AVIN TV

Latest Online Breaking News

ನಿಪ್ಪಾಣಿ ನಗರಸಭಾ 24×7 ಕುಡಿಯುವ ನೀರಿನ ನಗರೋತ್ಥಾನ ಅಧಿಕಾರಿಗಳೊಂದಿಗೆ ಸಭೆ ಸೂಚನೆಗಳನ್ನು ನೀಡಿದರು #avintvcom

Featured Video Play Icon

ಬೆಳಗಾವಿ

ಜನತೆಗಾಗಿ 24×7 ನೀರು ಸರಬರಾಜು ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಲು ಸೂಚನೆ

ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, ನಿಪ್ಪಾಣಿ ನಗರಸಭಾ ವ್ಯಾಪ್ತಿಯ 24×7 ಕುಡಿಯುವ ನೀರಿನ ಸರಬರಾಜು ಹಾಗೂ ನಗರೋತ್ಥಾನ ಯೋಜನೆಯ ಕುರಿತಾಗಿ ಅಧಿಕಾರಿಗಳೊಂದಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಪರಿಶೀಲನಾ ಸಭೆ ನಡೆಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ನಿಪ್ಪಾಣಿ ನಗರಸಭೆ ವ್ಯಾಪ್ತಿಯಲ್ಲಿ ಈ ಯೋಜನೆಯು ಶೇ. 90ರಷ್ಟು ಪೂರ್ಣಗೊಂಡಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಪರಿಶೀಲಿಸಿದರು. ನೀರಾವರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ತೀವ್ರ ಹಾಗೂ ಗಂಭೀರ ಕ್ರಮಗಳ ಅವಶ್ಯಕತೆ ಇದೆ. ಹೀಗಾಗಿ  2021ರ ಜನವರಿ 15ರೊಳಗಾಗಿ ಕಾಮಗಾರಿಯನ್ನು ಸಂಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಅವಕಾಶ ಮಾಡಿಕೊಡಬೇಕು. ಅಧಿಕಾರಿಗಳು ಸಮನ್ವಯದಿಂದ ಯೋಜನೆಯನ್ನು ಯಶಸ್ವಿಗೊಳಿಸಬೇಕು. ಕಾಮಗಾರಿಯಲ್ಲಿ ಯಾವುದೇ ಲೋಪದೋಷಗಳು ಆಗದಂತೆ ಎಚ್ಚರಿಕೆ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ಎಂ.ಜಿ. ಹಿರೇಮಠ, ನಿಪ್ಪಾಣಿ ನಗರಸಭೆ ಅಧ್ಯಕ್ಷರಾದ ಶ್ರೀ ಜಯವಂತ ಬಾಟಲೆ, ಉಪಾಧ್ಯಕ್ಷರಾದ ಶ್ರೀಮತಿ ನೀತಾ ಬಾಗಡಿ, ಪೌರಾಯುಕ್ತರಾದ ಶ್ರೀ ಮಹಾವೀರ ಬೊರಣ್ಣವರ, ಕೆ.ಯು.ಐ.ಡಿ.ಎಫ್.ಸಿ ಅಧಿಕಾರಿಗಳು, ನಗರೋತ್ಥಾನ ಅಧಿಕಾರಿಗಳು, ಜೈನ್ ಇರಿಗೇಶ್ ನ ಅಧಿಕಾರಿಗಳು, ಹಾಗೂ ಇತರ ಸದಸ್ಯರು ಹಾಜರಿದ್ದರು.

जनतेसाठी 24/7 पाणीपुरवठा कार्य लवकर पूर्ण करण्यासाठी सूचना.

बेळगावी जिल्हाधिकारी कार्यालयात निपाणी नगरपालिकेच्या व्याप्तीतील 24×7 पिण्याच्या पाण्याचा पाणीपुरवठा व नगरोत्थान योजनेबाबत अधिकाऱ्यांच्या बरोबर राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी आढावा बैठक घेऊन, आवश्यक सल्ला व सूचना दिल्या.

निपाणी नगरपालिका व्याप्तीतील या योजनेचा शे.90 टक्के काम पुर्ण झाल्या बाबत अधिकाऱ्यांच्याकडून माहिती घेऊन, आढावा घेतले. सिंचन प्रकल्पाच्या प्रभावी अंमलबजावणीसाठी कठोर आणि गंभीर उपाययोजनांची आवश्यकता आहे. यासाठी हे काम 15 जानेवारी 2021 पर्यंत पूर्ण करून, सार्वजनिक वापरासाठी परवानगी दिली पाहिजे. अधिकाऱ्यांनी समन्वयाने प्रकल्प यशस्वी केला पाहिजे. कामामध्ये कोणत्याही त्रुटी टाळण्यासाठी  संबंधित अधिकाऱ्यांना व कंत्राटदारांना कडक सूचना दिल्या.

या बैठकीस जिल्हाधिकारी श्री एम.जी. हिरेमठ, निपाणी नगरपालिका अध्यक्ष श्री जयंत भाटले, उपाध्यक्ष श्रीमती. नीता बागडी, आयुक्त श्री महावीर बोरण्णवर, के.यु.आय.डी.एफ.सी अधिकारी, नगरोत्थान अधिकारी, जैन इरिगेशचे अधिकारी व इतर सदस्य उपस्थित होते.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!