ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ಸಂಘಟನಾ ಕಾರ್ಯದರ್ಶಿ ಬಸವರಾಜು ಅವರಿಂದ ಪತ್ರಕರ್ತರಿಗೆ ಭದ್ರತೆ #avintvco

ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ಸಂಘಟನಾ ಕಾರ್ಯದರ್ಶಿ ಬಸವರಾಜು ಅವರಿಂದ ಪತ್ರಕರ್ತರಿಗೆ ಭದ್ರತೆ, ರಕ್ಷಣೆ ಒದಗಿಸುವಂತೆ ಗೃಹ ಸಚಿವರಾದ ಬಸವರಾಜು ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಕೆ *ಹೌದು ರಾಜ್ಯದ ಎಲ್ಲಾ ಸುದ್ದಿ ಮಾಧ್ಯಮ, ದೈನಿಕ, ವಾರ, ಪಾಕ್ಷಿಕ, ಮಾಸಿಕ, ಹಾಗೂ ಕೇಬಲ್ tv ಹಾಗೂ ಅಧಿಕೃತ ಯೂಟ್ಯೂಬ್, ಸಾಮಾಜಿಕ ಜಾಲತಾಣಗಳ ಪತ್ರಕರ್ತರು ಹಾಗೂ ಪ್ರತಿನಿಧಿಗಳಿಗೆ ಸೂಕ್ತ ಭದ್ರತೆ, ರಕ್ಷಣೆಯಿಲ್ಲದೇ ಸಾಕಷ್ಟು ಬಾರಿ ಹಲ್ಲೆಗಳು, ಕೊಲೆ ಯತ್ನಗಳು, ಹಾಗೂ ಅವ್ಯಾಚ ಶಬ್ದಗಳಿಂದ ನಿಂದಿಸುವುದು ಹೀಗೆ ಹಲವಾರು ಅವಮಾನವೀಯ ಘಟನೆಗಳಿಗೆ ತಮ್ಮ ಕಾರ್ಯನಿರ್ವಹಣೆ ಸಂದರ್ಭದಲ್ಲಿ ಒಳಗಾಗುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರಿಗೂ ಸೂಕ್ತ ಭದ್ರತೆ, ರಕ್ಷಣೆ ಒದಗಿಸುವಂತೆ ರಾಜ್ಯಾಧ್ಯಕ್ಶರು ಆದ ಟಿ. ಶಿವಕುಮಾರ ನಾಗರ ನವಿಲೆ ಅವರ ಮಾರ್ಗದರ್ಶನದ ಮೇರೆಗೆ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯ ಉಪ ಸಂಘಟನಾ ಕಾರ್ಯದರ್ಶಿ ಶ್ರೀ ಬಸವರಾಜು ಅವರಿಂದ ಗೃಹ ಸಚಿವರಾದ ಶ್ರೀ ಬಸವರಾಜು ಬೊಮ್ಮಾಯಿ ಅವರಿಗೆ ಮನವಿಸಲ್ಲಿಸಿದರು ವಂದನೆಗಳು. ಶ್ರೀ ಬಸವರಾಜು. ರಾಜ್ಯ ಉಪಸಂಘಟನಾ ಕಾರ್ಯದರ್ಶಿಗಳು. ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್. ಕರ್ನಾಟಕ ರಾಜ್ಯ.