ಜಲ ಸಂಪನ್ಮೂಲ ಮಂತ್ರೀಗಳು ರಮೇಶ ಜಾರಕಿಹೊಳಿ ಅವರ ಮೂಲಕ ಕಾಯಿದೆ ಮರಳಿ ಪಡೆಯಬೇಕೆಂದು ಮಂಜುನಾಥ ಬಾಳು ಪರಗೌಡರು ಮನವಿ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿಕ್ಕೋಡಿ ವತಿಯಿಂದ ಚಿಕ್ಕೋಡಿ ತಾಲ್ಲೂಕು ಅಧ್ಯಕ್ಷರು ಮಂಜುನಾಥ ಬಾಳು ಪರಗೌಡರು ಕೇಂದ್ರ ಸರ್ಕಾರ ದೆಹಲಿ ಚಳುವಳಿ ಹೋರಾಟಕ್ಕೆ ಹೋದ ರೈತರ ಮೇಲೆ ಲಾಠಿ ಪ್ರಹಾರ ಜಲ ಪೀರಂಗಿ ಇನ್ನಿತರ ಪ್ರಯೋಗಗಳನ್ನು ಪ್ರಯೋಗ ಮಾಡಿದ್ದಲ್ಲದೆ. ರೈತ ವಿರೋಧಿ ಕಾಯ್ದೆ ಜನ ವಿರೋಧಿ ಕಾಯ್ದೆ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮರ್ಥನೆ ಮಾಡಿಕೊಂಡಿದ್ದಾರೆ ಅದನ್ನು ವಿರೋಧಿಸಿ ಮತ್ತು ಕಬ್ಬಿನ ಬಿಲ್ಲು 3000 ದಂತೆ ನೀಡಲು ಪ್ರವಾಹ ಪರಿಹಾರ ಇನ್ನಿತರ ಸಮಸ್ಸೆಗಳ ಬಗ್ಗೆ ಇಂದು ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಜಲ ಸಂಪನ್ಮೂಲ ಮಂತ್ರೀಗಳು ರಮೇಶ ಜಾರಕಿಹೊಳಿ ಅವರ ಮೂಲಕ ಕಾಯಿದೆ ಮರಳಿ ಪಡೆಯಬೇಕೆಂದು ಮುಖ್ಯಮಂತ್ರಿಗಳಿಗೆ ಕಾರ್ಯಕರ್ತರೊಂದಿಗೆ ಚಿಕ್ಕೋಡಿ ತಾಲ್ಲೂಕು ಅಧ್ಯಕ್ಷರು ಮಂಜುನಾಥ ಬಾಳು ಪರಗೌಡರು ಮನವಿ ಸಲ್ಲಿಸಿದರು