AVIN TV

Latest Online Breaking News

ಹುಣಸಗಿ ತಾಲೂಕಿನಲ್ಲಿ ಇಂದು ಭಾರತ ಮುಷ್ಕರಕ್ಕೆ ಬೆಂಬಲ ಸೂಚಿಸಲಾಯಿತು ಈ ಒಂದು ಬೃಹತ್ ಪ್ರತಿಭಟನಾ #avintvcom

Featured Video Play Icon

ಅಖಿಲ ಭಾರತ ರೈತರ ಸಂಘರ್ಷ ಸಮನ್ವಯ ಸಮಿತಿ ಹಾಗೂ ಕಾರ್ಮಿಕ ಸಂಘಟನೆಗಳು ಸಿಐಟಿಯು ತಾಲೂಕು ಸಮಿತಿ ಹುಣಸಗಿ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಇಂದು ಭಾರತ ಮುಷ್ಕರಕ್ಕೆ ಬೆಂಬಲ ಸೂಚಿಸಲಾಯಿತು ಈ ಒಂದು ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಹಲವಾರು ಸಂಘಟನೆಯ ಮುಖಂಡರು ಭಾಗಿಯಾಗಿದ್ದರು, ಹುಣಸಿಗಿ ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ನೂರಾರು ಕಾರ್ಮಿಕರು ರೈತರು ಅಂಗನವಾಡಿ ನೌಕರರು ಪಂಚಾಯತ್ ನೌಕರರು ಕಟ್ಟಡ ಕಾರ್ಮಿಕರು ಕಾಲ್ನಡಿಗೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ಕಾರ್ಮಿಕ ವಿರೋಧಿ ನೀತಿಗಳನ್ನು ಧಿಕ್ಕರಿಸುತ್ತಾ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಂದು ಸೇರಿದರು, ಈ ಸಂದರ್ಭದಲ್ಲಿ, ದಾವಲ್ ಸಾಬ್ ನದಾಫ್ ಜಿಲ್ಲಾಧ್ಯಕ್ಷರು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ಯಾದಗಿರಿ, ಇವರು ಮಾತನಾಡಿ ಸುಗ್ರೀವಾಜ್ಞೆ ಮೂಲಕ ಕಾಯ್ದೆ ತರಲು ಹೊರಟಿರುವ ಸರ್ಕಾರ ಹಣಕಾಸು ವಲಯ ಸೇರಿದಂತೆ ರೈಲ್ವೆ ವಿಮಾನಯಾನ ಆರೋಗ್ಯ ಶಿಕ್ಷಣ ವಿದ್ಯುತ್ ದೂರಸಂಪರ್ಕ ಬ್ಯಾಂಕುಗಳ ಸಾರ್ವಜನಿಕ ವಲಯದ ಉದ್ದಿಮೆಗಳು ನಿಲ್ಲಿಸಬೇಕು, ಭೂ ಸುಧಾರಣೆ ಕಾಯ್ದೆ ವಿದ್ಯುತ್ ಕಾಯ್ದೆ ಎಪಿಎಂಸಿ ಕಾಯ್ದೆ ವಾಪಸ್ ಈ ಕೂಡಲೇ ಹಿಂಪಡೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು, ಬೃಹತ್ ಧರಣಿಯ ನೇತೃತ್ವವನ್ನು ವಹಿಸಿದಂತಹ ಬಸವರಾಜ ಎಸ್ ಕಟ್ಟಿಮನಿ ಕಾಮನಟಗಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ್ಮಿಕರ ಸಂಘಟನೆಯ ತಾಲೂಕ ಅಧ್ಯಕ್ಷರು ಹುಣಸಗಿ ಮಾತನಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಬಡವರ ಪಾಲಿಗೆ ವರದಾನವಾಗಬೇಕಾಗಿದ್ದು ಕಾಯ್ದೆ ಸಮರ್ಪಕವಾಗಿ ಜಾರಿಯಾಗದೇ ಕೃಷಿ ಕೂಲಿಕಾರರು ವಲಸೆ ಹೋಗುವುದು ನಿರಂತರವಾಗಿದೆ, ಈ ವರ್ಷ ಕರೋನ ದಿಂದ ತತ್ತರಿಸಿರುವ ಯಾದಗಿರಿ ಜಿಲ್ಲೆಗೆ 200 ದಿನ ಕೆಲಸಕೊಟ್ಟು ದಿನಕ್ಕೆ 600 ರೂಪಾಯಿ ಹೆಚ್ಚಿಸಬೇಕು ದುಡಿದವರ ಕೂಲಿ ಹಣ ತಕ್ಷಣವೇ ಕೊಡಬೇಕು, ತಾಂತ್ರಿಕ ಸಮಸ್ಯೆ ಪರಿಹರಿಸಬೇಕು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವಾಗ ಮೃತರಾದರೆ ಕುಟುಂಬಕ್ಕೆ 5 ಲಕ್ಷ ಪರಿಹಾರ ಕೊಡಬೇಕು, ಮೇಟಿ ಗಳಿಗೆ ಗೌರವ ಧನ ಕೊಡಬೇಕು, ಮತ್ತು ಮೇಟಿಗಳಿಗೆ ರಕ್ಷಣೆ ಕೊಡಬೇಕು, ಸಲಕರಣೆ ಬಾಡಿಗೆ ಮತ್ತು ಪ್ರಯಾಣವೆಚ್ಚ ಕೊಡಬೇಕು, ನಿವೇಶನ ಇಲ್ಲದ ಕುಟುಂಬಕ್ಕೆ ಜಮೀನು ಖರೀದಿಸಿ ನಿವೇಶನ ಹಂಚಿಕೆ ಮಾಡಬೇಕು, ನೂತನ ತಾಲೂಕು ಹುಣಸಗಿ ಯಲ್ಲಿ ಎಲ್ಲಾ ಇಲಾಖೆಯ ಕಚೇರಿಗಳು ಸ್ಥಾಪನೆ ಮಾಡಬೇಕು ಎಂದು ಹೇಳಿದರು. ರಾಜ್ಯ ರೈತ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಆಗಿರುವ ಮಹದೇವಿ ಬೇವಿನಾಳಮಠ ಮಾತನಾಡಿ ರಾಜ್ಯ ಸರ್ಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಪರಿಹಾರ ಕೊಡುವಲ್ಲಿ ಸರ್ಕಾರ ವಿಫಲವಾಗಿದೆ ಬತ್ತ ಖರೀದಿ ಕೇಂದ್ರ ಸ್ಥಾಪಿಸಿ ಕ್ವಿಂಟಲ್ಗೆ ಮೂರು ಸಾವಿರ ರೂಪಾಯಿ ಕೊಡಬೇಕು, ನಾರಾಯಣಪುರ ಎಡದಂಡೆ ಕಾಲುವೆ ನೀರಿನಿಂದ ರೈತರ ಬದುಕು ಹಸನಾಗಬಹುದು ಎಂಬ ಕನಸು ನನಸಾದೇ ಉಳಿದಿದೆ, ದುಬಾರಿ ಗೊಬ್ಬರ ಕ್ರಿಮಿನಾಶಕ ತಂದು ಪಸಲು ಕೈ ಸೇರುವಾಗ ದಿಡೀರನೆ ಬೆಲೆ ಕುಸಿದು ಕಂಗಾಲಾಗಿ ಸಾಲ ತೀರಿಸದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಹೇಳಿದರು, ಬಸಲಿಂಗಮ್ಮ ಗುಂಡಲಗೇರ ಅಂಗನವಾಡಿ ನೌಕರರ ಸಂಘದ ತಾಲೂಕು ಕಾರ್ಯದರ್ಶಿಗಳು ಸುರಪುರ ಮಾತನಾಡಿ ಆಶಾ ಅಂಗನವಾಡಿ ಬಿಸಿಯೂಟ ಕಾರ್ಯಕರ್ತರನ್ನು ಸರಕಾರಿ ನೌಕರರೆಂದು ಪರಿಗಣಿಸಿ ಗುತ್ತಿಗೆ ಹೊರಗುತ್ತಿಗೆ ದಿನಗೂಲಿ ನಿಶ್ಚಿತ ವೇತನ ಇತ್ಯಾದಿ ಹೆಸರಿನಲ್ಲಿ ಸೇವೆಸಲ್ಲಿಸುತ್ತಿರುವ ಎಲ್ಲಾ ಕಾರ್ಮಿಕರು ಮತ್ತು ನೌಕರರನ್ನು ಕಾಯಂಗೊಳಿಸಬೇಕು ಮಾಸಿಕ 21000 ರೂಪಾಯಿ ವೇತನ ನೀಡಬೇಕು ಎಂದು ಹೇಳಿದರು. ಸಾಬಣ್ಣ ಮಲಗಲದಿನ್ನಿ ಮಾತನಾಡಿ ಉದ್ಯೋಗ ಖಾತ್ರಿ ಸಮರ್ಪಕ ಜಾರಿಯಾಗಬೇಕಾದರೆ ಮೊದಲು ನಿಮ್ಮ ನಿಮ್ಮ ಊರುಗಳಲ್ಲಿ ವಲಸೆ ಹೋಗದೆ ಸರ್ಕಾರದಿಂದ ಸಿಗುವಂತ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೀವು ಕೆಲಸ ಮಾಡಬೇಕು ಎಂದು ಹೇಳಿದರು, ಈ ಸಂದರ್ಭದಲ್ಲಿ ಪ್ರಶಾಂತ್ ನಾಯಕ್ ಕೊಡೆಕಲ್, ಮಲ್ಲಮ್ಮ ಗಡದ್, ಸಂಗಮ್ಮ ಪತ್ತಾರ್, ಗಂಗಮ್ಮ ತಳವಾರ್ ಭೀಮರಾಯ ಕಲ್ಯಾಣಿ, ಬಾಲಪ್ಪ ತಳವಾರ್ ಮರಿಯಮ್ಮ ಚಲವಾದಿ, ಜಗನಪ್ಪ ನಡುಕೋರ್, ಮಲ್ಲಪ್ಪ ಕಲ್ಯಾಣಿ, ಶಂಕ್ರಪ್ಪ ನೀರಲಿಗಿ ಪರಮೇಶ ಶಾಮಣ್ಣ ಜಟ್ಟೆಪ್ಪ ರೇವಣಸಿದ್ದಪ್ಪ, ನಶಿಮ ಮುದನೂರು, ಮಡಿವಾಳಪ್ಪ ಮಡಿವಾಳ, ಖಾಜಾಸಾಬ್ ದಳಪತಿ,ಬಂದೇನವಾಜ್ ನದಾಫ್,ಶರಣಪ್ಪ ಜಂಬಲ್ದಿನ್ನಿ, ಶಾಂಭವಿ ರಾಜನಾಳ ತಾಂಡಾ, ಗಂಗಣ್ಣ ಚಲವಾದಿ, ಶರೀಫ್ ಸಾಬ್ ಬೋನಾಳ, ಭೀಮಬಾಯಿ ನಾರಾಯಣಪುರ, ರಂಜಾನ್ ಸಾಬ್,ಪರಮಣ್ಣ ಸೋಮಣ್ಣ,ಅಯ್ಯಪ್ಪ, ಇನ್ನಿತರರು ರೈತ ಮುಖಂಡರು ಕಾರ್ಮಿಕರು ಉಪಸ್ಥಿತರಿದ್ದರು,

लाइव कैलेंडर

October 2021
M T W T F S S
 123
45678910
11121314151617
18192021222324
25262728293031
error: Content is protected !!