ಮಲಪ್ರಭಾ ಸಕ್ಕರೆ ಕಾರ್ಖಾನೆಯ ಸುತ್ತಮುತ್ತಲ ಹೊಲಗಳ ರೈತರ ಸಮಸ್ಯೆಗಳಿಗೆ ಮುಕ್ತಿಕೊಡಿ: ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಮನವಿ #avintvcom

ಮಲಪ್ರಭಾ ಸಕ್ಕರೆ ಕಾರ್ಖಾನೆಯ ಸುತ್ತಮುತ್ತಲ ಹೊಲಗಳ ರೈತರ ಸಮಸ್ಯೆಗಳಿಗೆ ಮುಕ್ತಿಕೊಡಿ: ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಮನವಿ
ಸ್ಥಳ: ಇಟಗಿ ಕ್ರಾಸ್.
ಹೌದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಮಲಪ್ರಭಾ ಸಕ್ಕರೆ ಕಾರ್ಖಾನೆಯು ಪ್ರಸ್ತುತ ಕಬ್ಬಿನ ನುರಿತ ಮಾಡಿ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದೆ. ಆದರೇ ಕಳೆದ 40 ವರ್ಷಗಳಿಂದ ಸಕ್ಕರೆ ಕಾರ್ಖಾನೆ ಯ ಸರಹದ್ದುವಿನ ಸುತ್ತಮುತ್ತಲಿನ ರೈತರ ಹೊಲಗಳಿಗೆ ಕಾರ್ಖಾನೆಯಿಂದ ಉಪಯೋಗಿಸಲ್ಪಟ್ಟ ನೀರು ರೈತರ ಹೊಲಗಳಿಗೆ ಜವಳು ರೂಪದಲ್ಲಿ ಹೋಗುತ್ತಿದ್ದು ರೈತರಿಗೆ ವರ್ಷದ ಬಹುತೇಕ ದಿನಗಳಲ್ಲಿ ತುಂಬಾನೇ ತೊಂದರೆ ಆಗುತ್ತಿದೆ. ಇದರ ಜೊತೆಗೆ ವಿಷಪೂರಿತ ರಾಸಾಯನಿಕ ಮಿಶ್ರಿತ ನೀರಿನ ಅಂಶವು ಇದ್ದು ಹೊಲಗಳಲ್ಲಿ ಬೆಳೆಯಿತ್ತಿರುವ ಬೆಳೆಗಳು ಸಹ ಪಲವತ್ತತೆಯಿಂದ ಬೆಳೆಯುತ್ತಿಲ್ಲ. ಇದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಇಂದು ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ನೇತೃತ್ವದ ಸಕ್ಕರೆ ಕಾರ್ಖಾನೆಯ ಸುತ್ತಮುತ್ತಲಿನ ರೈತರ ನಿಯೋಗ ಕಾರ್ಖಾನೆಯ ಅಧ್ಯಕ್ಷ ಶ್ರೀ ನಾಸಿರ್ ಬಾಗವಾನ್ ಅವರನ್ನು ಭೇಟಿ ಮಾಡಿ ಈ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯ ಮಾಡಿ ಮನವಿ ಸಲ್ಲಿಸಿತು. ಇನ್ನಾದರೂ 40 ವರ್ಷಗಳಿಂದ ಇರುವ ಸಮಸ್ಯೆಗೆ ಶಾಶ್ವತವಾಗಿ ಬಗೆಹರಿಸುವರೇ ಎಂಬುದನ್ನು ಕಾಡುನೋಡಬೇಕಿದೆ. 🖋️🙏 ವಂದನೆಗಳು. ಶ್ರೀ ಬಸವರಾಜು. ಪತ್ರಕರ್ತರು ಹಾಗೂ ಹೋರಾಟಗಾರರು.