AVIN TV

Latest Online Breaking News

ಮತಯಾಚನೆ ಮಾಡುವ ಮೂಲಕ ಕ್ಷೇತ್ರದ ಚುನಾವಣಾ ಅಭ್ಯರ್ಥಿಯೊಬ್ಬರು ಗಮನ ಸೆಳೆದಿದ್ದಾರೆಬರಿಗಾಲಲ್ಲಿ ಏಕಾಂಗಿಯಾಗಿ #avintvcom

ಬರಿಗಾಲಲ್ಲಿ ಏಕಾಂಗಿಯಾಗಿ ಮತಯಾಚನೆ ಚುನಾವಣೆ ಮುಗಿಯುವವರೆಗೆ ಚಪ್ಪಲಿ ಹಾಕುವುದಿಲ್ಲ ಎಂದು ಹರಕೆ ಹೊತ್ತ ಅಭ್ಯರ್ಥಿ ಮತದಾರನಿಂದ ಒಂದು ಹಿಡಿ ಅಕ್ಕಿ ಪಡೆದು ಮತಯಾಚನೆ ಮತದಾರ ನೀಡಿದ ಅಕ್ಕಿಯಿಂದಲ್ಲೆ ಊಟ ಚಪ್ಪಲಿಯೆ ಈ ಅಭ್ಯರ್ಥಿಯ ಚಿಹ್ನೆ ನಿಡುವಾಳೆ ಕ್ಷೇತ್ರದಲ್ಲಿ ಹೋಗೊಬ್ಬ ವಿಶಿಷ್ಟ ಅಭ್ಯರ್ಥಿ ಕೊಟ್ಟಿಗೆಹಾರ:ಚುನಾವಣೆ ಮುಗಿಯುವವರೆಗೆ ಚಪ್ಪಲಿ ಹಾಕುವುದಿಲ್ಲ ಎಂದು ಹರಕೆ ಹೊತ್ತು ಬರಿಗಾಲಲ್ಲೆ ಏಕಾಂಗಿಯಾಗಿ ಮತಯಾಚನೆ ಮಾಡುವ ಮೂಲಕ ನಿಡುವಾಳೆ ಕ್ಷೇತ್ರದ ಚುನಾವಣಾ ಅಭ್ಯರ್ಥಿಯೊಬ್ಬರು ಗಮನ ಸೆಳೆದಿದ್ದಾರೆ. ಅರೆಕೊಡಿಗೆ ಸಮೀಪದ ಸುಕ್ಲುಮಕ್ಕಿಯ ನವೀನ್ ಹಾವಳಿ ಅವರು ನಿಡುವಾಳೆ ಕ್ಷೇತ್ರದಲ್ಲಿ ಗ್ರಾ.ಪಂ ಚುನಾವಣೆಗೆ ಸ್ಪರ್ದಿಸುತ್ತಿದ್ದು ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂರು ತಿಂಗಳ ಮೊದಲೆ ಮಂಗಳೂರಿನ ದೇವಸ್ಥಾನವೊಂದರಲ್ಲಿ ಚುನಾವಣೆ ಮುಗಿಯುವವರೆಗೆ ಚಪ್ಪಲಿ ಹಾಕುವುದಿಲ್ಲ ಎಂದು ಹರಕೆ ಹೊತ್ತಿದ್ದು ಬರಿಗಾಲಿನಲ್ಲಿ ಏಕಾಂಗಿಯಾಗಿ ಮತಯಾಚನೆ ಮಾಡುತ್ತಿದ್ದಾರೆ. ಚಪ್ಪಲಿ ಚಿಹ್ನೆಯನ್ನೆ ಚುನಾವಣೆಗೆ ಆರಿಸಿಕೊಂಡಿದ್ದು ಚಿಕ್ಕ ಚಪ್ಪಲಿಯನ್ನು ತನ್ನ ಬ್ಯಾಗಿಗೆ ಸಿಕ್ಕಿಸಿಕೊಂಡು ಮನೆಮನೆಗೆ ತೆರಳಿ ಚಪ್ಪಲಿ ಗುರುತಿಗೆ ಮತ ನೀಡುವಂತೆ ಮತಯಾಚಿಸುತ್ತಿದ್ದಾರೆ. ಮತಯಾಚನೆ ಮಾಡುವಾಗ ಬೆಂಬಲಿಗರನ್ನು ಕರೆದುಕೊಂಡು ಹೋಗದೇ ಏಕಾಂಗಿಯಾಗಿ ಮತಯಾಚನೆ ಮಾಡುತ್ತಿದ್ದಾರೆ. ಮತಯಾಚನೆ ಮಾಡಲು ಹೋಗುವ ಪ್ರತಿ ಮನೆಯಿಂದ ಒಂದು ಹಿಡಿ ಅಕ್ಕಿಯನ್ನು ಪಡೆಯುತ್ತಿದ್ದು ಆ ಅಕ್ಕಿಯಿಂದಲ್ಲೆ ಅನ್ನ ಮಾಡಿಕೊಂಡು ಸೇವಿಸುತ್ತಿದ್ದಾರೆ. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ನವೀನ್, ಚುನಾವಣೆ ದಿನಾಂಕ ನಿಗದಿಯಾಗುವ ಮೂರು ತಿಂಗಳು ಮೊದಲು ಬಡವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಪ್ರಾರ್ಥಿಸಿಕೊಂಡು ಚಪ್ಪಲಿ ಬಿಟ್ಟು ಹರಕೆ ಹೊತ್ತುಕೊಂಡಿದೆ. ಯಾವುದೇ ಪಕ್ಷದ ಬೆಂಬಲಿತ ಅಭ್ಯರ್ಥಿಯಲ್ಲ. ಸ್ವಾತಂತ್ರö್ಯ ಅಭ್ಯರ್ಥಿಯಾಗಿ ಸ್ಪರ್ದಿಸುತ್ತಿದ್ದೇನೆ. ಚುನಾವಣೆಗೆ ಹಣ, ಹೆಂಡವನ್ನು ಹಂಚದೇ, ಹಣ ಖರ್ಚು ಮಾಡದೇ ಪ್ರಚಾರಕ್ಕೆ ಜನರನ್ನು ಬಳಸಿಕೊಳ್ಳದೇ ಏಕಾಂಗಿಯಾಗಿ ಮತಯಾಚನೆ ಮಾಡುತ್ತಿದ್ದೇನೆ. ಕಾರ್ಮಿಕರು ತೋಟದಲ್ಲಿ ಗದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಕಡೆಗಳಲ್ಲಿ ಹೋಗಿ ಮತಯಾಚನೆ ಮಾಡುತ್ತಿದ್ದೇನೆ. ಬರಿಗಾಲಲ್ಲಿ ಮತಯಾಚನೆ ಮಾಡುತ್ತಿದ್ದೇನೆ. ಚುನಾವಣೆ ಮುಗಿಯುವರೆಗೆ ಬರಿಗಾಲಿನಲ್ಲೆ ಇರುತ್ತೇನೆ. ಗ್ರಾ.ಪಂ ಚುನಾವಣೆಗೆ ಸಾವಿರಾರು ಬೇಕು ಎಂದು ಎಲ್ಲರೂ ಹೇಳುತ್ತಿದ್ದಾರೆ. ನಾನು ಒಂದು ರೂ ಹಣ ಖರ್ಚು ಮಾಡದೇ, ಹಣ ಹಂಚದೇ ಮತ ಹಾಕಿ ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದರು. ಚಿತ್ರ:19ಕೆಟಿಜಿ೩:ಬರಿಗಾಲಿನಲ್ಲಿ ಮನೆಮನೆಗೆ ತೆರಳಿ ಏಕಾಂಗಿಯಾಗಿ ಮತಯಾಚನೆ ಮಾಡುತ್ತಿರುವ ನವೀನ್ ಹಾವಳಿ. 19 ಕೆಟಿಜಿ೪:ತೋಟದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಬಳಿ ಮತಯಾಚನೆ ಮಾಡುತ್ತಿರುವ ನವೀನ್ ಹಾವಳಿ. 19 ಕೆಟಿಜಿ೫;ಬರಿಗಾಲಿನಲ್ಲಿ ಮತಯಾಚನೆಗೆ ಹೊರಟ ಅಭ್ಯರ್ಥಿ ನವೀನ್ ಹಾವಳಿ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!