AVIN TV

Latest Online Breaking News

ಅಂಗನವಾಡಿ ಕಾರ್ಯಕರ್ತೆಯರಿಗೆ, ಮೇಲ್ವಿಚಾರಕರಿಗೆ, ಸಿಡಿಪಿಒ ಹಾಗೂ ಸಂಯೋಜಕರಿಗೆ ಸ್ಮಾರ್ಟ್ ಫೋನ #avintvcom

Featured Video Play Icon

ನಿಪ್ಪಾಣಿ

ಮಹಿಳಾ ಮತ್ತು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಅವಿರತ ಶ್ರಮ

 

ನಿಪ್ಪಾಣಿಯಲ್ಲಿ, ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆ ಮೂಲಕ ಅಂಗನವಾಡಿ ಕಾರ್ಯಕರ್ತೆಯರಿಗೆ, ಮೇಲ್ವಿಚಾರಕರಿಗೆ, ಸಿಡಿಪಿಒ ಹಾಗೂ ಸಂಯೋಜಕರಿಗೆ ಸ್ಮಾರ್ಟ್ ಫೋನಗಳನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ವಿತರಣೆ ಮಾಡಿದರು. ಬಳಿಕ ಅಂಗನವಾಡಿ ಕೇಂದ್ರದ ಕೈತೋಟದಲ್ಲಿ ಬೆಳೆದ ವಿವಿಧ ರೀತಿಯ ತರಕಾರಿಗಳನ್ನು, ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ವಿತರಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

 

ಬಿಜೆಪಿ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಳಮಟ್ಟಕ್ಕೆ ತಲುಪಲು ಅಂಗನವಾಡಿಗಳ ಸರ್ವ ಸಿಬ್ಬಂದಿ ವರ್ಗ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಅವರ ಒತ್ತಡದ ಕೆಲಸವನ್ನು ಸುಲಭವಾಗಿಸಲು, ಪೋಷಣ್ ಅಭಿಯಾನ ಯೋಜನೆಯಡಿ ಸ್ಮಾರ್ಟ್ ಫೋನ್ ಗಳನ್ನು ವಿತರಿಸಲಾಗುತ್ತಿದೆ. ಇದರಿಂದ ಗರ್ಭಿಣಿಯರ, ಬಾಣಂತಿಯರ ಮತ್ತು ಮಕ್ಕಳ ಪೌಷ್ಠಿಕತೆ, ಆರೋಗ್ಯದ ಹಾಗೂ ಅವರ ಹಾಜರಾತಿ, ಅಂಗನವಾಡಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳ ಅಂಕಿ ಅಂಶಗಳು ಇಲಾಖೆಗೆ ಲಭ್ಯವಾಗುತ್ತದೆ. ಈ ಮೂಲಕ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಪಾರದರ್ಶಕತ್ವದಲ್ಲಿ ಕೆಲಸ ನಡೆಯಲು ಸಾಧ್ಯವಾಗುತ್ತದೆ. ಹೀಗಾಗಿ ಸರ್ವ ಸಿಬ್ಬಂದಿ ವರ್ಗ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ನುಡಿದರು.

 

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಬಸವರಾಜ ವರವಟ್ಟೆ, ಸಿಡಿಪಿಓ ಶ್ರೀಮತಿ ಸುಮಿತ್ರಾ ಡಿ.ಬಿ, ಅಂಗನವಾಡಿ ಮೇಲ್ವಿಚಾರಕಿಯರು, ಸಹಾಯಕಿಯರು ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.

निपाणी

महिला आणि मुलांच्या उन्नतीसाठी परिश्रमपूर्वक प्रयत्न.

निपाणीमध्ये राष्ट्रीय पोषण मोहिम प्रकल्पाद्वारे अंगणवाडी सेविका, पर्यवेक्षका, सीडीपीओ आणि सहसंयोजकांना स्मार्ट फोन राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी वाटप केले. त्यानंतर अंगणवाडी केंद्राच्या बागेत उगवलेल्या विविध प्रकारच्या भाज्या गर्भवती महिला व मुलांना वितरित करून, कार्यक्रमास उद्देशून संबोधित केले.

भाजपा सरकारच्या योजना नागरिकांच्या दारापर्यंत पोहचविण्यासाठी अंगणवाड्यांचा सर्व कर्मचारी कार्यरत आहेत. यासाठी त्यांचे तणावपूर्ण काम सुलभ करण्यासाठी पोषण अभियानांतर्गत स्मार्ट फोनचे वितरण केले जात आहे.  यामुळे गर्भवती महिलांचे, अर्भकांचे आणि मुलांचे पोषण, आरोग्याची व त्यांची उपस्थिती, अंगणवाडीमध्ये आयोजित कार्यक्रमांबाबत  आकडेवारी प्रदान करते. यामुळे सर्व अंगणवाडी केंद्रांमध्ये पारदर्शकतेनुसार काम करण्यास शक्य होईल. याप्रकारे सर्व कर्मचार्‍यांनी या सुविधेचा उपयोग करून घेऊन, महिला व मुलांच्या विकासासाठी प्रयत्न केले पाहिजे असे सांगितले.

यावेळी महिला व बालकल्याण विभगाचे उपसंचालक श्री बसवराज वरवट्टे, सीडीपीओ श्रीमती सुमित्रा डी.बी, अंगणवाडी पर्यवेक्षका, मदतनीस आणि इतर सदस्य या उपस्थित होते.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!