AVIN TV

Latest Online Breaking News

ಗ್ರಾಮ ಪಂಚಾಯತಿ ಕಛೇರಿಯ ಪ್ರಕರಣವನ್ನು ಮಡಿಕೇರಿ ಠಾಣೆ ಪೊಲೀಸರು ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿರುತ್ತಾರೆ#avintvcom

#ಜೆನರೇಟರ್ಕಳವುಪ್ರಕರಣಪತ್ತೆ, #ಆರೋಪಿಬಂಧನ,

ಗ್ರಾಮ ಪಂಚಾಯತಿ ಕಛೇರಿಯ ಜೆನರೇಟರ್ ಕಳವು ಮಾಡಿದ್ದ ಪ್ರಕರಣವನ್ನು ಮಡಿಕೇರಿ ಠಾಣೆ ಪೊಲೀಸರು ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿರುತ್ತಾರೆ.

ಸಂಪಾಜೆ ಗ್ರಾಮ ಪಂಚಾಯಿತಿಯ ಜೆನರೇಟರ್ ಕೊಠಡಿಯಿಂದ     ದಿನಾಂಕ: 06-08-2020 ರಂದು ಜನರೇಟರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಪಂಚಾಯಿತಿ ಪಿಡಿಒ ರವರು ನೀಡಿದ ಪುಕಾರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಮಡಿಕೇರಿ ಗ್ರಾಮಾಂತರ ಠಾಣೆಯ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ದಿನಾಂಕ 10-12-2020 ರಂದು ಪ್ರಕರಣದ ಆರೋಪಿ ಕೆ.ಎಸ್.ನಾರಾಯಣ, ತಂದೆ ಶೇಷಪ್ಪ, ಪ್ರಾಯ 47 ವರ್ಷ, ಹೋಂಸ್ಟೇಯಲ್ಲಿ ಕೆಲಸ, ವಾಸ ಮಡಿಕೇರಿ ನಗರ, ಸ್ವಂತ ಊರು ಗಡಿಕಲ್ಲು, ಸುಳ್ಯ ತಾಲೋಕು, ದಕ್ಷಿಣ ಕನ್ನಡ ಜಿಲ್ಲೆ ಈತನನ್ನು ದಸ್ತಗಿರಿ ಮಾಡಿ ಆರೋಪಿಯು ಕೃತ್ಯಕ್ಕೆ ಬಳಸಿದ ಮಾರುತಿ ಆಲ್ಟೋ ಕಾರು ನಂಬರ್ ಕೆಎ-21-ಜೆಡ್-0671 ಮತ್ತು ರೂ. 44,495/- ಮೌಲ್ಯದ ಜನರೇಟರನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಹೆಚ್.ವಿ ಚಂದ್ರಶೇಖರ್, ಎಂ.ಕೆ.ಸದಾಶಿವ, ಸಿಬ್ಬಂದಿಯವರುಗಳಾದ ರವಿಕುಮಾರ್, ಮಂಜುನಾಥ್, ಅಂತೋಣಿ, ಸೋಮಶೇಖರ್ ಸಜ್ಜನ್ ರವರು ಪಾಲ್ಗೊಂಡಿದ್ದು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಉತ್ತಮ ಕರ್ತವ್ಯವನ್ನು ಪ್ರಶಂಸಿಸಲಾಗಿದೆ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!