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ದಿ/ವಿ.ಜಿ.ಸಿದ್ದಾರ್ಥರವರ ಪುತ್ತಳಿ ಅನಾವರಣ ಕಾರ್ಯಕ್ರಮ.#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಕೆಫೆ ಕಾಫಿ ಡೇ ಸಿದ್ದಾರ್ಥ: ಒಂದು ಕಿರು ನೋಟ
ಕೆಫೆ ಕಾಫಿ ಡೇ ಕೇವಲ ಒಂದು ಸಾಧಾರಣ ಕಾಫಿ ಶಾಪ್ ಅಲ್ಲವೇ ಅಲ್ಲ, ಬದಲಾಗಿ ಅಲ್ಲಿ
ಕುಳಿತು ಕಾಫಿಯನ್ನು ಆಸ್ವಾದಿಸುತ್ತಾ ವ್ಯಾಪಾರ, ವಹಿವಾಟು, ಉದ್ಯಮ, ವಿದೇಶ
ಪ್ರವಾಸ…ಹೀಗೆ ಹತ್ತು ಹಲವು ವಿಷಯಗಳನ್ನು ಕುರಿತು ಚರ್ಚಿಸುವ ತಾಣ. ಅಲ್ಲಿ ಕುಳಿತು
ಚರ್ಚೆ ನಡೆಯಿತು ಎಂದರೆ ಒಂದು ತೀರ್ಮಾನಕ್ಕೆ ಬಂದಿದೇವೆ ಎಂದೇ ಅರ್ಥ. ಅದರಲ್ಲೂ ತರುಣ
ತರುಣಿಯರಿಗೆ ಕಾಫಿ ಡೇ ಮಳಿಗೆ ಹೇಳಿ ಮಾಡಿಸಿದ ಕೇಂದ್ರ. ಅಲ್ಲಿ ನಿಮ್ಮನ್ನು ಯಾರೂ
ಮಾತನಾಡಿಸುವವರಿಲ್ಲ, ಗಜಿ ಬಿಜಿ ಇಲ್ಲ. ಪ್ರಶಾಂತ ವಾತಾವರಣ, ಯುವ ಪೀಳಿಗೆಗೆ ಮತ್ತೇನು
ಬೇಕು ? ಭಾರತದಲ್ಲಿ ಇಂತಹ ನವನವೀನ ಕಲ್ಪನೆಯ ಕಾಫಿ ಡೇ ಹುಟ್ಟು ಹಾಕಿದ್ದು ವಿಜಿ
ಸಿದ್ದಾರ್ಥ. ಕಾಫಿ ತವರೂರು ಚಿಕ್ಕಮಗಳೂರು ಮೂಲದ ಒಬ್ಬ ಯುವಕ ಸಿದ್ದಾರ್ಥ ಕಾಫಿಯ
ಸ್ವಾದವನ್ನು ಇಡೀ ವಿಶ್ವಕ್ಕೆ ಪಸರಿಸಿ ಎರಡು ದಶಕಗಳ ಕಾಲ ಕಾಫಿ ಜಗತ್ತಿನ ಸಾಮ್ರಾಟನಾದ
ಕಥೆ ಅಸಾಧಾರಣವಾದುದು. 1996 ಸಮಯದಲ್ಲಿ ಕಾಫಿ ಡೇ ಎಂಬ ಪರಿಕಲ್ಪನೆಯನ್ನು ಹುಟ್ಟು
ಹಾಕಿ ಒಂದು ಕಪ್ ಕಾಫಿ ಮುಂದಿದ್ದರೆ ಏನೆಲ್ಲಾ ಸಾಧಿಸಬಹುದು ಎನ್ನುವುದಕ್ಕೆ
ಸಿದ್ದಾರ್ಥ ಜ್ವಲಂತ ಸಾಕ್ಷಿ.
ಸಿದ್ದಾರ್ಥ ಕಾಫಿ ಮನೆತನಕ್ಕೆ ಸೇರಿದ ಶ್ರೀಮಂತ ಕುಟುಂಬದ ಕುಡಿ. 140 ವರ್ಷಗಳಿಂದ
ಕಾಫಿ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಕುಟುಂಬದ ಗಂಗಯ್ಯ ಹೆಗ್ಡೆ ಇವರ ತಂದೆ.ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನವರು.
ಹಾಗೆಯೇ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಪುತ್ರಿ ಮಾಳವಿಕಾ ಸಿದ್ದಾರ್ಥ ಅವರ
ಪತ್ನಿ. ಸಿದ್ದಾರ್ಥ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ
ಸ್ನಾತಕೋತ್ತರ ಪದವಿ ಪಡೆದು ಮುಂಬಯಿಯ ಜೆಎಂ ಫೈನಾನ್ಸ್ ಕಂಪನಿ ಸೇರುತ್ತಾರೆ. ನಂತರ
ಮಹೇಂದ್ರ ಕಂಪನಿಯಲ್ಲಿ ಮಾರುಕಟ್ಟೆ ನಿರ್ವಹಣಾ ತರಬೇತುದಾರರಾಗಿ ಯಶಸ್ವಿಯಾಗಿ ಕಾರ್ಯ
ನಿರ್ವಹಿಸಿ ಕಿರಿಯ ವಯಸ್ಸಿಗೆ ಎಲ್ಲರ ಗಮನ ಸೆಳೆದಿದ್ದು ಇವರ ಹೆಗ್ಗಳಿಕೆ. ಆಗ
ಇವರಿಗೆ ಕೇವಲ 24 ವರ್ಷ ಎಂದರೆ ಅಚ್ಚರಿಯಾದೀತು. ಅದೇಕೊ ಇನ್ನೊಬ್ಬರ ಕೈಕೆಳಗೆ ಕೆಲಸ
ಮಾಡಲು ಇಷ್ಟಪಡದ ಸಿದ್ದಾರ್ಥ ಎರಡೇ ವರ್ಷಗಳಲ್ಲಿ ಬೆಂಗಳೂರಿಗೆ ಮರಳಿ, ತಮ್ಮದೇ ಸ್ವಂತ
ಉದ್ದಿಮೆ ಆರಂಭಿಸುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಪರಿಣಿತಿ ಹೊಂದಿದ್ದ ಇವರು
ಸೆವೆನ್ ಸೆಕ್ಯೂರಿಟಿ ಎಂಬ ಕಂಪನಿಯನ್ನು ಹುಟ್ಟು ಹಾಕುತಾರೆ. 2000 ಇಸವಿಯಲ್ಲಿ
ವೇ2ವೆಲ್ತ್ ಎಂದು ಮರು ನಾಮಕರಣ ಮಾಡುತ್ತಾರೆ. ಸಂಪೂರ್ಣವಾಗಿ ಷೇರು ಮಾರುಕಟ್ಟೆಯಲ್ಲಿ
ತೊಡಗಿಸಿಕೊಳ್ಳುವ ಇವರು ಗಳಿಸಿದ ಲಾಭದಿಂದ 10 ಸಾವಿರ ಎಕರೆ ಕಾಫಿ ತೋಟವನ್ನು ಖರೀದಿಸಿ
ಅಭಿವೃದ್ಧಿಪಡಿಸುತ್ತಾರೆ.
1993ರಲ್ಲಿಯೇ ಅಮಾಲ್ಗಮೇಟಸ್ ಬೀನ್ ಕಾಫಿ ಟ್ರೇಡಿಂಗ್ ಕಂಪನಿ(ಎಬಿಸಿಟಿಸಿಎಲ್)
ಸ್ಥಾಪಿಸಿ ಕಾಫಿ ರಫ್ತಿಗೆ ಉತ್ತೇಜನ ನೀಡುತ್ತಾರೆ. ಮಾರುಕಟ್ಟೆ ವಿಷಯದಲ್ಲಿ ಅನುಭವ
ಹೊಂದಿದ್ದ ಇವರು ಕಾಫಿ ರಪ್ತಿನತ್ತ ಗಮನ ಹರಿಸುತ್ತಾರೆ. ತಮ್ಮ ತೋಟದಿಂದ 3000 ಟನ್
ಕಾಫಿ ಉತ್ಪಾದಿಸುತ್ತಿದ್ದ ಇವರು ನಂತರದ ದಿನಗಳಲ್ಲಿ 20,000 ಟನ್ ಕಾಫಿ ರಫ್ತು
ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಎರಡೇ ವರ್ಷಗಳಲ್ಲಿ ರಫ್ತು ಉದ್ಯಮದಲ್ಲಿ ಎರಡನೇ
ಸ್ಥಾನಕ್ಕೆ ಏರುತಾರೆ. ಆರಂಭದಲ್ಲಿ ಕೇವಲ 6 ಕೋಟಿ ರು.ಮಾತ್ರ ವಹಿವಾಟು ನಡೆಸುವ ಇವರು
ಕೆಲವೇ ವರ್ಷಗಳಲ್ಲಿ 2,500 ಕೋಟಿ ರು. ವಹಿವಾಟು ನಡೆಸುವ ಮೂಲಕ ಜಗತ್ತಿನ ಗಮನ
ಸೆಳೆಯುತ್ತಾರೆ.

ಕೈಹಿಡಿದ ಕಾಫಿ ಡೇ
ಜರ್ಮನಿಯ ಚಿಬು ಎಂಬ ಕಾಫಿ ಉದ್ಯಮದ ಪ್ರೇರಣೆ ಪಡೆದ ಇವರು 1996ರಲ್ಲಿ ಬೆಂಗಳೂರಿನ
ಬ್ರಿಗೇಡ್ ರಸ್ತೆಯಲ್ಲಿ ಮೊದಲ ಬಾರಿಗೆ ಕೆಫೆ ಕಾಫಿ ಡೇ(ಸಿಸಿಡಿ) ಆರಂಭಿಸುತ್ತಾರೆ. ಈ
ಮೂಲಕ ಕಾಫಿ ಕುಡಿಯುವ ಪದ್ದತಿಯನ್ನೇ ಬದಲಾಯಿಸಿ ಬಿಡುತ್ತಾರೆ. ದಾವಂತದಲ್ಲಿ ದರ್ಶಿನಿ
ಮುಂದೆ ಕಾಫಿ ಹೀರಿ ತೆರಳುತ್ತಿದ್ದ ಕಾಲ ಅದು. ಕಾಫಿಯನ್ನು ಹೀಗೂ ಆಸ್ವಾದಿಸಬಹುದು
ಎನ್ನುವುದನ್ನು ಮೊದಲ ಬಾರಿಗೆ ವಿಶ್ವಕ್ಕೆ ಪರಿಚಯಿಸಿಕೊಟ್ಟರು. ಸಿಸಿಡಿಯಲ್ಲಿ
ಕುಳಿತು ವ್ಯಾಪಾರ, ವಹಿವಾಟು, ಸಂಬಂಧ, ಸೇರಿದಂತೆ ಜಗತ್ತಿನ ಎಲ್ಲ ವಿದ್ಯಾಮಾನಗಳನ್ನು
ಚರ್ಚಿಸಲೂಬಹುದು ಎನ್ನುವುದನ್ನು ತೋರಿಸಿಕೊಟ್ಟ ಹೆಗ್ಗಳಿಕೆ ಇವರದ್ದು. ಇನ್ನು
ಪ್ರೇಮಿಗಳಿಗೆ, ನವ ವಿವಾಹಿತರಿಗೆ ಕಾಫಿ ಡೇ ಅಚ್ಚುಮೆಚ್ಚಿನ ಸ್ಥಳ ಎಂದು
ಪ್ರತ್ಯೇಕವಾಗಿ ಹೇಳಬೇಕಿಲ್ಲ. ಒಂದು ಕಪ್ ಕಾಫಿಯ ಜತೆ ಒಂದು ಗಂಟೆ ಇಂಟರ್‍ನೆಟ್‍ಗೆ
100 ರೂ ಶುಲ್ಕ ನಿಗಧಿಪಡಿಸುತಾರೆ. ಇದುವರೆಗೂ ಬೆಂಗಳೂರು ನಿವೃತ್ತರ ಸ್ವರ್ಗ ಎಂಬ
ಹಣೆಪಟ್ಟಿ ಕಟ್ಟಿಕೊಂಡಿತ್ತು. ಜಗತ್ತಿನ ಐಟಿ ಉದ್ಯಮದ ಕೇಂದ್ರ ಸ್ಥಾನವಾಗುತ್ತಾ
ಆಧುನಿಕ ಜೀವನ ಶೈಲಿಗೆ ಒಗ್ಗಿಕೊಳ್ಳುತ್ತಿದ್ದ ಕಾಲ ಅದು. ಪಾಶ್ಚಾತ್ಯ ಜೀವನ ಶೈಲಿಗೆ
ಹೇಳಿ ಮಾಡಿಸಿದಂತಿದ್ದ ಕಾಫಿ ಡೇ ಅಲ್ಲಿಂದ ಯಾವತ್ತೂ ಹಿಂತಿರುಗಿ ನೋಡುವುದಿಲ್ಲ.
ಈ ಯಶಸ್ಸಿನಿಂದ ಪ್ರೇರಣೆ ಪಡೆದ ಸಿದ್ದಾರ್ಥ ದೇಶ ವಿದೇಶಗಳಲ್ಲಿ ಕಾಫಿ ಡೇ ಉದ್ಯಮವನ್ನು
ವಿಸ್ತರಿಸುತ್ತಾ ಹೋಗುತ್ತಾರೆ. 1700ಕ್ಕೂ ಹೆಚ್ಚು ಕೆಫೆಗಳನ್ನು ಆರಂಭಿಸಿ 4,264
ಕೋಟಿ ರುಗಳ ವಹಿವಾಟು ನಡೆಸುತ್ತಾರೆ. 12 ಸಾವಿರ ಎಕರೆ ಕಾಫಿ ತೋಟದ ಒಡೆಯನಾಗಿ
2015ರಲ್ಲಿ ಫೋಬ್ರ್ಸ್ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ. ಇಂದು ಜಗತ್ತಿನ 200
ನಗರಗಳಲ್ಲಿ 1700 ಕೆಫೆಗಳು ನಡೆಯುತ್ತಿವೆ. ಮಲೇಷಿಯಾ, ನೇಪಾಳ, ಈಜಿಪ್ಟ್ ಮೊದಲಾದ
ದೇಶಗಳಲ್ಲಿಯೂ ಕಾಫಿ ಡೇ ಶಾಖೆಗಳಿವೆ. 48,000 ವೆಂಡಿಂಗ್ ಮೆಷಿನ್‍ಗಳು, 532
ಕಿಯೋಸ್ಕ್‍ಗಳು ಮತ್ತು 403 ಕಾಫಿ ಬೀಜ ಮಾರಾಟ ಕೇಂದ್ರಗಳನ್ನು ಆರಂಭಿಸುತ್ತಾರೆ. ಕಾಫಿ
ಉದ್ಯಮದಿಂದಾಚೆಗೂ ಸಿದ್ದಾರ್ಥ ಕೈಯಾಡಿಸುತ್ತಾರೆ. ಚಿಕ್ಕಮಗಳೂರಿನಲ್ಲಿ ಸೆರಾಯ್ ಮತ್ತು
ಸಿಕಾಡಾ ಎಂಬ ಅತ್ಯಾಧುನಿಕ ಐಷಾರಾಮಿ ಸೆವೆನ್ ಸ್ಟಾರ್ ರೆಸಾಟ್‍ಗಳನ್ನು
ಆರಂಭಿಸುತ್ತಾರೆ. ಹೀಗೆ 22,000 ಕೋಟಿ ಆಸ್ತಿ ಹೊಂದಿರುವ ಸಿದ್ದಾರ್ಥ ದೇಶದ ಆಗರ್ಭ
ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಜಿಟಿವಿ, ಮೈಂಡ್ ಟ್ರೀ, ಲಿಕ್ವಿಡ್ ಕ್ರಿಸ್ಟಲ್ ವೇಟು ವೆಲ್ತ್ ಇಟ್ಟಿಯಂ ಮೊದಲಾದ
ಕಂಪನಿಗಳಲ್ಲಿ ಬಂಡವಾಳ ಹೂಡಿದ್ದಾರೆ. ಮೈಂಡ್ ಟ್ರೀ ಕಂಪನಿಯ 3210 ಕೋಟಿ ರು.ಗಳ
ಮೌಲ್ಯದ ಷೇರುಗಳನ್ನು ಎಲ್. ಅಂಡ್ ಟಿ ಕಂಪನಿ ಖರೀದಿಸಿದೆ. 2002-2003ರಲ್ಲಿ
ಎಕಾನಮಿಕ್ಸ್ ಟೈಮ್ಸ್‍ನ ಯಶಸ್ವಿ ಉದ್ಯಮಿ ಗೌರವಕ್ಕೆ ಪಾತ್ರರಾಗಿರುತ್ತಾರೆ. ಮಾಹಿತಿ
ತಂತ್ರಜ್ಞಾನ ಉದ್ಯಮದಲ್ಲೂ ಸಾಹಸ ಮಾಡುವ ಇವರು ಗ್ಲೋಬಲ್ ಟೆಕ್ನಾಲಜೀಸ್ ಲಿಮಿಟೆಡ್
ಕಂಪನಿ ಸ್ಥಾಪಿಸುತ್ತಾರೆ. ಮೈಂಡ್ ಟ್ರೀ ಕಂಪನಿಯಲಿದ್ದ ಶೇ.20ರಷ್ಟು ಷೇರುಗಳನ್ನು
ಎಲ್. ಅಂಡ್ ಟ್ರೀ ಕಂಪನಿಗೆ ಮಾರಾಟ ಮಾಡುತ್ತಾರೆ.

ಕವಿ ಮನಸ್ಸಿನ ಸಹೃದಯಿ
ಸಿದ್ದಾರ್ಥ ಕೇವಲ ಉದ್ಯಮಿಯಷ್ಟೇ ಅಲ್ಲ, ಕವಿ ಮನಸ್ಸಿನ ಸಹೃದಯಿಯೂ ಹೌದು! ರಾಷ್ಟ್ರಕವಿ
ಕುವೆಂಪು ಅವರ ಕುಪ್ಪಳ್ಳಿಯ ಕವಿಶೈಲವನ್ನು ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಿದ
ಕೀರ್ತಿ ಸಿದ್ದಾರ್ಥ ಅವರಿಗೆ ಸಲ್ಲಬೇಕು. ಕುವೆಂಪು ಅವರ ಪುತ್ರ ಸಾಹಿತಿ ಪೂರ್ಣಚಂದ್ರ
ತೇಜಸ್ವಿ ಕುಪ್ಪಳ್ಳಿಗೆ ವಿಶ್ವಮಾನ್ಯತೆ ತಂದುಕೊಡಬೇಕು ಎಂಬ ಅವರ ಕನಸಿಗೆ ನೀರೆರದವರು
ಸಿದ್ದಾರ್ಥ. ಕುಪ್ಪಳ್ಳಿ ಕಾಡಿಗೆ ಒಂದಿಷ್ಟೂ ಹಾನಿ ಉಮಟು ಮಾಡದೆ ಕವಿಶೈಲದಲ್ಲಿ
ಕುವೆಂಪು ಸ್ಮಾರಕ ನಿರ್ಮಾಣಕ್ಕೆ ಮುಂದಾಗುತ್ತಾರೆ. ಖ್ಯಾತ ಕಲಾವಿದ ಕೆ.ಟಿ.
ಶಿವಪ್ರಸಾದ್ ಅವರ ವಿನ್ಯಾಸ ರೂಪಿಸುತ್ತಾರೆ. ಬೃಹತ್ ಗ್ರಾತ್ರದ ಕಲ್ಲುಗಳನ್ನು
ನಿಲ್ಲಿಸಿ ಕವಿಶೈಲಕ್ಕೆ ಮೆರುಗು ನೀಡಲಾಗಿದೆ. ಈ ಕಲ್ಲುಗಳನ್ನು ಬೆಟ್ಟದ ಮೇಲಕ್ಕೆ
ಸಾಗಿಸಿ ನಿಲ್ಲಿಸಿರುವ ನೋಟ ಅಚ್ಚರಿ ಮೂಡಿಸುತ್ತದೆ. ಈ ಕಲೆ ಗ್ರೀಕ್ ಮಾದರಿಯನ್ನು
ನೆನಪಿಸುತ್ತದೆ. ಕಲಾತ್ಮಕವಾದ ಬಂಡೆಗಳನ್ನು ನಿಲ್ಲಿಸಲು ಸುಮಾರು 18-20 ತಿಂಗಳನ್ನು
ತೆಗೆದುಕೊಳ್ಳಲಾಗಿದೆ. ಆದರೆ ಇಡೀ ಕೆಲಸದಲ್ಲಿ ಎಲ್ಲಿಯೂ ಅವರು ತಮ್ಮ ಹೆಸರು ಬಾರದಂತೆ
ನೋಡಿಕೊಳ್ಳುವ ಮೂಲಕ ಕುವೆಂಪು ಅವರಿಗೆ ಗೌರವ ಸಲ್ಲಿಸಿದ್ದಾರೆ.

ಬೆಂಬಿಡದ ವಿವಾದ
ಖ್ಯಾತನಾಮರಿಗೂ ವಿವಾದಗಳಿಗೂ ಅವಿನಾಭಾವ ಸಂಬಂಧವಿರುವಂತೆ ಕಂಡು ಬರುತ್ತದೆ. ವಿವಾದಗಳು
ಯಾರನ್ನೂ ಬಿಟ್ಟಿಲ್ಲ. ಹಾಗೆಯೇ ಸಿದ್ದಾರ್ಥ ಅವರೂ ಹೊರತಾಗಿರಲಿಲ್ಲ. 2017ರಲ್ಲಿ
ತೆರಿಗೆ ವಂಚನೆ ಮಾಡಿದ ಆರೋಪವನ್ನು ಇವರು ಎದುರಿಸುತ್ತಿದ್ದರು. ಆ ಸಂದರ್ಭದಲ್ಲಿ
ಬೆಂಗಳೂರು, ಚೆನ್ನೈ, ಮುಂಬಯಿ ಚಿಕ್ಕಮಗಳೂರು ಸೇರಿದಂತೆ 20 ಸ್ಥಳಗಳಲ್ಲಿ ಆದಾಯ
ತೆರಿಗೆ ಇಲಾಖೆ ದಾಳಿ ನಡೆಸಿತ್ತು.
ಸಿದ್ದಾರ್ಥ ಅವರ ಸಾವು ಸಿಸಿಡಿ ಮಾತ್ರವಲ್ಲ, ಇಡೀ ಕಾಫಿ ಸಮುದಾಯಕ್ಕೆ ಆಘಾತವನ್ನುಂಟು
ಮಾಡುತ್ತದೆ. ಕೊಡಗಿನಲ್ಲಿ ಎಬಿಸಿ ಕಂಪನಿ ಸ್ಥಾಪನೆ ಆಗದಿದ್ದರೂ ಆ ಕಂಪನಿ ಪ್ರತಿನಿತ್ಯ
ಪ್ರಕಟಿಸುತ್ತಿದ್ದ ಕಾಫಿ ದರವನ್ನು ಅವಲಂಬಿಸಿ ಇಲ್ಲಯೂ ಕಾಫಿ ದರವನ್ನು
ಪ್ರಕಟಿಸಲಾಗುತ್ತಿತ್ತು. ಕಾಫಿ ಕೊಯ್ಲು ಮುಕ್ತಾಯಗೊಂಡ ನಂತರ ಪ್ರತಿ ದಿನ ಎಬಿಸಿ
ಪ್ರಕಟಿಸುತ್ತಿದ್ದ ದರದ ಆಧಾರದ ಮೇಲೆ ಇಲ್ಲಿನ ಕಾಫಿ ಕ್ಯೂರಿಂಗ್‍ಗಳು ಕಾಫಿ ದರವನ್ನು
ಪ್ರಕಟಿಸುತ್ತಿದ್ದವು. ಎಬಿಸಿ ಹೆಚ್ಚಿನ ದರ ಪ್ರಕಟಿಸಿದರೆ ಇಲ್ಲಿನ ಬೆಳೆಗಾರರಿಗೂ
ಸಂತಸ ಉಂಟಾಗುತ್ತಿತ್ತು.

ಸಾಲದ ಸುಳಿಯಲ್ಲಿ ಸಿಲುಕಿದ್ದರೇ ?
ಸದಾ ಉತ್ಸಾಹದಿಂದ ಪುಟಿಯುತ್ತಿದ್ದ ಸಿದ್ದಾರ್ಥ ಸಾಲದ ಸುಳಿಯಲ್ಲಿ ಸಿಲುಕಿದ್ದರೇ ಎಂಬ
ಪ್ರಶ್ನೆ ಅವರ ಸಾವಿನ ನಂತರ ಅನುಮಾನಗಳನ್ನು ಹುಟ್ಟು ಹಾಕುತ್ತಿವೆ. ಇದಕ್ಕೆ ಕಾರಣಗಳೂ
ಇಲ್ಲದಿಲ್ಲ. ಅವರ ಸಾವಿಗೆ ತೆರಿಗೆ ಭಯೋತ್ಪಾದನೆ ಕಾರಣ ಎಂದು ವಿಶ್ಲೇಶಿಸಲಾಗುತ್ತಿದೆ.
ಇಲಾಖೆಗಳು ನೀಡಿದ ಕಿರುಕುಳವೂ ಒಂದು ಕಾರಣವಿರಬಹುದು ಎಂಬ ಅನುಮಾನಗಳು ಕಾಡುತ್ತಿವೆ.
ತಮ್ಮ ಬೃಹತ್ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಮಿತಿಮೀರಿ ಸಾಲ ಮಾಡಿದ್ದರು ಎಂಬ
ಮಾತುಗಳು ಕೇಳಿ ಬರುತ್ತಿವೆ. 2018ರ ಮಾರ್ಚ್ ಅಂತ್ಯಕ್ಕೆ ಸಿಸಿಡಿ ಸುಮಾರು 68 ಕೋಟಿ
ರುಗಳಷ್ಟು ನಷ್ಟ ಅನುಭವಿಸಿತ್ತು. ಸಿಸಿಡಿ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ
ಸಿದ್ದಾರ್ಥ ನಾನು “ಒಬ್ಬ ಉದ್ಯಮಿಯಾಗಿ ವಿಫಲನಾಗಿದ್ದೇನೆ. ಪ್ರತಿಯೊಂದು ವಹಿವಾಟಿಗೂ
ನಾನೇ ಜವಬ್ದಾರ” ಎಂಬ ಅರ್ಥದಲ್ಲಿ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಮಾನವೀಯ
ಮೌಲ್ಯಗಳನ್ನು ರೂಢಿಸಿಕೊಂಡಿದ್ದ ಸಿದ್ಧಾರ್ಥ ಅವರಿಗೆ ಸಾಲಗಾರರು ಮತ್ತು ತೆರಿಗೆ
ಇಲಾಖೆ ಕಿರುಕುಳ ಕೊಟ್ಟಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸಾಲ ಮರು ಪಾವತಿಗೆ
ಮತ್ತೆ ಸಾಲ ಲಭ್ಯವಾಗದ ಕಾರಣ ಅವರು ಆತ್ಮಹತ್ಯೆಯತ್ತ ಮುಖ ಮಾಡಿದರು ಎಂಬ
ಪ್ರಶ್ನೆಯನ್ನು ಹುಟ್ಟಿ ಹಾಕಿದೆ. ಸರಕಾರ ಉದ್ದೇಶಪೂರ್ವಕವಾಗಿ ಸಿದ್ದಾರ್ಥ ಅವರನ್ನು
ಗುರಿಯಾಗಿಸಿಕೊಂಡು ಕಿರುಕುಳ ನೀಡಿದೆ. ಇದರಿಂದ ಅವರ ಆತ್ಮಗೌರವಕ್ಕೆ ಚ್ಯುತಿ ಬಂದು
ಬದುಕಿಗೆ ವಿದಾಯ ಹೇಳುವ ಮಾರ್ಗ ಹುಡುಕಿ ಕೊಳ್ಳಬೇಕಾಯಿತು ಎಂದು ನೂರಾರು ಉದ್ಯಮಿಗಳು
ಅಭಿಪ್ರಾಯಪಡುತ್ತಾರೆ.

ಈ ಸಾವು ನ್ಯಾಯವೇ?
ಸಿದ್ದಾರ್ಥ 29, ಸೋಮವಾರ ಜುಲೈ 2019ರಂದು ಬೆಂಗಳೂರಿನಿಂದ ಹೊರಟು ಮಂಗಳೂರಿಗೆ
ಆಗಮಿಸುತ್ತಾರೆ. ಅಂದು ಸಂಜೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಮೇಲ್ಸೇತುವೆ ಮೇಲೆ
ಮೊಬೈಲ್‍ನಲ್ಲಿ ಮಾತನಾಡುತ್ತಾ ಕಣ್ಮರೆಯಾಗುತ್ತಾರೆ. ಜುಲೈ 31 ಬುಧವಾರ ಮುಂಜಾನೆ ಅವರ
ಮೃತದೇಹ ಮಂಗಳೂರಿನ ಹೊಯ್ಗೆ ಬಜಾರ್ ಬಳಿ ಕಡಲತೀರದಲ್ಲಿ ಪತ್ತೆಯಾಗುತ್ತದೆ. ಆತ್ಮಹತ್ಯೆ
ಮಾಡಿಕೊಂಡಿರುವ ಅನುಮಾನದ ಆಧಾರದ ಮೇಲೆ ಮಂಗಳವಾರ ಇಡೀ ದಿನ ಶೋಧನೆ ನಡೆಸಿದ್ದರೂ
ಯಾವುದೇ ಸುಳಿವು ಸಿಕ್ಕಿರುವುದಿಲ್ಲ.
ಸಿದ್ದಾರ್ಥ ಅವರ ಅಂತ್ಯಕ್ರಿಯೆ ಬುಧವಾರದಂದೇ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ
ತಾಲ್ಲೂಕಿನ ಅವರ ಚೇತನಹಳ್ಳಿಯಲ್ಲಿ ನೆರವೇರುತ್ತದೆ. ಸಾವಿರಾರು ಬಂಧುಗಳು,
ಅಭಿಮಾನಿಗಳ ಅಶ್ರುತರ್ಪಣದ ನಡುವೆ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ
ನಡೆಯುತ್ತದೆ. ಅವರ ಅಂತಿಮ ದರ್ಶನಕ್ಕೆ ಬಾರಿ ಜನಸ್ತೋಮವೇ ನೆರೆದಿದ್ದರಿಂದ ನೂಕು
ನುಗ್ಗಲನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪುತ್ರರಾದ ಅಮತ್ರ್ಯ ಮತ್ತು
ಈಶಾನ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು ಈ ಸಂದರ್ಭದಲ್ಲಿ ತಾಯಿ ವಾಸಂತಿ, ಪತ್ನಿ
ಮಾಳವಿಕಾ, ಮಾವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪತ್ನಿ ಪ್ರೇಮಾ ಸೇರಿದಂತೆ
ಸಾವಿರಾರು ಬಂಧುಗಳು ಮತ್ತು ಅಭಿಮಾನಿಗಳು ಕಂಬನಿ ಮಿಡಿದರು. ಆದರೆ ಸಿದ್ದಾರ್ಥ ಅವರ
ತಂದೆ ಗಂಗಯ್ಯ ಹೆಗ್ಡೆ ಅನಾರೋಗ್ಯದಿಂದ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುತ್ತಿದ್ದರಿಂದ ಮಗನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.
ಸಿದ್ಧಾರ್ಥ ಕೇವಲ ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ. ಯುವ ಪೀಳಿಗೆಗೆ ಮಾದರಿ.
ಸುಮಾರು 1,00,000 ಕುಟುಂಬಗಳಿಗೆ ಉದ್ಯೋಗ ನೀಡುವ ಮೂಲಕ ಅನ್ನದಾತ ಎನ್ನಿಸಿದ್ದರು. ಅವರು
ಕೇವಲ ನೆನಪು ಮಾತ್ರ. ಆದರೆ ಅವರು ಸದಾ ನಮ್ಮ ಹೃದಯಗಳಲ್ಲಿ ಚಿರಸ್ಥಾಯಿಯಾಗಿ ಇರುತ್ತಾರೆ.
ಆ ಹೆಸರು ಮತ್ತು ವ್ಯಕ್ತಿಗೆ ಅಂತಹ ಶಕ್ತಿ ಇದೆ.

ಅವರ ಬದುಕು ನಮಗೆ ಮಾರ್ಗದರ್ಶಕ.
ಸಾವಲ್ಲ.

01.01.2021.ರ ಶುಕ್ರವಾರ ಬೆಳಿಗ್ಗೆ 10.30.ಕ್ಕೆ ಮೂಡಿಗೆರೆ — ಚಿಕ್ಕಮಗಳೂರು ರಸ್ತೆಯ ಕುದುರೆಗುಂಡಿಯ ಬಳಿ ಸಿದ್ದಾರ್ಥರವರ ಆಪ್ತರಾದ ಗೌತಹಳ್ಳಿಹಾಲಪ್ಪಗೌಡರು ನಿರ್ಮಿಸಿರುವ ಸಿದ್ದಾರ್ಥರವರ ಪುತ್ತಳಿಯ ಅನಾವರಣ ಕಾರ್ಯಕ್ರಮ ನಡೆಯಲಿದೆ.
ತಮ್ಮೆಲ್ಲರಿಗೂ ಆತ್ಮಿಯ ಸ್ವಾಗತ ಬಯಸುವ.

ಮಗ್ಗಲಮಕ್ಕಿಗಣೇಶ.
ತಾ:ಅಧ್ಯಕ್ಷರು.
ಕನ್ನಡ ಸಾಹಿತ್ಯ ಪರಿಷತ್ತು.
ಮೂಡಿಗೆರೆ.

About Author