ವೀರಾಪುರ ಮತ್ತು ಕೊಮ್ಮಾರನಹಳ್ಳಿ ಗ್ರಾಮದ ರೈತರು ಹೊಲಗಾಲುವೆ ಮಾಡಿಕೊಡುವಂತೆ ಮನವಿ ಸಲ್ಲಿಸಿದರು.#avintvcom

[8:30 pm, 16/12/2020] Sharma Avin Tv: 1.ದಿನಾಂಕ 16/12/2020 ರಂದು, ಭದ್ರಾವತಿ ತಾಲೂಕು ವೀರಾಪುರ ಮತ್ತು ಕೊಮ್ಮಾರನಹಳ್ಳಿ ಗ್ರಾಮದ ರೈತರು ಕಚೇರಿಗೆ ಭೇಟಿ ನೀಡಿ ತಮ್ಮ ಜಮೀನುಗಳಿಗೆ ಹೋಗುವ ರಸ್ತೆಯನ್ನು ಹಾಗೂ ಹೊಲಗಾಲುವೆ ಮಾಡಿಕೊಡುವಂತೆ ಮನವಿ ಸಲ್ಲಿಸಿದರು.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಛೇರಿಯಲ್ಲಿ ಕಾಡ ಪ್ರಾಧಿಕಾರ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂದರ್ಭ.
ಸಭೆಯಲ್ಲಿ ಪ್ರಮುಖವಾಗಿ
*ಕಾಲುವೆಗಳಲ್ಲಿ ಈಗಾಗಲೇ ಪ್ರಾರಂಭಿಸಿರುವ ಕಾಮಗಾರಿಗಳ ವಿವರಗಳು ಹಾಗೂ ಅವಗಳು ಮುಗಿಯುವ ಹಂತದ ಬಗ್ಗೆ,
*ಕಾಲುವೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಾರಂಭಿಸಬೇಕಿರುವ ಕಾಮಗಾರಿಗಳ ಬಗ್ಗೆ ಹಾಗೂ ಕಾಮಗಾರಿಗಳ ಮುಕ್ತಾಯದ ಅವಧಿಯ ಬಗ್ಗೆ,
*ಪ್ರಾಧಿಕಾರದ ವ್ಯಾಪ್ತಿಯ ಕಾಲುವೆಗಳಲ್ಲಿ ಸಿಲ್ಟ್(ಹೂಳು) ತುಂಬಿಕೊಂಡಿದ್ದು, ಯಾವ ಭಾಗಗಳಲ್ಲಿ ಸಮಸ್ಯೆಯಾಗಿದೆ ಎಂಬುದರ ಬಗ್ಗೆ ಹಾಗೂ
*ಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಸಲು ಇರುವ ಇನ್ನಿತರ ನ್ಯೂನತೆಗಳು ಮತ್ತು ಅವುಗಳನ್ನು ಸರಿಪಡಿಸಲು ತಗೆದುಕೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡರು.
*ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ, ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಮುಗಿಸಿಕೊಡುವಂತೆ ಸೂಚಿಸಿದರು. ಕಾಮಗಾರಿಗಳಲ್ಲಿ ಯಾವುದೇ ರೀತಿಯಲ್ಲಿ ಲೋಪದೋಷ ಕಾಣದೆ ಗುಣಮಟ್ಟ ಕಾಪಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಈ ಸಭೆಯಲ್ಲಿ ಕಾಡ ಉಪ ಆಡಳಿತಾಧಿಕಾರಿ ಪಾಂಡು ಅವರು, ಕಾಡ ಅಧೀಕ್ಷಕ ಎಂಜಿನಿಯರ್ ಗುರು ಸ್ವಾಮಿ ಅವರು, ಕಾಡ ಕಾರ್ಯಪಾಲಕ ಇಂಜಿನಿಯರ್ ಮೂಡಲ ಗಿರಿಯಪ್ಪ ಅವರು, ಭದ್ರಾ ಯೋಜನಾ ವೃತ್ತದ ಕಾರ್ಯಪಾಲಕ ಎಂಜಿನಿಯರ್ ಚಂದ್ರಹಾಸ್ ಅವರು ಹಾಗೂ ಅನೇಕ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.