ಆನೆ ದಾಳಿಗೆ ವಾಚರ್ ಬಲಿ.ಅರಣ್ಯ ಗಸ್ತಿನಲ್ಲಿದ್ದ ವಾಚರ್ ರೂಬ್ಬರನ್ನು ಬಲಿ ತೆಗೆದುಕೊಂಡಿರುವ ಘಟನೆ #avintvcom

ಆನೆ ದಾಳಿಗೆ ವಾಚರ್ ಬಲಿ.
ಕೊಡಗು:ಅರಣ್ಯ ಗಸ್ತಿನಲ್ಲಿದ್ದ ಸಂದರ್ಭ ಕಾಡಾನೆಯೊಂದು ಅಟ್ಟಾಡಿಸಿಕೊಂಡು ಮಾರಣಾತಿಕವಾಗಿ ದಾಳಿ ಮಾಡಿ ವಾಚರ್ ರೂಬ್ಬರನ್ನು ಬಲಿ ತೆಗೆದುಕೊಂಡಿರುವ ಘಟನೆ ನಾಗರಹೊಳೆ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ನಡೆದಿದೆ.ನಾಗರಹೊಳೆ ಹುಲಿ ಸಂರಕ್ಷಿತಾ ಪ್ರದೇಶದ ಕ್ಷೇಮಾಭಿವೃದ್ದಿ ನೌಕರ ಗುರುಪ್ರಸಾದ್ ಮೃತಪಟ್ಟ ದುರ್ಧೈವಿ. ಕೆಲವು ವರ್ಷಗಳಿಂದ ಗೆಸ್ಟ್ ಹೌಸ್,ಐಬಿ ಗಳಲ್ಲಿ ಇಲಾಖೆಯ ಅಡುಗೆ ಕೆಲಸ ಮಾಡಿಕೊಂಡಿದ್ದ ಹಂಗಾಮಿ ನೌಕರ ಗುರುಪ್ರಸಾದ್ ಹಲವು ಅಧಿಕಾರಿಗಳಿಗೆ ಖಾಯಂ ಕೆಲಸ ನೀಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ, ಆದರೆ ಇಲಾಖೆಯ ಕೇವಲ ಸಿಬ್ಬಂಧಿ ಎಂದು ಗುರುತಿಸಲಾಗಿತ್ತು ಎಂದು ತಿಳಿದು ಬಂದಿದೆ.