AVIN TV

Latest Online Breaking News

ಭಾರತೀಯ ಸ್ಟೇಟ ಬ್ಯಾಂಕ A D B I ವತಿಯಿಂದ ರಾಷ್ಟ್ರೀಯ ರೈತ ದಿನಾಚರಣೆಯ ಅಂಗವಾಗಿ ಸನ್ಮಾನಿಸಲಾಯಿತು.#avintvcom

Featured Video Play Icon

ಭಾರತೀಯ ಸ್ಟೇಟ ಬ್ಯಾಂಕ   A D B I ವತಿಯಿಂದ ರಾಷ್ಟ್ರೀಯ ರೈತ ದಿನಾಚರಣೆಯ ಅಂಗವಾಗಿ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು.

ಬಂದಂತಹ ರೈತರಿಗೆ ಮಾಸ್ಕ ಹಾಗೂ ಗುಲಾಬಿ ಹೂವುಗಳನ್ನು ಕೊಟ್ಟು ಬರಮಾಡಿಕೊಂಡ ಬ್ಯಾಂಕ್ ಸಿಬ್ಬಂದಿ ವರ್ಗ ರಾಷ್ಟ್ರೀಯ ರೈತ ದಿನಾಚರಣೆಯನ್ನು ತುಂಬಾ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಿದರು.

ಇನ್ನು ಪ್ರಾಸ್ತಾವಿಕ ಮಾತನಾಡಿದ ಭಾರತೀಯ ಸ್ಟೇಟ್ ಬ್ಯಾಂಕ್ ಕೃಷಿ ಅಭಿವೃದ್ಧಿ ಶಾಖೆಯ ಉಪ ಮುಖ್ಯ ಪ್ರಬಂಧಕ ರಾದ ರಾಮಪ್ಪ ಗಾಣಿಗೆರ ಅವರು ರೈತರ ಏಳಿಗೆಗಾಗಿ ಸಾಕಷ್ಟು ಶ್ರಮ ಪಟ್ಟ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದಂದು ರಾಷ್ಟ್ರೀಯ ರೈತ ದಿನಾಚರಣೆ ಆಚರಿಸುತ್ತಾರೆ ಎಂದು ಹೇಳಿ, ರೈತ ಇರದೇ ನಾಡೆ ಇಲ್ಲಾ, ರೈತನೇ ದೇಶದ ಬೆನ್ನೆಲುಬು ಅಂತಹಾ ರೈತನಿಗೆ ನಮ್ಮ ಬ್ಯಾಂಕಿನ ಸಹಾಯ, ಸಹಕಾರ ಯಾವತ್ತಿಗೂ ಇರುತ್ತದೆ ಎಂದು ಹೇಳುತ್ತಾ, ಮಣ್ಣಿನ ರಸಸಾರ, ಬೆಳೆಗಳಿಗೆ ಬೇಕಾದ ಪೋಷಕಾಂಶಗಳು, ಲಘು ಪೋಷಕಾಂಶಗಳು ಮತ್ತು ಸೂಕ್ಷ್ಮ ಪೋಷಕಾಂಶಗಳ ಬಗ್ಗೆ ವಿವರಿಸುತ್ತ ಸಾವಯವ ಕೃಷಿ ಯತ್ತ ಹೆಚ್ಚು ಗಮನ ಹರಿಸುವಂತೆ ತಿಳುವಳಿಕೆ ಮೂಡಿಸಿದರು .

ರೈತರಿಗೆ ತಮ್ಮ ಜಮೀನನ್ನು ನಿರಾವರಿಗೆ ಒಳಪಡಿಸಲು ಸಾಕಷ್ಟು ಸಹಾಯ ಒದಗಿಸಿದ ಸ್ಟೇಟ್ ಬ್ಯಾಂಕ ಕಾರಣದಿಂದಾಗಿ ಈ ಭಾಗದಲ್ಲಿ ಸಾಕಷ್ಟು ಕೈಗಾರಿಕಾ ಕ್ರಾಂತಿ ಕೈಗೊಳ್ಳಲು ಸಹಾಯವಾಗಿದೆ ಈ ಭಾಗದ ಜನರು ನೀರಾವರಿ ಬೆಳೆಗಳಾದ ಕಬ್ಬು ಅರಿಶಿನ ದ್ರಾಕ್ಷಿ ಮುಂತಾದ ಹಲವಾರು ಬೆಳೆಗಳನ್ನು ಬೆಳೆದಿದ್ದರಿಂದ ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆಗಳು ಮತ್ತು ಕೋಲ್ಡ್ ಸ್ಟೋರೇಜಗಳು ಬಂದಿದ್ದರಿಂದಾಗಿ ಈ ಭಾಗದಲ್ಲಿ ಕೈಗಾರಿಕಾ ಕ್ರಾಂತಿ ಉಂಟಾಗಲು ಸಹಾಯವಾಗಿದೆ ಎಂದು ನೆರೆದಿದ್ದ ರೈತರಲ್ಲಿ ಒಬ್ಬರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ನೆರೆದಿದ್ದ ರೈತರಲ್ಲಿ ಮತ್ತೋರ್ವ ರೈತ ಭಾರತೀಯ ಸ್ಟೇಟ್ ಬ್ಯಾಂಕಿನಿಂದ ಹಲವಾರು ಬಾರಿ ಕಟಬಾಕಿ ಸಾಲಗಾರರಿಗೆ ಸಾಲ ಮರುಪಾವತಿಸಿ ಋಣ ಮುಕ್ತರಾಗಲು ಅವಕಾಶ ಕಲ್ಪಿಸಿಕೊಟ್ಟಿದು ಮಾನವೀಯತೆ ದೃಷ್ಟಿಯಿಂದ ಸ್ವಾಗತಾರ್ಹ ಆದರೆ ಸರಿಯಾದ ಸಮಯಕ್ಕೆ ಸಾಲ  ಮರುಪಾವತಿಸಿದ ರೈತರಿಗೆ ಯಾವುದೇ ಅನುಕೂಲ ಕಲ್ಪಿಸದಿರುವುದು ಖೇದಕರ ಸಂಗತಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

ಪ್ರಸ್ತುತ 4% ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಮಾತ್ರ ಸಾಲ ಕೊಡಲಾಗುತ್ತಿದ್ದು ಅದನ್ನು 10 ಲಕ್ಷದ ವರೆಗೆ ವಿಸ್ತರಿಸಿದರೆ ದೊಡ್ಡ ರೈತರಿಗೂ ಅನುಕೂಲವಾಗುತ್ತೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಶಿವರಾಯ ಯಲಡಗಿ ಮಾತನಾಡುತ್ತಾ ಜಮಖಂಡಿ,  ಅಥಣಿ, ಬಬಲೇಶ್ವರ, ರಾಯಬಾಗ,  ಮುಧೋಳ, ಈ ಎಲ್ಲ ತಾಲೂಕಿನ ರೈತರ ಅಭಿವೃದ್ಧಿಯಲ್ಲಿ ಈ ಬ್ಯಾಂಕ ಸಿಂಹಪಾಲು ಹೊಂದಿದೆ, ದಯವಿಟ್ಟು ಯಾವುದೇ ರೈತರು ಸಾಲ ಕಟಬಾಕಿ ಮಾಡದೆ, ಸರಿಯಾದ ಸಮಯಕ್ಕೆ ಮರುಪಾವತಿ ಮಾಡ ಬೇಕು ಇಲ್ಲದಿದ್ದರೆ, ರೈತರಿಗೆ ಸಾಲ ನೀಡಲು ಬ್ಯಾಂಕುಗಳು ಸಾಲ ನೀಡಲು ಹಿಂದೇಟು ಹಾಕುವ ದಿನಗಳು ದೂರ ವಿಲ್ಲ ಎಂದು ಕಿವಿ ಮಾತು ಹೇಳಿದರು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಮುಖ್ಯ ಶಾಖಾ ವ್ಯವಸ್ಥಾಪಕರಾದ ಕಿರಣ ಕುಮಾರ ಎಮ ಡಿ,   ಮುಖ್ಯ ಅತಿಥಿಗಳಾಗಿ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಹಾಗೂ ಪ್ರಗತಿಪರ ರೈತ ಶ್ರೀಯುತ ಶಿವರಾಯ ಗುರುಪಾದ ಯಲಡಗಿ. ಸಾ// ಶೇಗುಣಸಿ . ಮತ್ತೋರ್ವ ಅತಿಥಿ ಯಾಗಿ ಪ್ರಗತಿಪರ ರೈತ ಪರಪ್ಪ ಕಲ್ಲಪ್ಪ ಹಂದಿಗುಂದ ಸಾ// ಕಾಲತಿಪ್ಪಿ ತಾಲೂಕು ರಬಕವಿ ಬನಹಟ್ಟಿ. ಉಪ ಮುಖ್ಯ ಪ್ರಬಂಧಕರು ಶ್ರೀಯುತ ಲಕ್ಷ್ಮಣ  ನಂದೇಶ್ವರ ಭಾರತೀಯ ಸ್ಟೇಟ ಬ್ಯಾಂಕ ಕೃಷಿ ಅಭಿವೃದ್ಧಿ ಶಾಖೆ ಜಮಖಂಡಿ.  ರಾಮ ಲಕ್ಷ್ಮಣ ಗಾಣಿಗೇರ ಉಪ ಶಾಖಾ ವ್ಯವಸ್ಥಾಪಕರು ಭಾಗ ವಹಿಸಿದ್ದರು. ನಿರೂಪಣೆ ಯನ್ನು ಭೀಮಪ್ಪ  ನಿಂಗಪ್ಪ ಪೂಜಾರಿ ಸಾ !! ಶೇಗುಣಸಿ ಶಿಕ್ಷಕರು ನಿರ್ವಹಿಸಿದರು.

ವರದಿ    ಪೀರು ನಂದೇಶ್ವರಃ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!