ಅಫಜಲಪೂರ ತಾಲ್ಲೂಕಾ ವತಿಯಿಂದ ತಾಲ್ಲೂಕು ದಂಡಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ #avintvcom

ಇವತ್ತು ದಿ-05-12-2020ರಂದು ಜಯ ಕರ್ನಾಟಕ ಸಂಘಟನೆ ಅಫಜಲಪೂರ ತಾಲ್ಲೂಕಾ ವತಿಯಿಂದ ತಾಲ್ಲೂಕು ದಂಡಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಕೊಡಲಾಯಿತ್ತು, ಕರ್ನಾಟಕ ರಾಜ್ಯ ಬಂದ್ ಕರೆಗೆ ನಮ್ಮ ಜಯ ಕರ್ನಾಟಕ ತಾಲ್ಲೂಕು ಘಟಕದ ವತಿಯಿಂದ ಸಂಪೂರ್ಣ ಬೆಂಬಲ ಕೊಟ್ಟಿರುವ ಕುರಿತು ಮತ್ತು 13.11.2020 ರಂದು ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪನೆ ಮಾಡಿ 50 ಕೋಟಿ ಹಣವನ್ನು ಮರಾಠ ಅಭಿವೃದ್ಧಿಗಾಗಿ ಮೀಸಲಿಟ್ಟಿರುವುದು ಕನ್ನಡಿಗರಿಗೆ ಮತ್ತು ಮರಾಠರ ನಡುವೆ ವೈಮನಸ್ಯವನ್ನು ಉಂಟು ಮಾಡಿದೆ ಕೂಡಲೇ ಇದನ್ನು ಕೈಬಿಡಬೇಕು ಇದೆ ರೀತಿಯಾಗಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಜಯ ಕರ್ನಾಟಕ ಸಂಘಟನೆಯ ಅಫಜಲಪೂರ ತಾಲ್ಲೂಕು ಘಟಕ ವತಿಯಿಂದ ಎಚ್ಚರಿಕೆ ನೀಡುತ್ತವೆ