ಮಾರುತಿ ಕಾರೊಂದು ಓವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ಕಳೆದುಕೊಂಡು ಮಗುಚಿಬಿದ್ದ ಘಟನೆ ನಡೆದಿದೆ. #avintvcom

ಓವರ್ ಟೇಕ್ ತಂದ ಆಪತ್ತು
ಕೊಡಗು: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮಾರುತಿ ಕಾರೊಂದು ಓವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ಕಳೆದುಕೊಂಡು ಮಗುಚಿಬಿದ್ದ ಘಟನೆ ನಡೆದಿದೆ.ಗುಡ್ಡೆಹೊಸೂರಿನಿಂದ ಕುಶಾಲನಗರ ಹೋಗುವ ಹೈವೇನಲ್ಲಿ ಆಗಲೇ ಒಂದು ಮತ್ತೊಂದು ಕಾರನ್ನು ಹಿಂದಿಕ್ಕಲು ಪ್ರಯತ್ನ ಮಾಡುತ್ತಿರುವ ಸಂದರ್ಭ ಆ ಕಾರನ್ನು ಹಿಂದಿಕ್ಕಲು ಮಾರುತಿ ಕಾರು ವೇಗವಾಗಿ ಆಗಮಿಸಿದ್ದು ರಸ್ತೆಗೆ ಬರುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡು ಅಲ್ಲೇ ರಸ್ತೆ ಬದಿಯಲ್ಲಿ ಮಣ್ಣಿನ ಕಲಾಕೃತಿ ಮಾರಾಟ ಮಾಡುವ ಅಂಗಡಿಗೆ ನುಗ್ಗಿದೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.ಬಳಿಕ ಸ್ಥಳೀಯರು ಆಗಮಿಸುತ್ತಿದ್ದಂತೆ ಚಾಲಕ ಬಾಗಿಲು ತೆರೆದು ಹೊರಬಂದಿದ್ದು ಸಣ್ಣಪುಟ್ಟ ಗಾಯಗಳಾಗಿದೆ.