AVIN TV

Latest Online Breaking News

ಸಾಸರವಾಡ ಗ್ರಾಮದಲ್ಲಿ ಪರಮಪೂಜ್ಯ ಕಲ್ಲಯ್ಯಜ್ಜನವರ ತುಲಾಭಾರ ಕಾರ್ಯಕ್ರಮ #avintvcom

Featured Video Play Icon

ಸಾಸರವಾಡ ಗ್ರಾಮದಲ್ಲಿ ಪರಮಪೂಜ್ಯ ಕಲ್ಲಯ್ಯಜ್ಜನವರ ತುಲಾಭಾರ ಕಾರ್ಯಕ್ರಮ

ಶಿರಹಟ್ಟಿ. ತಾಲೂಕಿನ ಸಾಸರವಾಡ ಗ್ರಾಮದಲ್ಲಿ ಇತ್ತೀಚೆಗೆ ದಿ.ಶ್ರೀ.ಮಲ್ಲನಗೌಡ ಫ ಪಾಟೀಲ ಕಲಾಭಾರತಿ ಪ್ರತಿಷ್ಠಾನದ ವತಿಯಿಂದ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ದಿ.ಮಲ್ಲನಗೌಡ್ರ ಫ ಪಾಟೀಲರವರ ದ್ವೀತಿಯ ವರ್ಷದ ಪುಣ್ಯಸ್ಮರಣೆ ಹಾಗೂ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಕಲ್ಲಯ್ಯಜ್ಜನವರ ತುಲಾಭಾರ ಕಾರ್ಯಕ್ರಮ ಮತ್ತು ಶ್ರೀ ಗಡ್ಡಿಬಸವೇಶ್ವರ ಭಕ್ತಿ ಗೀತೆಗಳ ಧ್ವನಿ ಸುರುಳಿ ಬಿಡುಗಡೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಸನ್ಮಾನ ಸಮಾರಂಭದಲ್ಲಿ ಪರಮಪೂಜ್ಯ ಕಲ್ಲಯ್ಯಜ್ಜನವರ ತುಲಾಭಾರ ಕಾರ್ಯಕ್ರಮ ಸಮಸ್ತ ಸಾಸರವಾಡ ಗ್ರಾಮದ ಭಕ್ತರ ಜೈಘೋಷದೊಂದಿಗೆ ಜರುಗಿತು.

ತುಲಾಭಾರ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದ ಪರಮಪೂಜ್ಯ ಕಲ್ಲಯ್ಯಜ್ಜನವರು,ವೀರೇಶ್ವರ ಪುಣ್ಯಾಶ್ರಮದ ಗುರುಬಂಧುಗಳಾದ ಸಾಸರವಾಡ ಗ್ರಾಮದ ಮಲ್ಲನಗೌಡ ಪಾಟೀಲರು ಉತ್ತಮ ಸಂಗೀತ ಕಲಾವಿದರಾಗಿದ್ದರು,ಸಾತ್ವಿಕ ಗುಣವುಳ್ಳವರಾಗಿದ್ದರು,ಅವರ ಸರಳತೆ

ಅವರ ಪುಣ್ಯಸ್ಮರಣೆಯ ನಿಮಿತ್ಯವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ತುಂಬಾ ಶ್ಲಾಘನೀಯ,ತಂದೆಯವರ ಪುಣ್ಯಸ್ಮರಣೆಯನ್ನು ಮಾಡುವುದಲ್ಲದೆ ಸಾಧಕರಿಗೆ ಪ್ರೋತ್ಸಾಹ ಮಾಡುತ್ತಿರುವುದು ಸಾಮಾನ್ಯ ಕೆಲಸವಲ್ಲ.ತಂದೆಗೆ ತಕ್ಕ ಮಕ್ಕಳಾದ ಫಕ್ಕೀರಗೌಡ ಮತ್ತು ನೀಲನಗೌಡ ಪಾಟೀಲರ ಜೊತೆಗೆ ಒಟ್ಟಾರೆ ಪಾಟೀಲ ಮನೆತನದ ಈ ಕಾರ್ಯಕ್ರಮ ಇತರರಿಗೆ ಮಾದರಿಯಾಗಿದೆ,ತುಂಗಭದ್ರಾ ನದಿ ಹರಿದು ಶ್ರೀ ಗಡ್ಡಿಬಸವೇಶ್ವರ ದೇವರು ನೆಲೆಸಿರುವ ಸಾಸರವಾಡ ಗ್ರಾಮವು ಮುಂದೆ ದೊಡ್ಡ ಸುಕ್ಷೇತ್ರವಾಗುತ್ತದೆ,ಶ್ರೀ ಗಡ್ಡಿಬಸವೇಶ್ವರ ಭಕ್ತಿ ಗೀತೆಗಳನ್ನು ಅದ್ಬುತವಾದ ಸಾಹಿತ್ಯದೊಂದಿಗೆ ರಚಿಸಿ ನಾಡಿನಾದ್ಯಂತ ಕ್ಷೇತ್ರದ ಮಹಿಮೆಯನ್ನು ತಿಳಿಸಿಕೊಡುತ್ತಿರುವ ಮಲ್ಲನಗೌಡರ ಪುತ್ರ ನೀಲನಗೌಡ ಪಾಟೀಲರ ಸಾಹಿತ್ಯ ಸೇವೆ ಮೆಚ್ಚುವಂತದ್ದು ಎಂದರು.

ಧ್ವನಿ ಸುರುಳಿಯನ್ನು ಶಿರಹಟ್ಟಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ರಾಮಕೃಷ್ಣ ಎಸ್ ದೊಡ್ಡಮನಿಯವರು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಅಂದಾನಗೌಡ ತಿ ಪಾಟೀಲ,

ಚನ್ನವೀರಶಾಸ್ತ್ರಿ ಕುಲಕರ್ಣಿ.ಬಸವಲಿಂಗಶಾಸ್ತಿ ಹಾಲಗಿ ಮರೋಳ,

ಎಂ,ಸಿ,ಸೂರಣಗಿಮಠ,ಶಾಂತಪ್ಪ ಬಳ್ಳಾರಿ, ಚನವೀರಯ್ಯ ಮುದಗಲ್ ಮಠ,

ಶಿವಪುತ್ರಯ್ಯ ದಿವಾನ, ಗುಡ್ಡಪ್ಪ ಬಾರಕೇರ, ಶಂಕ್ರಪ್ಪ ಕಮ್ಮಾರ, ಅಡಿವೆಪ್ಪ ತಳ್ಳಳ್ಳಿ,ಬಸವರಾಜ ಚ ಬಂಡಿ,

ಬಸವರಾಜ ಹಾಲಗಿ,ಭಾಗ್ಯಶ್ರೀ ಬಾಬಣ್ಣ,

ಮುಂತಾದವರಿದ್ದರು.ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಾದ ಶರಣಪ್ಪ ಕುಬಸದ,

ಶ್ರೀಮತಿ ಮಂಜುಳಾ ಫ ಕೊಪ್ಪದ,ಶಿವಬಸವ ಬಣಕಾರ,ಗೌರಮ್ಮ ಮರಡಿಯವರಿಂದ ನುಡಿನಮನ ಗೀತೆಗಳನ್ನು ಹಾಡಿ ಜನರ ಮೆಚ್ಚುಗೆಗೆ ಪಾತ್ರರಾದರು.ಗ್ರಾಮದ ಯುವಕರಿಂದ ಸಮಾಳ‌ನಂದಿಕೋಲು ಸೇವೆ ನಡೆಯಿತು.

ಪ್ರಾಸ್ತಾವಿಕ ನುಡಿಯನ್ನು ಎಸ್ ಎಸ್ ಪಾಟೀಲ,ನಿರೂಪಣೆಯನ್ನು  ಡಿ.ಎಸ್.ರಿತ್ತಿ, ಶ್ರೀಧರಗೌಡ ಎಸ್ ಪಾಟೀಲ ನೆರವೇರಿಸಿದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!