ಕ್ರೀಡಾಕೂಟಗಳು ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಲಿ ಕಸಾಪ ತಾಲ್ಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಅಭಿಮತ#avintvcom
ಕ್ರೀಡಾಕೂಟಗಳು ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಲಿ
ಕಸಾಪ ತಾಲ್ಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಅಭಿಮತ
ಕೊಟ್ಟಿಗೆಹಾರ:ಕ್ರೀಡಾಕೂಟಗಳು ಅವಕಾಶ ಸಿಗದೆ ತೆರೆಮರೆಯಲ್ಲಿ ಉಳಿದ ಕ್ರೀಡಾಪ್ರತಿಭೆಗಳಿಗೆ ವೇದಿಕೆಯಾಗಲಿ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಹೇಳಿದರು.
ಹಾವಳಿ ಬ್ರದರ್ಸ್ ಮತ್ತು ಪ್ರೆಂಡ್ಸ್ ತಂಡದ ವತಿಯಿಂದ ಚಂದುವಳ್ಳಿಯಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಳುಗಳು ಬೇದ ಭಾವವನ್ನು ಮರೆತು ಕ್ರೀಡೆಯಲ್ಲಿ ಭಾಗವಹಿಸುತ್ತಾರೆ. ಇಂತಹ ಪಂದ್ಯಾವಳಿಗಳಲ್ಲಿ ಎಲ್ಲಾ ವರ್ಗದ ಕ್ರೀಡಾಳುಗಳು ಭಾಗವಹಿಸುತ್ತಾರೆ. ಎಲ್ಲಾ ಬೇದವನ್ನು ಮರೆಸುವುದು ಪಂದ್ಯಾವಳಿಯ ವಿಶೇಷತೆ ಎಂದರು.
ಹಾವಳಿ ಬ್ರದರ್ಸ್ ಮತ್ತು ಪ್ರೆಂಡ್ಸ್ ತಂಡದ ನವೀನ್ ಹಾವಳಿ ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವು ಸಹಜವಾಗಿದ್ದು ಸೋಲು ಮತ್ತು ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳಬೇಕು. ಕ್ರೀಡಾಮನೋಭಾವದಿಂದ ಕ್ರೀಡೆಯಲ್ಲಿ ತೊಡಗಿದಾಗ ಮಾತ್ರ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.
ಪಂದ್ಯಾವಳಿಯಲ್ಲಿ ಮರ್ಕಲ್ ಪೈಟರ್ಸ್ ತಂಡ ಪ್ರಥಮ, ಅಚಿವರ್ಸ್ ಜನ್ನಾಪುರ ದ್ವಿತೀಯ ಸ್ಥಾನ ಪಡೆದುಕೊಂಡಿತು. ಪ್ರಥಮ ಸ್ಥಾನ ಪಡೆದ ವಿಜೇತರಿಗೆ 11 ಸಾವಿರ ನಗದು, ದಿನಸಿ ವಸ್ತುಗಳು ಹಾಗೂ ಟ್ರೋಪಿ, ದ್ವಿತೀಯ ಸ್ಥಾನ ಪಡೆದ ವಿಜೇತರಿಗೆ 7 ಸಾವಿರ ನಗದು, ದಿನಸಿ ಹಾಗೂ ಟ್ರೋಪಿಯನ್ನು ನೀಡಲಾಯಿತು.
ಮೂಡಿಗೆರೆ ತಾ: ನೆಡುವಾಳೆಯ,ಚಂದುವಳ್ಳಿಯಲ್ಲಿ ನಡೆದ 3.ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯ ಕೊನೆಯ ದಿನದ ಕಾರ್ಯಕ್ರಮದಲ್ಲಿ.