AVIN TV

Latest Online Breaking News

ಎಸ್‌ಎಲ್‌ ಧರ್ಮೇಗೌಡ ಆತ್ಮಹತ್ಯೆ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು ಸಿದ್ಧತೆ

Featured Video Play Icon

[ ರಾಜ್ಯದ ವಿಧಾನಪರಿಷತ್‌ ಉಪಸಭಾಪತಿ ಎಸ್‌ಎಲ್‌ ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಲ್ಲಿಂದ ನಂತರ ಸಖರಾಯಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಜಿಲ್ಲೆಯಲ್ಲಿ ಧರ್ಮೇಗೌಡರು ಭಾರೀ ಅಭಿಮಾನಿಗಳನ್ನು ಹೊಂದಿದ್ದು ಸಜ್ಜನಿಕೆಯ ರಾಜಕಾರಣಿ ಎಂದೇ ಖ್ಯಾತಿ ಪಡೆದಿದ್ದಾರೆ.

ಹೀಗಾಗಿ ಅವರ ಅಭಿಮಾನಿಗಳು, ರಾಜಕೀಯ ನಾಯಕರು, ಸಂಬಂಧಿಕರ ಅಂತಿಮ ದರ್ಶನಕ್ಕೆ ಇಲ್ಲಿನ ಕಾಲೇಜು ಆವರಣದಲ್ಲಿ ಪಾರ್ಥಿವ ಶರೀರವನ್ನು ಇಡಲಾಗುತ್ತದೆ. ಇನ್ನು ಸಖರಾಯಪಟ್ಟಣ ಸಮೀಪದ ಸರಪನಹಳ್ಳಿಯ ತೋಟದ ಮನೆಯಲ್ಲಿ ಧರ್ಮೇಗೌಡ ಅವರ ಅಂತ್ಯಸಂಸ್ಕಾರ ನೆರವೇರಲಿದೆ. ಇಂದು ಸಂಜೆ ಅವರ ಅಂತ್ಯ ಸಂಸ್ಕಾರ ನಡೆಯಲಿದೆ

ಇವರ ಆತ್ಮಹತ್ಯೆ ಸುದ್ದಿ ಇದೀಗ ಇಡೀ ಕಾಫಿನಾಡು ಜಿಲ್ಲೆಯನ್ನೇ ಶೋಕಸಾಗರಕ್ಕೆ ತಳ್ಳಿದೆ. ಪ್ರಮುಖ ರಾಜಕೀಯ ನಾಯಕರು ಕೂಡ ಸಂತಾಪ ಸೂಚಿಸಿದ್ದಾರೆ. ಸದ್ಯ ಆತ್ಮಹತ್ಯೆ ಮಾಡಿಕೊಂಡಿರುವ ಧರ್ಮೇಗೌಡ ಅವರ ಮೃತದೇಹವನ್ನು ರೈಲ್ವೇ ಟ್ರ್ಯಾಕ್‌ ಬಳಿಯಿಂದ ಮರಣೋತ್ತರ ಪರೀಕ್ಷೆ ಹಿನ್ನೆಲೆ ಸರಕಾರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಚಿಕ್ಕಮಗಳೂರು

ಧರ್ಮೇಗೌಡ ಆತ್ಮಹತ್ಯೆ ಹಿನ್ನೆಲೆ

ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ಸಖರಾಯಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಿದ್ಧತೆ

ಸಖರಾಯಪಟ್ಟಣದ ಸರಪನಹಳ್ಳಿ ಸಮೀಪದ ತೋಟದಲ್ಲಿ ಅಂತ್ಯ ಸಂಸ್ಕಾರ

ಅಂತ್ಯ ಸಂಸ್ಕಾರಕ್ಕೆ ಹಲವು ಗಣ್ಯರು ಬರುವ ಸಾಧ್ಯತೆ

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!