ಬೆಳಗಾವಿಯಲ್ಲಿ ಬಿಜೆಪಿ ಗ್ರಾಮ ಸ್ವರಾಜ್ಯ ಸಮಾವೇಶವನ್ನು ಜೊಲ್ಲೆಜಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು #avintvcom
ಬೆಳಗಾವಿ
“ಗ್ರಾಮ ಪಂಚಾಯತ್ ಗಳಲ್ಲೂ ‘ಬಿಜೆಪಿ’ಯ ವಿಜಯದ ಬಾವುಟ ಹಾರಲಿದೆ’’
ಇಂದು ಬೆಳಗಾವಿಯಲ್ಲಿ, ಬಿಜೆಪಿ ‘ಗ್ರಾಮ ಸ್ವರಾಜ್ಯ, ಸಮಾವೇಶವನ್ನು ಪಕ್ಷದ ಮುಖಂಡರ ನೇತೃತ್ವದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪಕ್ಷದ ಕಾರ್ಯಕರ್ತರೆಲ್ಲರನ್ನು ಒಗ್ಗೂಡಿಸಿ, ಅವರಿಗೆ ಆತ್ಮವಿಶ್ವಾಸ ತುಂಬಿ, ಗ್ರಾ.ಪಂ. ಚುನಾವಣೆಯನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಕೈಗೊಂಡಿರುವ ವಿನೂತನ ಹೆಜ್ಜೆಯೇ ಗ್ರಾಮ ಸ್ವರಾಜ್ಯ. ಈಗಾಗಲೇ ಜನರು ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಮೆಚ್ಚಿದ್ದಾರೆ. ಮುಂದೆಯೂ ಬಿಜೆಪಿ ಪಕ್ಷಕ್ಕೆ ಮತ ಸುಭೀಕ್ಷೆ ನೀಡುವ ಮೂಲಕ ಮತ್ತೊಮ್ಮೆ ಬಿಜೆಪಿ ವಿಜಯಕ್ಕೆ ಕಾರಣರಾಗಲಿದ್ದಾರೆ ಎಂಬ ನಂಬಿಕೆಯಿದೆ. ಕಾರ್ಯಕರ್ತರು ತಮ್ಮ ಗ್ರಾಮಗಳ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿ, ಹಳ್ಳಿಯಿಂದ ದಿಲ್ಲಿಯವರೆಗೆ ಬಿಜೆಪಿ ಆಡಳಿತಕ್ಕೆ ಬರಲು ಕೈ ಜೋಡಿಸಬೇಕು ಎಂದು ನುಡಿದರು.
ಸಮಾರಂಭದಲ್ಲಿ ಸಚಿವರಾದ ಶ್ರೀ ಜಗದೀಶ ಶೆಟ್ಟರ್ ಜಿ, ಶ್ರೀ ರಮೇಶ ಜಾರಕಿಹೊಳಿ ಜಿ, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಶ್ರೀ ಮಾಹಾಂತೇಶ ಕವಟಗಿಮಠ ಜಿ, ರಾಜ್ಯ ಯುವ ಮೋರ್ಚಾದ ಅಧ್ಯಕ್ಷರಾದ ಡಾ. ಸಂದೀಪ್ ಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ಎಂ. ರಾಜೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿದ್ಧರಾಜು, ಬೆಳಗಾವಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಸಂಜಯ ಪಾಟೀಲ, ಶಾಸಕರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
“ग्रामपंचायतीमध्ये ही भाजपा झेंडा फडकवणार”
आज बेळगावी येथे भाजपा पक्षाच्या वतीने आयोजित ‘ग्राम स्वराज्य’ समावेश मान्यवरांच्या नेतृत्वात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी उद्घाटन करून, कार्यक्रमास उद्देशून संबोधित केले.
सर्व पक्षाच्या कार्यकर्त्यांना एकत्र आणून त्यांचे आत्मविश्वास भरून, निवडणुका लढवण्यासाठी एक नाविन्यपूर्ण पाऊलच गाव स्वराज्य. आधीच लोकांनी भाजपा सरकारच्या योजनांना स्वीकारले आहेत. पुढे ही भाजपा पक्षाला मत दिल्यास पुन्हा एकदा भाजपाचा विजय होईल असा विश्वास आहे. यासाठी कार्यकर्त्यांनी गावात भाजपाच्या उमेदवारांना जिंकवण्यासाठी परिश्रम घेतले पाहिजेत आणि गावापासून दिल्लीपर्यंत भाजपा सत्तेवर येण्यासाठी सर्वांनी प्रयत्न केला पाहिजे असे सांगितले.
यावेळी श्री. जगदीश शेट्टर जी, श्री रमेश जारकीहोळी जी, विधान परिषदेचे मुख्य सचेतक श्री महांतेश कवटगीमठ जी, प्रदेशाध्यक्ष युवमोर्चाचे डॉ. संदीप कुमार, प्रदेश उपाध्यक्ष श्री. एम. राजेंद्र, प्रदेश सरचिटणीस श्री सिद्धराजु, बेळगावी भाजपा जिल्हाध्यक्ष श्री. संजय पाटील, प्रदेश पदाधिकारी, जिल्हा सरचिटणीस, आमदार पक्षाचे स्थानिक नेते व कार्यकर्ते उपस्थित होते.