ಮಧುಕರ್ ಶೆಟ್ಟಿ, ಐಪಿಎಸ್. ಬದುಕಿದ್ದರೆ ಇಂದಿಗೆ ನಲವತ್ತೊಂಭತ್ತು ವರ್ಷ ಆಗಿರುತಿತ್ತು. #avintvcom

ಮಧುಕರ್ ಶೆಟ್ಟಿ, ಐಪಿಎಸ್. ಬದುಕಿದ್ದರೆ ಇಂದಿಗೆ ನಲವತ್ತೊಂಭತ್ತು ವರ್ಷ ಆಗಿರುತಿತ್ತು. ಚಿಕ್ಕಮಗಳೂರು ಜಿಲ್ಲೆಯಲ್ಲಿ 2006ರಲ್ಲಿ ಎಸ್ಪಿ ಆಗಿದ್ದರಂತೆ. ಇಂದಿಗೂ ಇಲ್ಲಿನ ಜನ ಇವರ ನಿಷ್ಪಕ್ಷಪಾತ ಕಾರ್ಯವೈಖರಿ ಮತ್ತು ಬಡವರ ಪರ ಕಳಕಳಿಯನ್ನು ನೆನಪು ಮಾಡಿಕೊಳ್ಳುತ್ತಾರೆ. ಒತ್ತುವರಿದಾರರಿಂದ ವಶಪಡಿಸಿಕೊಂಡಿದ್ದ ಅರವತ್ನಾಲ್ಕು ಎಕರೆ ಭೂಮಿಯನ್ನು ಮೂವತ್ತೆರಡು ಕುಟುಂಬಗಳಿಗೆ ಇವರು ಮತ್ತು ಆಗಿನ ಜಿಲ್ಲಾಧಿಕಾರಿ ಹರ್ಷಗುಪ್ತ ಹಂಚಿದ್ದರಂತೆ. ಆ ಹಳ್ಳಿಗೆ ಆ ಕುಟುಂಬಗಳು ಗುಪ್ತ-ಶೆಟ್ಟಿ ಹಳ್ಳಿ ಎಂದು ಹೆಸರಿಟ್ಟಿದ್ದಾರೆ. ಇವರ ಸೇವೆಯ ಒಂದೊಂದೇ ಕಥೆಗಳನ್ನು ಕೇಳುತ್ತಿದ್ದರೆ ಬದುಕೇ ಒಂದು ಧಂತಕಥೆ ಅನ್ನಿಸುತ್ತದೆ. ಮಹಾನ್ ಮಾನವತಾವಾದಿಯಾಗಿದ್ದ ಅವರು ಇವತ್ತು ನಮ್ಮೊಡನೆ ಇಲ್ಲದಿರಬಹುದು ಆದರೆ ಅವರು ಬಾಳಿದ ಬದುಕು ಸದಾ ನಮ್ಮಂತಹ ಕಿರಿಯರಿಗೆ ಆದರ್ಶ,ನಿಜವಾದ ಸ್ಪೂರ್ತಿ.