day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಕಾಫಿ ತವರೂರು ಚಿಕ್ಕಮಗಳೂರು ಕೆಫೆ ಕಾಫಿ ಡೇ ಮೂಲದ ಒಬ್ಬ ಯುವಕ ಸಿದ್ದಾರ್ಥ ದೇಶ ವಿದೇಶಗಳಲ್ಲಿ ಕಾಫಿ ಡೇಯ ಒಂದು ಕಿರು ನೋಟ – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಕಾಫಿ ತವರೂರು ಚಿಕ್ಕಮಗಳೂರು ಕೆಫೆ ಕಾಫಿ ಡೇ ಮೂಲದ ಒಬ್ಬ ಯುವಕ ಸಿದ್ದಾರ್ಥ ದೇಶ ವಿದೇಶಗಳಲ್ಲಿ ಕಾಫಿ ಡೇಯ ಒಂದು ಕಿರು ನೋಟ

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಕೆಫೆ ಕಾಫಿ ಡೇ ಸಿದ್ದಾರ್ಥ: ಒಂದು ಕಿರು ನೋಟ
ಕೆಫೆ ಕಾಫಿ ಡೇ ಕೇವಲ ಒಂದು ಸಾಧಾರಣ ಕಾಫಿ ಶಾಪ್ ಅಲ್ಲವೇ ಅಲ್ಲ, ಬದಲಾಗಿ ಅಲ್ಲಿ
ಕುಳಿತು ಕಾಫಿಯನ್ನು ಆಸ್ವಾದಿಸುತ್ತಾ ವ್ಯಾಪಾರ, ವಹಿವಾಟು, ಉದ್ಯಮ, ವಿದೇಶ
ಪ್ರವಾಸ…ಹೀಗೆ ಹತ್ತು ಹಲವು ವಿಷಯಗಳನ್ನು ಕುರಿತು ಚರ್ಚಿಸುವ ತಾಣ. ಅಲ್ಲಿ ಕುಳಿತು
ಚರ್ಚೆ ನಡೆಯಿತು ಎಂದರೆ ಒಂದು ತೀರ್ಮಾನಕ್ಕೆ ಬಂದಿದೇವೆ ಎಂದೇ ಅರ್ಥ. ಅದರಲ್ಲೂ ತರುಣ
ತರುಣಿಯರಿಗೆ ಕಾಫಿ ಡೇ ಮಳಿಗೆ ಹೇಳಿ ಮಾಡಿಸಿದ ಕೇಂದ್ರ. ಅಲ್ಲಿ ನಿಮ್ಮನ್ನು ಯಾರೂ
ಮಾತನಾಡಿಸುವವರಿಲ್ಲ, ಗಜಿಬಿಜಿ ಇಲ್ಲ. ಪ್ರಶಾಂತ ವಾತಾವರಣ, ಯುವ ಪೀಳಿಗೆಗೆ ಮತ್ತೇನು
ಬೇಕು ? ಭಾರತದಲ್ಲಿ ಇಂತಹ ನವನವೀನ ಕಲ್ಪನೆಯ ಕಾಫಿ ಡೇ ಹುಟ್ಟು ಹಾಕಿದ್ದು ವಿಜಿ
ಸಿದ್ದಾರ್ಥ. ಕಾಫಿ ತವರೂರು ಚಿಕ್ಕಮಗಳೂರು ಮೂಲದ ಒಬ್ಬ ಯುವಕ ಸಿದ್ದಾರ್ಥ ಕಾಫಿಯ
ಸ್ವಾದವನ್ನು ಇಡೀ ವಿಶ್ವಕ್ಕೆ ಪಸರಿಸಿ ಎರಡು ದಶಕಗಳ ಕಾಲ ಕಾಫಿ ಜಗತ್ತಿನ ಸಾಮ್ರಾಟನಾದ
ಕಥೆ ಅಸಾಧಾರಣವಾದುದು. 1996 ಸಮಯದಲ್ಲಿ ಕಾಫಿ ಡೇ ಎಂಬ ಪರಿಕಲ್ಪನೆಯನ್ನು ಹುಟ್ಟು
ಹಾಕಿ ಒಂದು ಕಪ್ ಕಾಫಿ ಮುಂದಿದ್ದರೆ ಏನೆಲ್ಲಾ ಸಾಧಿಸಬಹುದು ಎನ್ನುವುದಕ್ಕೆ
ಸಿದ್ದಾರ್ಥ ಜ್ವಲಂತ ಸಾಕ್ಷಿ.
ಸಿದ್ದಾರ್ಥ ಕಾಫಿ ಮನೆತನಕ್ಕೆ ಸೇರಿದ ಶ್ರೀಮಂತ ಕುಟುಂಬದ ಕುಡಿ. 140 ವರ್ಷಗಳಿಂದ
ಕಾಫಿ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಕುಟುಂಬದ ಗಂಗಯ್ಯ ಇವರ ತಂದೆ.
ಹಾಗೆಯೇ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಪುತ್ರಿ ಮಾಳವಿಕಾ ಸಿದ್ದಾರ್ಥ ಅವರ
ಪತ್ನಿ. ಸಿದ್ದಾರ್ಥ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ
ಸ್ನಾತಕೋತ್ತರ ಪದವಿ ಪಡೆದು ಮುಂಬಯಿಯ ಜೆಎಂ ಫೈನಾನ್ಸ್ ಕಂಪನಿ ಸೇರುತ್ತಾರೆ. ನಂತರ
ಮಹೇಂದ್ರ ಕಂಪನಿಯಲ್ಲಿ ಮಾರುಕಟ್ಟೆ ನಿರ್ವಹಣಾ ತರಬೇತುದಾರರಾಗಿ ಯಶಸ್ವಿಯಾಗಿ ಕಾರ್ಯ
ನಿರ್ವಹಿಸಿ ಕಿರಿಯ ವಯಸ್ಸಿಗೆ ಎಲ್ಲರ ಗಮನ ಸೆಳೆದಿದ್ದು ಇವರ ಹೆಗ್ಗಳಿಕೆ. ಆಗ
ಇವರಿಗೆ ಕೇವಲ 24 ವರ್ಷ ಎಂದರೆ ಅಚ್ಚರಿಯಾದೀತು. ಅದೇಕೊ ಇನ್ನೊಬ್ಬರ ಕೈಕೆಳಗೆ ಕೆಲಸ
ಮಾಡಲು ಇಷ್ಟಪಡದ ಸಿದ್ದಾರ್ಥ ಎರಡೇ ವರ್ಷಗಳಲ್ಲಿ ಬೆಂಗಳೂರಿಗೆ ಮರಳಿ, ತಮ್ಮದೇ ಸ್ವಂತ
ಉದ್ದಿಮೆ ಆರಂಭಿಸುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಪರಿಣಿತಿ ಹೊಂದಿದ್ದ ಇವರು
ಸೆವೆನ್ ಸೆಕ್ಯೂರಿಟಿ ಎಂಬ ಕಂಪನಿಯನ್ನು ಹುಟ್ಟು ಹಾಕುತಾರೆ. 2000 ಇಸವಿಯಲ್ಲಿ
ವೇ2ವೆಲ್ತ್ ಎಂದು ಮರು ನಾಮಕರಣ ಮಾಡುತ್ತಾರೆ. ಸಂಪೂರ್ಣವಾಗಿ ಷೇರು ಮಾರುಕಟ್ಟೆಯಲ್ಲಿ
ತೊಡಗಿಸಿಕೊಳ್ಳುವ ಇವರು ಗಳಿಸಿದ ಲಾಭದಿಂದ 10 ಸಾವಿರ ಎಕರೆ ಕಾಫಿ ತೋಟವನ್ನು ಖರೀದಿಸಿ
ಅಭಿವೃದ್ಧಿಪಡಿಸುತ್ತಾರೆ.
1993ರಲ್ಲಿಯೇ ಅಮಾಲ್ಗಮೇಟಸ್ ಬೀನ್ ಕಾಫಿ ಟ್ರೇಡಿಂಗ್ ಕಂಪನಿ(ಎಬಿಸಿಟಿಸಿಎಲ್)
ಸ್ಥಾಪಿಸಿ ಕಾಫಿ ರಫ್ತಿಗೆ ಉತ್ತೇಜನ ನೀಡುತ್ತಾರೆ. ಮಾರುಕಟ್ಟೆ ವಿಷಯದಲ್ಲಿ ಅನುಭವ
ಹೊಂದಿದ್ದ ಇವರು ಕಾಫಿ ರಪ್ತಿನತ್ತ ಗಮನ ಹರಿಸುತ್ತಾರೆ. ತಮ್ಮ ತೋಟದಿಂದ 3000 ಟನ್
ಕಾಫಿ ಉತ್ಪಾದಿಸುತ್ತಿದ್ದ ಇವರು ನಂತರದ ದಿನಗಳಲ್ಲಿ 20,000 ಟನ್ ಕಾಫಿ ರಫ್ತು
ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಎರಡೇ ವರ್ಷಗಳಲ್ಲಿ ರಫ್ತು ಉದ್ಯಮದಲ್ಲಿ ಎರಡನೇ
ಸ್ಥಾನಕ್ಕೆ ಏರುತಾರೆ. ಆರಂಭದಲ್ಲಿ ಕೇವಲ 6 ಕೋಟಿ ರು.ಮಾತ್ರ ವಹಿವಾಟು ನಡೆಸುವ ಇವರು
ಕೆಲವೇ ವರ್ಷಗಳಲ್ಲಿ 2,500 ಕೋಟಿ ರು. ವಹಿವಾಟು ನಡೆಸುವ ಮೂಲಕ ಜಗತ್ತಿನ ಗಮನ
ಸೆಳೆಯುತ್ತಾರೆ.

ಕೈಹಿಡಿದ ಕಾಫಿ ಡೇ
ಜರ್ಮನಿಯ ಚಿಬು ಎಂಬ ಕಾಫಿ ಉದ್ಯಮದ ಪ್ರೇರಣೆ ಪಡೆದ ಇವರು 1996ರಲ್ಲಿ ಬೆಂಗಳೂರಿನ
ಬ್ರಿಗೇಡ್ ರಸ್ತೆಯಲ್ಲಿ ಮೊದಲ ಬಾರಿಗೆ ಕೆಫೆ ಕಾಫಿ ಡೇ(ಸಿಸಿಡಿ) ಆರಂಭಿಸುತ್ತಾರೆ. ಈ
ಮೂಲಕ ಕಾಫಿ ಕುಡಿಯುವ ಪದ್ದತಿಯನ್ನೇ ಬದಲಾಯಿಸಿ ಬಿಡುತ್ತಾರೆ. ದಾವಂತದಲ್ಲಿ ದರ್ಶಿನಿ
ಮುಂದೆ ಕಾಫಿ ಹೀರಿ ತೆರಳುತ್ತಿದ್ದ ಕಾಲ ಅದು. ಕಾಫಿಯನ್ನು ಹೀಗೂ ಆಸ್ವಾದಿಸಬಹುದು
ಎನ್ನುವುದನ್ನು ಮೊದಲ ಬಾರಿಗೆ ವಿಶ್ವಕ್ಕೆ ಪರಿಚಯಿಸಿಕೊಟ್ಟರು. ಸಿಸಿಡಿಯಲ್ಲಿ
ಕುಳಿತು ವ್ಯಾಪಾರ, ವಹಿವಾಟು, ಸಂಬಂಧ, ಸೇರಿದಂತೆ ಜಗತ್ತಿನ ಎಲ್ಲ ವಿದ್ಯಾಮಾನಗಳನ್ನು
ಚರ್ಚಿಸಲೂಬಹುದು ಎನ್ನುವುದನ್ನು ತೋರಿಸಿಕೊಟ್ಟ ಹೆಗ್ಗಳಿಕೆ ಇವರದ್ದು. ಇನ್ನು
ಪ್ರೇಮಿಗಳಿಗೆ, ನವ ವಿವಾಹಿತರಿಗೆ ಕಾಫಿ ಡೇ ಅಚ್ಚುಮೆಚ್ಚಿನ ಸ್ಥಳ ಎಂದು
ಪ್ರತ್ಯೇಕವಾಗಿ ಹೇಳಬೇಕಿಲ್ಲ. ಒಂದು ಕಪ್ ಕಾಫಿಯ ಜತೆ ಒಂದು ಗಂಟೆ ಇಂಟರ್‍ನೆಟ್‍ಗೆ
100 ರೂ ಶುಲ್ಕ ನಿಗಧಿಪಡಿಸುತಾರೆ. ಇದುವರೆಗೂ ಬೆಂಗಳೂರು ನಿವೃತ್ತರ ಸ್ವರ್ಗ ಎಂಬ
ಹಣೆಪಟ್ಟಿ ಕಟ್ಟಿಕೊಂಡಿತ್ತು. ಜಗತ್ತಿನ ಐಟಿ ಉದ್ಯಮದ ಕೇಂದÀ್ರ ಸ್ಥಾನವಾಗುತ್ತಾ
ಆಧುನಿಕ ಜೀವನ ಶೈಲಿಗೆ ಒಗ್ಗಿಕೊಳ್ಳುತ್ತಿದ್ದ ಕಾಲ ಅದು. ಪಾಶ್ಚಾತ್ಯ ಜೀವನ ಶೈಲಿಗೆ
ಹೇಳಿ ಮಾಡಿಸಿದಂತಿದ್ದ ಕಾಫಿ ಡೇ ಅಲ್ಲಿಂದ ಯಾವತ್ತೂ ಹಿಂತಿರುಗಿ ನೋಡುವುದಿಲ್ಲ.
ಈ ಯಶಸ್ಸಿನಿಂದ ಪ್ರೇರಣೆ ಪಡೆದ ಸಿದ್ದಾರ್ಥ ದೇಶ ವಿದೇಶಗಳಲ್ಲಿ ಕಾಫಿ ಡೇ ಉದ್ಯಮವನ್ನು
ವಿಸ್ತರಿಸುತ್ತಾ ಹೋಗುತ್ತಾರೆ. 1700ಕ್ಕೂ ಹೆಚ್ಚು ಕೆಫೆಗಳನ್ನು ಆರಂಭಿಸಿ 4,264
ಕೋಟಿ ರುಗಳ ವಹಿವಾಟು ನಡೆಸುತ್ತಾರೆ. 12 ಸಾವಿರ ಎಕರೆ ಕಾಫಿ ತೋಟದ ಒಡೆಯನಾಗಿ
2015ರಲ್ಲಿ ಫೋಬ್ರ್ಸ್ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ. ಇಂದು ಜಗತ್ತಿನ 200
ನಗರಗಳಲ್ಲಿ 1700 ಕೆಫೆಗಳು ನಡೆಯುತ್ತಿವೆ. ಮಲೇಷಿಯಾ, ನೇಪಾಳ, ಈಜಿಪ್ಟ್ ಮೊದಲಾದ
ದೇಶಗಳಲ್ಲಿಯೂ ಕಾಫಿ ಡೇ ಶಾಖೆಗಳಿವೆ. 48,000 ವೆಂಡಿಂಗ್ ಮೆಷಿನ್‍ಗಳು, 532
ಕಿಯೋಸ್ಕ್‍ಗಳು ಮತ್ತು 403 ಕಾಫಿ ಬೀಜ ಮಾರಾಟ ಕೇಂದ್ರಗಳನ್ನು ಆರಂಭಿಸುತ್ತಾರೆ. ಕಾಫಿ

About Author