AVIN TV

Latest Online Breaking News

ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಅವರು 38 ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿ ಬಳಗದಿಂದ ಆಚರಿಸಿದರು.

Featured Video Play Icon

ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಅವರು 38 ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿ ಬಳಗದಿಂದ ಆಚರಿಸಿದರು.

ನಗರದ ಶಾಸಕ ಆನಂದ ನ್ಯಾಮಗೌಡ ಅವರ ನಿವಾಸದ ಎದುರಿಗೆ ಅವರ ಅಪಾರವಾದ ಅಭಿಮಾನಿ ಬಳಗದವರು ಅವರ 38ನೇ ಹುಟ್ಟು ಹಬ್ಬವನ್ನು  ಬೃಹತ್ತಾದ ಹೂವಿನ ಹಾರವನ್ನು ಹಾಕಿ.ಶಾಲು ಹೊದಿಸಿ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿದರು.

ನಗರಸಭೆ ಪೌರಕಾರ್ಮಿಕರಿಗೆ  ಸೀರೆಗಳು ಹಾಗೂ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿದರು.

ನಗರದ ಹೊರವಲಯದ ಕಟ್ಟೆ ಕೆರೆಯಲ್ಲಿ ಟ್ರೇನ್ ಮೂಲಕ ಸಂಚರಿಸಿದರು.

ನಂತರ ಶಾಸಕ ಆನಂದ ನ್ಯಾಮಗೌಡ ಅವರ ರಾಶಿಯಾದ ವೃಷಭ ರಾಶಿಯ ಸಪ್ತ ಪರಿಣಿ ಎಂಬ ಸಸಿಗೆ ನೀರು ಉನಿಸುವ ಮೂಲಕ ಅಪಾರ ಅಭಿಮಾನಿಗಳ ಸಮೂಹದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿ ಕೊಂಡರು.

ಕಟ್ಟೆ ಕರೆಗೆ ಬಾಗಿನ ಅರ್ಪಿಸಿದರು.

ನಂತರ ಮಾತನಾಡಿದ ಅವರು. ನಮ್ಮ ತಂದೆಯವರ ಕನಸು ಕಟ್ಟೆ ಕರೆಯನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಪ್ರವಾಸಿ ತಾಣವನ್ನಾಗಿಸಬೇಕೆಂದು ಅವರ ಕನಸು ಕಂಡಿದ್ದರು. ಅವರ ಕನಸಿನಂತೆ ಜೀಮ್.ಕ್ಯಾಂಟೀನ್.ಇಕೋ ಪ್ರೇಂಡಲಿ ಹಾಲ್ ಅಂದರೆ ಮಳೆಗಾಲ. ಬೇಸಿಗೆ.ಚಳಿಗಾಲದಲ್ಲಿ ಯಾವ ತರಹದ ವಾತಾವರಣದಲ್ಲಿ ಪರಿಸರದಿಂದ ಹಾಗೂ ಪಕ್ಷಿಗಳಿಂದ ಎಷ್ಟು ಅನೂಕುಲ ಇದೆ ಮನುಷ್ಯರ ಜೊತೆ ಎಂಬುವದು ಮೇಸೆಜ್  ನೀಡುವ ಹಾಲ್ ನ್ನು ಹೊಸದಾಗಿ ಮಾಡುತ್ತಿದೆವೆ ಎಂದರು.

ಬಿಜೆಪಿ ಸರಕಾರ ಬಂದ ಮೇಲೆ ಯಾವುದೇ ತರಹದ ಅನೂದಾನ ದೊರಕಿರುವುದಿಲ್ಲ.ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪ್ರವಾಸೋದ್ಯಮ ಸಚಿವರು 3 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡುವ ಸಂದರ್ಭದಲ್ಲಿ ಸರಕಾರ ಬದಲಾವಣೆ ಯಾಗಿದ್ದು. ಆದರೂ ಸಹ ಅರಣ್ಯ ಇಲಾಖೆ. ಪ್ರವಾಸೋದ್ಯಮ ಇಲಾಖೆಯಿಂದ  ಸುಮಾರು 7 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಿಸಿ ಕಟ್ಟೆ ಕೆರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಯನ್ನು ಮಾಡುತ್ತೇನೆ.

ಮಹಾಲಿಂಗಪೂರದಲ್ಲಿ ನಡೆದ ಗಲಾಟೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ರಾಮಯ್ಯ   ಶ್ರೀಮತಿ ಉಮಾಶ್ರೀ ಅವರ ನೇತೃತ್ವದಲ್ಲಿ ಬೃಹತ್ ಪ್ರಮಾಣದಲ್ಲಿ ಹೋರಟವನ್ನು 5 ರಂದು  ಹಮ್ಮಿಕೊಳ್ಳಲಾಗುತ್ತದೆ ಎಂದರು.

ಕೇಂದ್ರ ಸರ್ಕಾರ ರಾಜ್ಯ ಸರ್ಕಾರದಲ್ಲಿ ಬಿಜೆಪಿ ಸರಕಾರದ ಆಡಳಿದಲ್ಲಿ ಅತ್ಯಾಚಾರ.ದೌರ್ಜನ್ಯಗಳು ಮಹಿಳೆಯರ ಮೇಲೆ ನಡೆಯುತ್ತಿದ್ದಾವೆ ಇದು ಯಾವ ಕಾರಣಕ್ಕೂ ನಡೆಯಬಾರದು. ಜವಾಬ್ದಾರಿ ಯುತ್ತ ಸ್ಥಾನದಲ್ಲಿ ಇದ್ದವರು ಅರಿತುಕೊಳಬೇಕಾಗಿದೆ ಇಂತಹ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೆವೆ ಎಂದು ಹೇಳಿದರು.

ವರದಿ. ಪರಶುರಾಮ್. ಕಾಂಬಳೆ

 

 

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!