AVIN TV

Latest Online Breaking News

ಬೀದಿಯಲ್ಲಿ ನರಳಾಡುತ್ತಿದ್ದ ಮಂಗವೊಂದಕ್ಕೆ ಪೊಲೀಸರು ಚಿಕಿತ್ಸೆ ಕೊಡಿಸಿ ಮಾನವೀಯತೆ ಮರೆದಿರುವ ಘಟನೆ #avintvcom

Featured Video Play Icon

ಕಾರವಾರ: ಅಪಘಾತದಿಂದಾಗಿ ಗಂಭೀರ ಗಾಯಗೊಂಡು ಬೀದಿಯಲ್ಲಿ ನರಳಾಡುತ್ತಿದ್ದ ಮಂಗವೊಂದಕ್ಕೆ ಪೊಲೀಸರು ಚಿಕಿತ್ಸೆ ಕೊಡಿಸಿ ಮಾನವೀಯತೆ ಮರೆದಿರುವ ಘಟನೆ ಮುಂಡಗೋಡದಲ್ಲಿ ನಡೆದಿದೆ.

ಪಟ್ಟಣದ ಬಡ್ಡಿಗೇರಿ ಕ್ರಾಸ್ ಬಳಿ ಶುಕ್ರವಾರ ಅಪರಿಚಿತ ವಾಹನ ಬಡಿದು ಗಂಭೀರ ಗಾಯಗೊಂಡಿದ್ದ ಮಂಗವೊಂದು ರಸ್ತೆ ಬದಿಯಲ್ಲಿ ನರಳಾಡುತ್ತಿತ್ತು. ಅದೇ ಮಾರ್ಗದಲ್ಲಿ ಬರುತ್ತಿದ್ದ ಇಲ್ಲಿನ ಠಾಣೆಯ ಪೊಲೀಸರು ಗಾಯಗೊಂಡ ಮಂಗವನ್ನು ನೋಡಿ, ಅದನ್ನು ಪೊಲೀಸ್‌ ಜೀಪಿನಲ್ಲಿಯೇ ಠಾಣೆಗೆ ತಂದಿದ್ದಾರೆ. ನಂತರ ಪಶುವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದಾರೆ. ಎದ್ದು ಓಡಾಡಲು ಆಗದಷ್ಟು ಬಳಲಿರುವ ಮಂಗವು ಠಾಣೆಯ ಆವರಣದಲ್ಲಿ ಮಲಗಿಕೊಂಡಿತ್ತು.

ಮಂಗ ಅಪಘಾತದಲ್ಲಿ ಗಾಯಗೊಂಡು ನರಳಾಟ ನಡೆಸಿದ್ದನ್ನು ಗಮನಿಸಿ ಠಾಣೆಗೆ ತಂದು ಚಿಕಿತ್ಸೆ ನೀಡಲಾಗಿದೆ. ಸದ್ಯ ಚೇತರಿಸಿಕೊಳ್ಳುತ್ತಿದೆ ಎಂದು ಪಿಎಸ್‌ಐ ಬಸವರಾಜ ಮಬನೂರ ಹೇಳಿದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!