ನೀರಿನ ಘಟಕದ ನೀರು ಆಸ್ಪತ್ರೆ ಆವರಣಕ್ಕೆ ಲಗ್ಗೆ,ಸಾರ್ವಜನಿಕರಿಗೆ ಕಿರಿ ಕಿರಿ #avintvcom

ಶು.ಕು.ನೀರಿನ ಘಟಕದ ನೀರು ಆಸ್ಪತ್ರೆ ಆವರಣಕ್ಕೆ ಲಗ್ಗೆ,ಸಾರ್ವಜನಿಕರಿಗೆ ಕಿರಿ ಕಿರಿ<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹೊಂದಿಕೊಂಡಿರುವ,ಶುದ್ಧಕುಡಿಯೋ ನೀರಿನ ಘಟಕದ ಹೆಚ್ಚುವರಿ ನೀರು ಆಸ್ಪತ್ರೆ ಆವರಣದಲ್ಲಿ ಹರಿದು ಪೋಲಾಗುತ್ತಿದೆ.ಘಟಕದಿಂದ ನೀರು ಆಗಾಗ್ಗೆ ಲಗ್ಗೆ ಇಡುತ್ತಿದ್ದು ಆಸ್ಪತ್ರೆ ಆವರಣದ ಒಂದೆಡೆ ಕೆಸರು ಗದ್ದೆ ನಿರ್ಮಾಣವಾಗಿದೆ, ಇದರಿಂದಾಗಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸೊಳ್ಳೆಗಳ ಹಾವಳಿ ಮಿತಿಮೀರಿದೆ.ಸಿಬ್ಬಂದಿಗೆ ಹಾಗೂ ರೋಗಿಗಳಿಗೆ, ಸಾರ್ವಜನಿಕರಿಗೆ ತೀರಾ ಕಿರಿಕಿರಿ ಉಂಟಾಗಿದೆ. ಸಂಬಂದಿಸಿದ ಸಿಬ್ಬಂದಿಗೆ ಅಗತ್ಯ ಕ್ರಮಕ್ಕೆ ಹಲವು ಭಾರಿ ಸೂಚಿಸಿದೆ ಆದರೂ ಪರಿಸ್ಥಿತಿ ಸುಧಾರಿಸಿಲ್ಲ, ಕಾರಣ ಪಪಂ ಮುಖ್ಯಾಧಿಕಾರಿ ಪರಿಶೀಲಿಸಿ ಸಾರ್ವಜನಿಕ ಹಿತಕ್ಕಾಗಿ ಸೂಕ್ತ ಕ್ರಮ ಜರುಗಿಸಬೇಕೆಂದು,ಸದಸ್ಯ ಸಿರಿಬಿ ಮಂಜುನಾಥ ಸೇರಿದಂತೆ ಇತರರು ಈ ಮೂಲಕ ಒತ್ತಾಯಿಸಿದ್ದಾರೆ.
✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ