AVIN TV

Latest Online Breaking News

ಕರ್ನಾಟಕರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ. #avintvcom

Featured Video Play Icon

ಕರ್ನಾಟಕರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ. ಬೆಳಗಾವಿ

ಬೆಳಗಾವಿ ಜಿಲ್ಲೆ

ವಿಷಯ: 18/12/2020 ರ ಶುಕ್ರವಾರ  ರಂದು ಬೆಳಗಾವಿ ಜಿಲ್ಲಾ ಅಧಿಕಾರಿಗಳ ಕಚೇರಿ ಮುಂದೆ ನಡೆದ ಹೋರಾಟ  ಕುರಿತು ಹೋರಾಟದಲ್ಲಿ 200ಕ್ಕೂ ಹೆಚ್ಚು ಜನರು ಶೇರಿದ್ದರು

ಹಾಸ್ಟೆಲ್ ಹೊರಗುತ್ತಿಗೆ ನೌಕರರ ಬಾಕಿ ವೇತನ ಕೊಡದಿರುವ ಬಗ್ಗೆ ಹಾಗೂ ಕರೋನ ಲಾಕ್ ಡೌನ್ ಸಮಯದಲ್ಲಿ ವೇತನ ಕ್ಷೇಮಾಬೃದ್ದಿ ಜಾರಿಗಾಗಿ  ಕೋರಿ*

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಇರುವ ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ  ಅಡುಗೆಯವರು,ಅಡುಗೆ ಸಹಾಯಕರು,ಕಾವಲುಗಾರರು,ಸ್ವಚ್ಚತಾಗಾರರಾಗಿ  ಇಲಾಖೆಯ ಹಾಸ್ಟೆಲಗಳಲ್ಲಿ  ಕೆಲಸ ಮಾಡುತ್ತಿದ್ದಾರೆ, ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಹೊರಗುತ್ತಿಗೆ ನೌಕರರನ್ನು ನೇರ ನೇಮಕಾತಿ ಮಾಡಿ ಸುಮಾರು ಜನರನ್ನು  ಆ  ಸಮಯದಲ್ಲಿ ಕೆಲಸದಿಂದ ತೆಗೆದುಹಾಕಲಾಯಿತು. ಅ ಸಂದರ್ಭದಲ್ಲಿ ಸಂಘದ ನೇತೃತ್ವದಲ್ಲಿ ಹೋರಾಟ ಮಾಡಿದಾಗ ಹೆಚ್ಚುವರಿ ಹೊರಗುತ್ತಿಗೆ ನೌಕರರು ಎಂದು ಪರಿಗಣಿಸಿ ಕೆಲಸದಲ್ಲಿ ಮುಂದುವರೆಸಲಾಯಿತು,ಆ  ಸಮಯದಲ್ಲಿ ಕೆಲಸ ಮಾಡಿದ ಹೊರಗುತ್ತಿಗೆ ನೌಕರರ ಬಾಕಿ ವೇತನಕ್ಕೆ ಸಾಕಷ್ಟು ಬಾರಿ ಹೋರಾಟವನ್ನು ಮಾಡಲಾಯಿತು,ಆರ್ಥಿಕ ಇಲಾಖೆಯ ವತಿಯಿಂದ ಹೆಚ್ಚುವರಿ ಹೊರಗುತ್ತಿಗೆ ನೌಕರರ ಸಂಬಳ ಕ್ಕಾಗಿ 17 ಕೋಟಿ ಹಣವನ್ನು ಬಿಡುಗಡೆ ಮಾಡಿ ಆದೇಶ ಮಾಡಿದರು ಇಲ್ಲಿಯವರೆಗೆ ನೌಕರರಿಗೆ ಬಿಲ್ ಮಾಡಿ ಸಂಬಳ ಕೊಡಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಆಸಕ್ತಿಯನ್ನು ತೋರಿಸಲಿಲ್ಲ.ಮೂರು  ಇಲಾಖೆಯಿಂದ ನೌಕರರ 1 ವರ್ಷದ ವೇತನ ಕೊಡಲು ಆಗಲಿಲ್ಲ,

ಈ ಬಗ್ಗೆ ಸಂಘದ ವತಿಯಿಂದ ಮಾನ್ಯ  ಮುಖ್ಯಮಂತ್ರಿಗಳಿಗೆ ಇಲಾಖೆಯ ಸಚಿವರುಗಳಿಗೆ ಆಯುಕ್ತರು, ಜಂಟಿ ನಿರ್ದೇಶಕರು ಬಳಿ ಸಾಕಷ್ಟು ಬಾರಿ ಗಮನಕ್ಕೆ ತಂದರು ಸಮಸ್ಯೆ ಬಗೆ ಹರಿಸಲಿಲ್ಲ ಪ್ರಯತ್ನ ಮಾಡುತ್ತಿಲ್ಲ

ಕರೋನ ಬಂದು ಲಾಕ್ ಡೌನ್ ಸಮಯದಲ್ಲಿ ಹೊರಗುತ್ತಿಗೆ ನೌಕರರು ಕೆಲಸ ಮತ್ತು ಸಂಬಳ ಇಲ್ಲದೆ ಬಹಳ ಕಷ್ಟದಿಂದ ಇಡೀ ಕುಟುಂಬ ನಿರ್ವಹಣೆ ಮಾಡುವುದು ತುಂಬಾ ಸಮಸ್ಯೆಯಾಗಿದೆ,ಬೇರೆ ಇಲಾಖೆಯ ಹೊರಗುತ್ತಿಗೆ ನೌಕರರಿಗೆ ಕರೋನ ಸಮಯದಲ್ಲಿನ ಸಂಬಳವನ್ನು ಕೊಟ್ಟಿರುತ್ತಾರೆ. ಆದರೆ ಬಿ.ಸಿ.ಎಂ.ಮತ್ತು ಸಮಾಜ ಕಲ್ಯಾಣ ಅಲ್ಪಸಂಖ್ಯಾತ  ಇಲಾಖೆಯ ಕ್ರೈಸ್ತ  ಹಾಸ್ಟೆಲ್ ಗಳಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ನೌಕರರಿಗೆ ವೇತನ ಕೊಡದೇ ತಾರತಮ್ಯ ಮಾಡುತ್ತಿದ್ದಾರೆ

ಹೆಚ್ಚುವರಿ ಹೊರಗುತ್ತಿಗೆ ನೌಕರರ ಬಾಕಿ ವೇತನ ಮತ್ತು ಕರೋನ ಸಮಯದಲ್ಲಿನ ಎಲ್ಲಾ ಹಾಸ್ಟೆಲ್ ಹೊರಗುತ್ತಿಗೆ ನೌಕರರ ವೇತನವನ್ನು ಕೊಡದೇ ಇದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ,ಅಧಿಕಾರಿಗಳ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯ ಎಂದು ತಮ್ಮ ಪತ್ರಿಕೆಯ ಮತ್ತು ಬೆಳಗಾವಿಯ ಹೋರಾಟ  ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಕೊಡಲು ಬಯಸುತ್ತೇನೆ

ವಂದನೆ ಗಳೊಂದಿಗೆ ತಮ್ಮ ವಿಶ್ವಾಸಿ ಪ್ರದೀಪ್ ದಳವಾಯಿ ಜಿಲ್ಲಾ ಅಧ್ಯಕ್ಷರು  ದ್ವರಕಾ ಯದ್ದಲ್ ಪುಡಿ ಜಿಲ್ಲಾ ಉಪಾಧ್ಯಕ್ಷರು ರೇಣುಕಾ ನಾಗನೂರ್ ಜಿಲ್ಲಾ ಕಾರ್ಯದರ್ಶಿಗಳು ಮುಬಾರಕ್ ನದಾಪ್ ಕುಮಾರ್ ಮಾಂಗ್ ಮಲ್ಲಪ್ಪ ಬಾತ್ಮರೆ ಬಸುರಾಜ್ ಅಮಾತಿ  ರವಿ ಕಾಂಬಳೆ ಶಿವಾಜಿ ಪವ್ವಾರ್ ಶಿವಕ್ಕ ರಾಮದುರ್ಗ ಶೇರಿ ಮುತ್ತಿತರು ಶೇರಿ 200ಜನ ಬಾಗಿ ಆಗಿದ್ದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!