AVIN TV

Latest Online Breaking News

ಅಸೂಟಿ ಗ್ರಾಮದಲ್ಲಿ ಶ್ರೀ ಸಂತ ಕನಕದಾಸರ ಜಯಂತಿ ಆಚರಿಸಲಾಯಿತು ಬಿಜೆಪಿ ಯುವ ಮೋರ್ಚಾದಿಂದ ಸ್ವಚ್ಚತಾ ಕಾರ್ಯವನ್ನು ಯಶಸ್ವಿಯಾಗಿ ಮಾಡಿದರು

Featured Video Play Icon

ಹೊಳೆಆಲೂರ ಮಂಡಲ ಬಿಜೆಪಿ ಯುವ ಮೋರ್ಚಾ ವತಿಯಿಂದ ನರಗುಂದ ಮತಕ್ಷೇತ್ರದ ಅಸೂಟಿ ಗ್ರಾಮದಲ್ಲಿ ಶ್ರೀ ಸಂತ ಕನಕದಾಸರ ಜಯಂತಿ ಆಚರಿಸಲಾಯಿತು ಈ ಶುಭಸಂಧರ್ಬದಲ್ಲಿ ಬಿಜೆಪಿ ಯುವ ಮೋರ್ಚಾ ಗ್ರಾಮ ಘಟಕವನ್ನು ಗದಗ ಜಿಲ್ಲಾ ಬಿಜೆಪಿ ಯುವ ಮುಖಂಡರು ಶರಣು ಚಲವಾದಿ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು ಪಕ್ಷವನ್ನು ಮಾನ್ಯ ಸಚಿವರಾದ ಶ್ರೀ ಸಿ ಸಿ ಪಾಟೀಲ ಸಾಹೇಬರು ಮತ್ತು ಹಿರಿಯರ ಮಾರ್ಗದರ್ಶನದೊಂದಿಗೆ ಇನ್ನಷ್ಟು ಸಂಘಟಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಪ್ರತಿ ಮನೆಗೆ ತಲುಪಿಸುವ ಪ್ರಾಮಾಣಿಕ ಪಯತ್ನ ಮಾಡೋಣ, ಬಿಜೆಪಿ ಯುವ ಮೋರ್ಚಾದಿಂದ ಪ್ರತಿ ಭಾನುವಾರ ಒಂದು ಗ್ರಾಮದಲ್ಲಿ ಸ್ವಚ್ಚತಾ ಕಾರ್ಯವನ್ನು ಯಶಸ್ವಿಯಾಗಿ ಮಾಡಿ ಎಂದರು ಇದೆ ವೇಳೆ ನೂತನ ಪದಾಧಿಕಾರಿಗಳಿಗೆ ಶುಭಕೋರಿದರು.

ನಂತರ ಹೊಳೆಆಲೂರ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಶರಣು ಬರಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಉಮೇಶ ಬೆಳವಣಕಿ ಅವರ ನೇತೃತ್ವದಲ್ಲಿ ಯುವ ಮೋರ್ಚಾದ ಪದಾಧಿಕಾರಿಗಳಿಂದ ಅಸೂಟಿ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ಈ ಸಂಧರ್ಬದಲ್ಲಿ ಅಸೂಟಿ ಗ್ರಾಮದ ಬಿಜೆಪಿ  ಹಿರಿಯರು, ಮುಖಂಡರು, ಯುವಕರಾದ ಫಕೀರಗೌಡ ಪಾಟೀಲ, ವಿರೂಪಾಕ್ಷ ಕಾಶಣ್ಣವರ, ಮಂಜುನಾಥ ಚುಲಕಿ, ಬಸವರಾಜ ಹಳ್ಳಿಕೇರಿ, ಮುದಿಯಪ್ಪ ದಾನಿ, ವೀರಪ್ಪ ಚಲವಾದಿ, ಕರಿಯಪ್ಪ ಚಲವಾದಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!