ಇವತ್ತು ಶ್ರೀಮಹಾತ್ಮಾ ಜ್ಯೋತಿಬಾಫುಲೆ ಅವರ130ನೇ ಪುಣ್ಯಸ್ಮರಣೆ ದಿನದ ಶುಭಾಶಯಗಳು #avintvcom

ಇವತ್ತು ಶ್ರೀಮಹಾತ್ಮಾ ಜ್ಯೋತಿಬಾಫುಲೆ ಅವರ130ನೇ ಪುಣ್ಯಸ್ಮರಣೆ ದಿನದ ಶುಭಾಶಯಗಳು
ಈ ಹಿಂದೆ ಒಕ್ಕಲಿಗರನ್ನು, ಹೂವು ಮಾರುವವರನ್ನೂ ಕೂಡ ಅಸ್ಪೃಶ್ಯ, ಶೂದ್ರ ಅನ್ನುತ್ತಿದ್ದ ದಿನಗಳಲ್ಲಿ, ತಮ್ಮ ಶಾಲಾ ದಿನಗಳಲ್ಲಿ ಬಂಡೆದ್ದ ಹುಡುಗ ಮುಂದೆ ಪ್ರತಿಯೊಬ್ಬ ಅಸ್ಪೃಶ್ಯ, ಶೂದ್ರ, ಬಡವ ಮತ್ತು ಎಲ್ಲ ಹೆಣ್ಣುಮಕ್ಕಳು ವಿದ್ಯೆಗೆ ಅರ್ಹರು ಮತ್ತು ಅದು ಅವರ ಹಕ್ಕು ಎಂದು ಹೋರಾಡಿ, ಶೋಷಣೆಗೆ ಒಳಗಾದ ವ್ಯಕ್ತಿಗಳು ಕೂಡ ಓದಿದರೆ ಜ್ಞಾನ ಸಂಪಾದಿಸಿದರೆ ಯಾರಿಗೂ ತಲೆ ಬಾಗ ಬೇಕಿಲ್ಲ ಎಂದು ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಶ್ರೀ ಜ್ಯೋತಿಬಾ ಫುಲೆ..
ತಮ್ಮ ಅನಕ್ಷರಸ್ತ ಹೆಂಡತಿಯಾದ ಶ್ರೀಮತಿಸಾವಿತ್ರಿಬಾಯಿಫುಲೆ ಅವರಿಗೆ ವಿದ್ಯಾಭ್ಯಾಸ ಹೇಳಿ ಕೊಟ್ಟು ಆವಳು ಬೇರೆಯವರಿಗೆ ವಿದ್ಯೆ ಹೇಳಿ ಕೊಡುವಂತೆ ಮಾಡಿ ಪತ್ನಿ ಶ್ರೀಮತಿ ಸಾವಿತ್ರಿಬಾಯಿ ಫುಲೆ ಅವರನ್ನು ಮೊದಲ ಆಧುನಿಕ ಭಾರತದ ಪ್ರಪ್ರಥಮ ಶಿಕ್ಷಕಿಯನ್ನಾಗಿ ಮಾಡಿದರು.
ಬ್ರಿಟಿಷ್ ಕಾಲದಲ್ಲಿ ಅವರು ವಿದ್ಯೆಗೆ ಕೊಡುತ್ತಿದ್ದ ಪ್ರಾಮುಖ್ಯತೆಗೆ ಪ್ರೇರಿತರಾಗಿ ಎಲ್ಲರಿಗೂ ವಿದ್ಯಾಭ್ಯಾಸ ಕೊಡಿಸುವ ಪಣ ತೊಟ್ಟ ಧೀಮಂತ..
ಇವರು ಮುಂದೆ ಒಬ್ಬ ಒಳ್ಳೆ ಶಿಕ್ಷಕ, ಬರಹಗಾರ, ಹೋರಾಟಗಾರ, ವಿಧವಾ ವಿವಾಹ ಮತ್ತು ಅವರ ಮಕ್ಕಳಿಗೆ ಶಿಕ್ಷಣ, ಸಮಾಜ ಸುಧಾರಕ ಕೆಲಸ, ಕ್ರಾಂತಿಕಾರಿ ನೀತಿ, ಜಮೀನ್ದಾರಿ ಪದ್ಧತಿ ವಿರೋಧಿಸಿ ರೈತಪರ ಹೋರಾಟಗಾರರಾಗಿ ಇವೆಲ್ಲದರ ಜೊತೆ ಒಬ್ಬ ಒಳ್ಳೆಯ ಯಶಸ್ವಿ ವ್ಯಾಪಾರಸ್ಥರೂ ಆದರು.
ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಇವರೇ ಸ್ಫೂರ್ತಿ..
ಇಂಥ ಕ್ರಾಂತಿಕಾರಿಗಳು ಭಾರತವನ್ನು ತನ್ನ ಗೊಡ್ಡು ಜಾಡ್ಯದಿಂದ ಮುಕ್ತ ಮಾಡುವಲ್ಲಿ ಬಹಳ ಕೊಡುಗೆ ನೀಡಿದ್ದಾರೆ..
ಆಧುನಿಕ ಭಾರತದ ಶೈಕ್ಷಣಿಕ ಕ್ರಾಂತಿಯ ಜನಕ, ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀಮಹಾತ್ಮಾ ಜ್ಯೋತಿಬಾಫುಲೆ ಅವರ 130 ನೇ ಪುಣ್ಯಸ್ಮರಣೆಯ ಶುಭಾಶಯಗಳು..
ದೇಶದ ತುಂಬೆಲ್ಲಾ ಕೊರೊನಾ ತನ್ನ ಅಟ್ಟಹಾಸ ತೋರಿದ ಈ ಸಂದರ್ಭದಲ್ಲಿ ದೇಶದಲ್ಲಿ ಲಾಕಡೌನ್ ಇದೆ ಆದ ಕಾರಣ ನಾವುಗಳು ಇಂದು ನಮ್ಮ ನಮ್ಮ ಮನೆಯಲ್ಲಿಯೇ ಹಾಗೂ ಕಾರ್ಯ ಸ್ಥಳದಲ್ಲಿಯೇ ಫುಲೆ ಅವರ ಭಾವಚಿತ್ರವಿಟ್ಟು ಸಾಮಾಜಿಕ ಅಂತರ ಕಾಯ್ದುಕೊಂಡು ಭಾವಚಿತ್ರಪೂಜೆ ಮಾಡಿ ಅವರ ತತ್ವಾದರ್ಶಗಳನ್ನು ನೆನೆಯೋಣ ಹಾಗೂ ಇತರರಿಗೆ ತಿಳಿಸಿ ಅವರ ತ್ಯಾಗಕ್ಕೆ ಗೌರವ ಸಲ್ಲಿಸೋಣ..