AVIN TV

Latest Online Breaking News

ಶ್ರೀ ವಿಠ್ಠಲ್ ಹೆರೂರ್ ರವರ ಭಾವಚಿತ್ರಕ್ಕೆ ಪುಜೆ ಹೂವಿನ ಮಾಲೆ ಹಾಕಿ ಏಳನೇ ಪೂಣ್ಯ ಸ್ಮರಣೆ ಆಚರಣೆ #avintvcom

Featured Video Play Icon

ಅಂಕರ್:- ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಬರುವ ಸುಲೇಪೇಟ ಚಿಮ್ಮಾಇದಲಾಯಿ ಹೊಡೆಭಿರನ್ನಳಿ ಗ್ರಾಮಗಳಲ್ಲಿ ಕುಲಿ ಸಮಾಜದ ವತಿಯಿಂದ ಶ್ರೀ ವಿಠ್ಠಲ್ ಹೆರೂರ್ ರವರ ಭಾವಚಿತ್ರಕ್ಕೆ ಪುಜೆ ಹೂವಿನ ಮಾಲೆ ಹಾಕಿ ಏಳನೇ ಪೂಣ್ಯ ಸ್ಮರಣೆ ಆಚರಣೆ ಮಾಡಿದರು

ಹೌದು ಈ ಸಂದರ್ಭದಲ್ಲಿ ನಾಮದೇವ್ ಪೊಲಿಸ್ ಪಾಟೀಲ್  ರವರು ಮಾತನಾಡಿ ಕೋಲಿ, ಕಬ್ಬಲಿಗ, ಅಂಬಿಗರ ಸಮುದಾಯದ ಸ್ವಾಭಿಮಾನಿ, ಮಹಾನ್ ನಾಯಕ ದಿವಂಗತ ಸನ್ಮಾನ್ಯ ಶ್ರೀ ವಿಠ್ಠಲ ಹೇರೂರ ಜೀ, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ವಿಧಾನ ಸಭೆಯ ಮುಖ್ಯ ಸಚೇತಕರು, ಕರ್ನಾಟಕ ಸರಕಾರ. ಇವರ ನೆನಪು ಅಜರಾಮರ.*

ಶೋಷಿತರ ಕಣ್ಮಣಿ, ಧೀರ ಹೋರಾಟಗಾರ, ಬಡವರ ಪರ ಧ್ವನಿಯೇತ್ತಿದ ನೇತಾರ, ಕೋಲಿ ಸಮಾಜದ ಸ್ಥಿತಿಗತಿಗಳನ್ನು ಸರ್ಕಾರಕ್ಕೆ ಮನವರಿಕೆಗಾಗಿ ನ್ಯಾಯಬದ್ಧ ಬೇಡಿಕೆಗಳೊಂದಿಗೆ ಹೋರಾಟಕ್ಕಿಳಿದು, ಸಮುದಾಯದ ಬೇಡಿಕೆಗಳನ್ನು “ವಿಧಾನ ಸೌಧ”ಕೆ ಮುಟ್ಟಿಸಿದ ಮೊದಲ ಧೀಮಂತ ನಾಯಕರು, ಅಂದು ಹಚ್ಚಿದ ಸಂಘಟನೆಯ ಜ್ಯೋತಿ ಇಂದಿಗೂ ನಾಡಿನಾದ್ಯಂತ ಹರಡುತ, ಕಲ್ಯಾಣ ಕರ್ನಾಟಕದಲ್ಲಿ ಕೋಲಿ ಸಮುದಾಯಕ್ಕೆ ರಾಜಕೀಯ, ಸಾಮಾಜಿಕ, ಶೈಕ್ಷಣಿಕವಾಗಿ ಜಾಗೃತಿ ತಂದು, ಸಾವಿರಾರು ಜನರಿಗೆ ನ್ಯಾಯ ‌ಕೊಡಿಸಿದ ಧೀಮಂತ ನಾಯಕರು.

“ಬದುಕುವ ನಾಯಿಗಳಾಗಬೇಡಿ, ಬದಲಾಯಿಸುವ ಗಂಡಸರಾಗಿ” ಎಂದ ಅಧುನಿಕ ಅಂಬಿಗರ ಚೌಡಯ್ಯ, ಮಾತು ಬಲು ಓರಟು, ಮನಸ್ಸು ಬಂಗಾರ, ಸಮಾಜದ ಅಂಕು ಡೂಂಕುಗಳನ್ನು ತಮ್ಮದೇಯಾದ ವಿಭಿನ್ನ ಶೈಲಿಯಲ್ಲಿ ಸಮಾಜವನ್ನು ತಿದ್ದಿ, ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳನ್ನು ಸಾರುತ ಸಾಗಿದ ಮಹಾನ್ ಹಠವಾದಿ.

ಸ್ವಾಭಿಮಾನ ಮತ್ತು ಧೈರ್ಯದಿಂದ ಹೋರಾಟದ ಜೀವನ ನಡೆಸಲು ಸಮಾಜಕ್ಕೆ ಕರೆ ಕೊಟ್ಟ ರಣಧೀರ, ನಮ್ಮೆಲ್ಲರ ಮನದಲ್ಲಿ ತಾವು ಎಂದೆಂದಿಗೂ ಅಜರಾಮರ  ಹೆಳಿದರು

ಈ ಸಂದರ್ಭದಲ್ಲಿ ವೈಜಿನ್ನಾಥ ದಾದಿ ಶಿವಕುಮಾರ ಕೊತ್ತಪೆಟ್ ಯಶವಂತರಾವ್ ರಾಮತಿರ್ಥ ಶಿವಕುಮಾರ ತಳವಾರ ಗೌರಿ ಶಂಕರ್ ವಿಶಾಲ್ ಹಲಚೆರಾ ಖತಲಪ್ಪ ತಳವಾರ ಝರಣಪ್ಪ ಚಿಮ್ಮಾಇದಲಾಯಿ  ಇನ್ನಿತರರು ಇದ್ದರೂ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!