AVIN TV

Latest Online Breaking News

ರಾಜ್ಯದಲ್ಲಿ 40ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದರು ಯಾವುದೇ ಸ್ಥಾನಮಾನವಿಲ್ಲ #avintvcom

Featured Video Play Icon

ಅಂಕ್ಯರ್ :- ರಾಜ್ಯದಲ್ಲಿ 40ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದರು ಯಾವುದೇ ಸ್ಥಾನಮಾನವಿಲ್ಲ

ತಿಗಳ ಪ್ರಾಧಿಕಾರ ಮಂಡಳಿ ಹಾಗು ಪ್ರವರ್ಗ 2ಎ ಯಿಂದ ಪ್ರವರ್ಗ 1ಕ್ಕೆ ಸೇರ್ಪಡೆ ಮಾಡಲು ಒತ್ತಾಯ

ಬೈಟ್ :-1 ರಾಜ್ಯ ತಿಗಳ ಸಂಘದ ಅಧ್ಯಕ್ಷ ಸಿ ಜಯರಾಜ್ ಮಾತನಾಡಿ

ರಾಜ್ಯದಲ್ಲಿ ತಿಗಳ ಸಮುದಾಯ 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು ಶೈಕ್ಷಣಿಕ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದು ಇದುವರೆಗೂ ತುಂಡು ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸಿ ಜೀವನ ನಿರ್ವಹಣೆ ಮಾಡುತ್ತಿರುವ ನಮ್ಮ ಜನಾಂಗಕ್ಕೆ ನಿಗಮ ಮಂಡಳಿ ಹಾಗು ಪ್ರ್ರವರ್ಗ 2ಎ ಯಿಂದ ಪ್ರವರ್ಗ 1ಕ್ಕೆ ಸೇರ್ಪಡೆ ಮಾಡಿದರೆÀ ಆರ್ಥಿಕವಾಗಿ ಮುಂದೆಬರಲು ಸಾದ್ಯ ಎಂದು ರಾಜ್ಯ ವಹ್ನಿಕುಲ ಕ್ಷತ್ರಿಯ ತಿಗಳರ ಸಂಘದ ಅಧ್ಯಕ್ಷ ಸಿ.ಜಯರಾಜ್ ತಿಳಿಸಿದರು.

ವಾ. ಓ :-  ದೇವನಹಳ್ಳಿ ತಾಲೂಕು ತಿಗಳರ ಸಂಘ ಮೌಕ್ತಿಕಾಂಬ ದೇವಾಲಯದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಮ್ಮ ಸಮುದಾಯದ ಜನರು ಅನೇಕ ವರ್ಷಗಳಿಂದ ಕರಗ ಮಹೋತ್ಸವ ಹಾಗು ತುಂಡು ಭೂಮಿಯಲ್ಲಿ ತರಕಾರಿ, ಹೂ ಬೆಳೆದು ಜೀವನ ಸಾಗಿಸುತ್ತಿದ್ದು ಆರ್ಥಿಕವಾಗಿ ಹಿಂದುಳಿದ ಕಾರಣ ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆಬರಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಈಗಾಗಲೇ ಅನೇಕ ಭಾರಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದೇವೆ. ಆದರೆ ಇದುವರೆಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ ಸರಕಾರ ಈಗಲಾದರು ಎಚ್ಚೆತ್ತು ಅತಿ ಹಿಂದುಳಿದಿರುವ ತಿಗಳ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಿದೆ ಎಂದರು.

ಬೈಟ್ :- 2 ದೇವನಹಳ್ಳಿ ತಾಲ್ಲೂಕು ತಿಗಳ ಸಂಘದ ಅಧ್ಯಕ್ಷ ವಿ. ಗೋಪಾಲಕೃಷ್ಣ ಮಾತನಾಡಿ ಕ್ಷತ್ರಿಯ ಸಮುದಾಯದಿಂದಲೇ ಮಹಾಭಾರತ ಸೃಷ್ಠಿಯಾಗಿದ್ದು ಅಂತಹ ಸಮುದಾಯದವರು ತುಂಬಾ ತಳಮಟ್ಟಕ್ಕೆ ತಲುಪಿದ್ದಾರೆ. ಆಯ್ಕೆಯಾಗಿ ಬಂದಂತಹ ಎಲ್ಲಾ ಸರಕಾರಗಳು ನಮ್ಮ ಜನಾಂಗವನ್ನು ಕಡೆಗಣಗೆ ಮಾಡುತ್ತಿದ್ದಾರೆ. ನಿಗಮ ಮಂಡಳಿ ಸ್ಥಾಪಿಸಿ ರಾಜಕೀಯದಲ್ಲಿ ಪ್ರಾತಿನಿದ್ಯ ನೀಡಬೇಕು. ಪ್ರವರ್ಗ 2ಎ ಯಿಂದ ಪ್ರವರ್ಗ 1ಕ್ಕೆ ಸೇರ್ಪಡೆ ಮಾಡಿದರೆ ಅದೇಷ್ಟೋ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆಬರಲು ಸಹಕಾರಿಯಾಗಲಿದೆ. ಕರಗ ಮಹೋತ್ಸವ ಮಾಡಲು ಮಾತ್ರ ನಮ್ಮ ಜನಾಂಗ ಸೀಮಿತವಾಗಬಾರದು ಎಂದರು.

ಈ ಸಂದರ್ಭದಲ್ಲಿ ರಾಜ್ಯ ತಿಗಳ ಮಹಾಸಭಾ ಅಧ್ಯಕ್ಷ ಹೆಚ್. ಸುಬ್ಬಣ್ಣ.   ಮೌಕ್ತಿಕಾಂಬ ದೇವಾಲಯ ಅದ್ಯಕ್ಷರಾದ ವಿಜಿಕುಮಾರ್, ವಗ್ನಿಕುಲ ಕ್ಷತ್ರಿಯ ತಿಗಳರ ಸಂಘದ ಖಜಾಂಚಿ ಯೋಗೇಶ್, ಎಸ್.ಸಿ.ಚಂದ್ರಪ್ಪ, ಪುರಸಭೆ ಸದಸ್ಯೆ ಚೈತ್ರ, ವಕೀಲರಾದ ಗೀತಾ, ಗೌಡರು, ಗಣಾಚಾರಿಗಳು ಸಮುದಾಯದ ಮುಖಂಡರು ಮುಂತಾದವರು ಇದ್ದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

January 2022
M T W T F S S
 12
3456789
10111213141516
17181920212223
24252627282930
31  
error: Content is protected !!