AVIN TV

Latest Online Breaking News

ಬಿಜೆಪಿ ವತಿಯಿಂದ ಆಯೋಜಿಸಿದ್ದ ‘ಗ್ರಾಮ ಸ್ವರಾಜ್ಯ’ ಸಮಾವೇಶವನ್ನು ಜೊಲ್ಲೆಜಿ ಯವರು ಉದ್ಘಾಟಿಸಿ, ಮಾತನಾಡಿದರು#avintvcom

“ಪ್ರತಿ ಕಾರ್ಯಕರ್ತರನ್ನು ಗೌರವದಿಂದ ಕಾಣುವ ಪಕ್ಷ ಬಿಜೆಪಿ”

ಇಂದು ಹುಕ್ಕೇರಿಯಲ್ಲಿ, ಬಿಜೆಪಿ ವತಿಯಿಂದ ಆಯೋಜಿಸಿದ್ದ ‘ಗ್ರಾಮ ಸ್ವರಾಜ್ಯ’ ಸಮಾವೇಶವನ್ನು ಪಕ್ಷದ ಮುಖಂಡರ ನೇತೃತ್ವದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿ ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಹೆಜ್ಜೆಯೇ ಗ್ರಾಮ ಸ್ವರಾಜ್ಯ. ಪ್ರಸ್ತುತ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಂಡು, ಗ್ರಾಮ ಮಟ್ಟದಲ್ಲೂ ಪಕ್ಷವನ್ನು ಗೆಲ್ಲಿಸಲು ಅವಿರತವಾಗಿ ಶ್ರಮಿಸುತ್ತಿದ್ದೇವೆ. ಜನರು ನೀಡಿದ ಮತ ಸುಭೀಕ್ಷೆಗೆ ಪ್ರತಿಫಲ ನೀಡುವ ಸಲುವಾಗಿ ಆಯುಷ್ಮಾನ್ ಭಾರತ್, ಜನಧನ ಖಾತೆ,  ಕಿಸಾನ್ ಸಮ್ಮಾನ್, ಬೇಟಿ ಬಚಾವೋ-ಬೇಟಿ ಪಡಾವೋ, ಭಾಗ್ಯಲಕ್ಷ್ಮಿ ಹೀಗೆ ಹಲವಾರು ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಈ ಜನಪರ ಯೋಜನೆ ತಳಮಟ್ಟಕ್ಕೆ ಸಂಪೂರ್ಣವಾಗಿ ತಲುಪಬೇಕಾದರೆ, ಗ್ರಾಮೀಣ ಭಾಗಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬರಬೇಕು. ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಲಿದೆ ಎಂಬ ದೃಢ ನಂಬಿಕೆಯಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಸಚಿವರಾದ ಶ್ರೀ ಜಗದೀಶ ಶೆಟ್ಟರ್ ಜಿ, ಶ್ರೀ ಸಿ.ಸಿ.ಪಾಟೀಲ್ ಜಿ, ಶ್ರೀ ರಮೇಶ ಜಾರಕಿಹೊಳಿ ಜಿ, ಶಾಸಕರಾದ ಶ್ರೀ ಉಮೇಶ್ ಕತ್ತಿ,ಶ್ರೀ ಪಿ.ರಾಜೀವ್, ವಿಧಾನಪರಿಷತ್ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ರಾಜ್ಯ ಯುವಮೋರ್ಚಾದ ಅಧ್ಯಕ್ಷರಾದ ಡಾ. ಸಂದೀಪ್ ಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ಎಂ. ರಾಜೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿದ್ಧರಾಜು, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಡಾ. ರಾಜೇಶ ನೇರ್ಲಿ, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಮಹಿಳಾ ಮೋರ್ಚಾದ ಸದಸ್ಯರು, ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

“प्रत्येक कर्यकर्यांना भाजपा पक्ष  गौरवाने पाहतो”

आज हुक्केरी येथे भाजपा पक्षाच्या वतीने आयोजित ‘ग्राम स्वराज्य’  समावेश मान्यवरांच्या नेतृत्वात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी उद्घाटन करून, कार्यक्रमास उद्देशून संबोधित केले.

भाजपा पक्षाच्या विजयासाठी परिश्रम घेणाऱ्या कार्यकर्त्यांना नेते बनवायचा मूळ उद्देशच ग्राम स्वराज्य. सध्या केंद्र व राज्यात भाजपा सरकार आहे. या सुवर्ण संधीचा फायदा घेऊन, गावपातळीवर पक्ष जिंकण्यासाठी जोरदार प्रयत्न करीत आहोत. जनतेने दिलेला मताला प्रतिफल देण्यासाठी आयुष्मान भारत, जनधन खाते, किसान सन्मान, बेटी बचाओ-बेटी पढाओ आणि भाग्यलक्ष्मी असे अनेक प्रकल्प राबवले आहेत. सर्वसामान्यांचे योजना तळागाळापर्यंत पोहोचण्याची असेल तर ग्रामीण भागातही भाजपची सत्ता आली पाहिजे. ग्राम पंचायत   निवडणुकीत भाजपा विजयी होईल असा ठाम विश्वास आहे असे सांगितले.

यावेळी श्री. जगदीशा शेट्टर जी, श्री सी.सी. पाटील जी, श्री रमेश जारकीहोळी जी, आमदार श्री उमेश कत्ती, श्री पी. राजीव, विधान परिषदेचे मुख्य सचेतक श्री महांतेश कवटगीमठ, प्रदेशाध्यक्ष युवमोर्चाचे डॉ. संदीप कुमार, प्रदेश उपाध्यक्ष श्री. एम. राजेंद्र, प्रदेश सरचिटणीस श्री सिद्धराजु, भाजपा जिल्हाध्यक्ष श्री.  राजेश नेर्ली, प्रदेश पदाधिकारी, जिल्हा सरचिटणीस, महिला मोर्चाच्या सदस्या, पक्षाचे स्थानिक नेते व कार्यकर्ते उपस्थित होते.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!