ಗೋಪಾಲಪುರ ಕ್ಯಾಥೋಲಿಕ್ ಚರ್ಚ್ನ ಕ್ರೈಸ್ತ ಬಾಂಧವರು ಸರ್ಕಾರದ ನಿಯಮದಂತೆ ಕ್ರಿಸ್ ಮಸ್ ಹಬ್ಬವನ್ನು ವಿಜ್ರಂಭಣೆಯಿಂದ ಆಚರಣೆ #avintvcom

ಗೋಪಾಲಪುರ ಕ್ಯಾಥೋಲಿಕ್ ಚರ್ಚ್ ನಲ್ಲಿ ಕ್ರಿಸ್ ಮಸ್ ಆಚರಣೆ
ಶನಿವಾರಸಂತೆ ಹೋಬಳಿಗೆ ಸೇರಿದ ಗೋಪಾಲಪುರ ಕ್ಯಾಥೋಲಿಕ್ ಚರ್ಚ್ನ ಕ್ರೈಸ್ತ ಬಾಂಧವರು ಸರ್ಕಾರದ ನಿಯಮದಂತೆ ಕ್ರಿಸ್ ಮಸ್ ಹಬ್ಬವನ್ನು ವಿಜ್ರಂಭಣೆಯಿಂದ ಆಚರಣೆ ಮಾಡಲಾಯಿತು .ಚರ್ಚ್‌ನ ದೀಪಾಲಂಕೃತದಿಂದ ಮತ್ತು ಸ್ಟಾರ್ ನಿಂದ ಕಂಗೊಳಿಸುತ್ತಿತ್ತು . ರಾತ್ರಿ 10.30 ಗಂಟೆಗೆ ಕ್ರಿಸ್ಮಸ್ ಗೀತಾ ಭಜನೆಯಿಂದ ಪ್ರಾರಂಭವಾಯ್ತು .ಸರಿಯಾಗಿ 11 ಗಂಟೆಗೆ ದೇವಾಲಯದ ಬಲಿಪೂಜೆ ಪ್ರಾರಂಭವಾಯ್ತು ಮತ್ತು ಬಾಲಯೇಸುವಿನ ಪ್ರತಿಮೆಯನ್ನು ಸುಂದರವಾಗಿ ಅಲಂಕೃತಗೊಂಡ ಗೋದಲಿಯೊಳಗೆ ಇಟ್ಟು ಆರಾಧಿಸಲಾಯಿತು .ಈ ಸಂದರ್ಭದಲ್ಲಿ ಚರ್ಚ್ ಫಾದರ್ ಜಾಕಬ್ ಕೊಳನೂರು ಮಾತನಾಡಿ ಮೊದಲಿಗೆ ಕ್ರೈಸ್ತ ಬಂದರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು ತಿಳಿಸಿದರು .ಮತ್ತು ಕೊರೊನಾ ಕಾಯಿಲೆಯಿಂದ ಯಾರಿಗೂ ಬಾಧಿಸದಂತೆ ಪ್ರಾರ್ಥಿಸಲಾಯಿತು . ಇನ್ನು ಮುಂದೆ ಕೊರೋನಾ ಕಾಯಿಲೆ ಯಾರಿಗೂ ತಗಲದಂತೆ ಪ್ರಾರ್ಥಿಸಲಾಯಿತು .ಮತ್ತು ಇದೇ ಸಂದರ್ಭದಲ್ಲಿ ಎಲ್ಲ ಕ್ರೈಸ್ತ ಬಾಂಧವರಿಗೆ ಕೇಕನ್ನು ಹಂಚಿ ಕ್ರಿಸ್ ಮಸ್ ಹಬ್ಬವನ್ನು ವಿಜ್ರಮಣೆಯಿಂದ ಆಚರಿಸಲಾಯಿತು .ಈ ಸಂದರ್ಭದಲ್ಲಿ ಫಾದರ್ ಜಾಕಪ್ ಕೊಳನೂರು ಮಾತನಾಡಿ ನಾವು ಸರ್ಕಾರದ ನಿಯಮದಂತೆ ಕ್ರಿಸ್ ಮಸ್ ಹಬ್ಬವನ್ನು ಆಚರಿಸಲಾಗ್ತಿದೆ ಮತ್ತು ಚರ್ಚೆಗೆ ಬರುವ ಭಕ್ತಾದಿಗಳಿಗೆ ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಯಿತು ಮತ್ತು ಎಲ್ಲರಿಗೂ ಮಾಸ್ ಕಡ್ಡಾಯ ಮಾಡಲಾಗಿತ್ತು … ಈ ಸಂದರ್ಭದಲ್ಲಿ ಗೋಪಲಪುರ ಚರ್ಚ್ ಫಾದರ್ ಜಾಕಪ್ ಕೊಳನೂರು ಮತ್ತು ಬಿಟ್ಟಿಕಟೆ ಮತ್ತು ಗೋಪಲಪುರ ಮತ್ತು ಶನಿವಾರಸಂತೆ ಮತ್ತು ಕಳಲೆ ಹೊಸುರು ಕೈಸ್ತ ಭಕ್ತರು ಪಾಲ್ಗೊಂಡಿದ್ದರು