AVIN TV

Latest Online Breaking News

ಚಲನಚಿತ್ರ ನಟ ಕಿಚ್ಚ ಸುದೀಪ ಅವರಿಂದ ಅಮೃತ್‍ನೋನಿ ಪೇನ್ ಆಯಿಲ್ ಮಾರುಕಟ್ಟೆಗೆ ಬಿಡುಗಡೆ #avintvcom

Featured Video Play Icon

ಚಲನಚಿತ್ರ ನಟ ಕಿಚ್ಚ ಸುದೀಪ ಅವರಿಂದ ಅಮೃತ್‍ನೋನಿ ಪೇನ್ ಆಯಿಲ್ ಮಾರುಕಟ್ಟೆಗೆ ಬಿಡುಗಡೆ
-ಅಮೃತ್‍ನೋನಿ ಖ್ಯಾತಿಯ ವ್ಯಾಲ್ಯೂಪ್ರಾಡೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಮಾರ್ಕೆಟಿಂಗ್ ಹಾಗೂ ಡಿಸ್ಟ್ರಿಬ್ಯೂಟಿಂಗ್ ಸಂಸ್ಥೆ ಓಂ ಶ್ರೀ ಎಂಟರ್‍ಪ್ರೈಸಸ್ ಅವರ ಸಹಯೋಗದಲ್ಲಿ ಅತ್ಯುತ್ತಮ ಗುಣಮಟ್ಟದ ಪೇನ್‍ಆಯಿಲ್ ಮಾರುಕಟ್ಟೆಗೆ.
-ನೋವು ಹಾಗೂ ಉರಿಯೂತಕ್ಕೆ ಪರಿಣಾಮಕಾರಿ ಆಯುರ್ವೇದ ಔಷಧ

ಬೆಂಗಳೂರು ನವೆಂಬರ್ 25: ಅಮೃತ್‍ನೋನಿ ಖ್ಯಾತಿಯ ವ್ಯಾಲ್ಯೂ ಪ್ರಾಡೆಕ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ತಯಾರಿಸುತ್ತಿರುವ ಹಾಗೂ ಮಾರ್ಕೆಟಿಂಗ್ ಮತ್ತು ಡಿಸ್ಟ್ರಿಬ್ಯೂಟಿಂಗ್ ಸಂಸ್ಥೆ ಓಂ ಶ್ರೀ ಎಂಟರ್‌ಪ್ರೈಸಸ್‌ ಮೂಲಕ ವಿತರಣೆಯಾಗುತ್ತಿರುವ ಅಮೃತ್‍ನೋನಿ ಪೇನ್ ಆಯಿಲ್ ಅನ್ನು ಇಂದು ಖ್ಯಾತ ಚಲನಚಿತ್ರನಟ ಕಿಚ್ಚ ಸುದೀಪ ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಸುದೀಪರವರು ಆಯುರ್ವೇದ ನಮ್ಮದು, ನಮ್ಮ ಹೆಮ್ಮೆ, ನಮ್ಮ ಸಂಸ್ಕೃತಿಯ ಬೇರು, ಪ್ರಸ್ತುತ ಸನ್ನಿವೇಶದಲ್ಲಿ ಆಯುರ್ವೇದಕ್ಕೆ ಅತ್ಯಂತ ಹೆಚ್ಚಿನ ಮಹತ್ವ ಸಿಗುತ್ತಿದೆ. ಪ್ರತಿಯೊಬ್ಬರೂ ಇಂದು ಆಯುರ್ವೇದವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಆಯುರ್ವೇದಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ತಂದುಕೊಡುವಲ್ಲಿ ವ್ಯಾಲ್ಯೂ ಪ್ರಾಡಕ್ಟ್‌ ನ ಅಮೃತ್‍ನೋನಿ ಉತ್ಪನ್ನಗಳು ಯಶಸ್ವಿಯಾಗಿವೆ ಎಂದರೆ ತಪ್ಪಾಗಲಾರದು. ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಲ್ಯೂ ಪ್ರಾಡಕ್ಟ್ಸ್‌ ತಾನೇ ಸ್ವತಃ ನೋನಿಯನ್ನು ಬೆಳೆಯುವುದರ ಜೊತೆಗೆ ಆಧುನಿಕ ತಂತ್ರಜ್ಞಾನದಿಂದ ತಯಾರಿಸುತ್ತಿರುವ ಅಮೃತ್‍ನೋನಿ ಉತ್ಪನ್ನಗಳು ಇಂದು ಲಕ್ಷಾಂತರ ಜನರ ಆರೋಗ್ಯವನ್ನು ಕಾಪಾಡುವಲ್ಲಿ ಯಶಸ್ವಿಯಾಗಿರುವುದಲ್ಲದೆ, ನನ್ನ ತವರು ಜಿಲ್ಲೆಯ ಅಮೃತ್‍ನೋನಿ ಇಂದು ದೇಶ ವಿದೇಶದಲ್ಲಿ ಬಹಳಷ್ಟು ಪ್ರಖ್ಯಾತಿಯನ್ನು ಪಡೆದಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ. ಹಾಗೇ ಅಮೃತ್‍ನೋನಿ ಉತ್ಪನ್ನಗಳಿಗೆ ಕರ್ನಾಟಕ ರಾಜ್ಯದ ಮೂಲೆಮೂಲೆಯಲ್ಲೂ ಸೂಕ್ತ ಮಾರುಕಟ್ಟೆಯನ್ನು ಒದಗಿಸಿರುವ ಓಂ ಶ್ರೀ ಎಂಟರ್‍ಪ್ರೈಸಸ್ ಶ್ರಮವೂ ಶ್ಲಾಘನೀಯವಾಗಿದೆ. ಎರಡೂ ಸಂಸ್ಥೆಯ ಸಹಯೋಗದಲ್ಲಿ ಈಗ ಹೊಸದಾಗಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿರುವ ಅಮೃತ್‍ನೋನಿ ಪೇನ್‍ಆಯಿಲ್ ಕೂಡಾ ಜನರ ಮನಸ್ಸನ್ನು ಗೆದ್ದು ಅವರ ನೋವಿಗೆ ವಿರಾಮ ಕೊಟ್ಟು ದೇಹಕ್ಕೆ ಆರಾಮ ಕೊಡಲಿ ಎಂದು ಹಾರೈಸಿದರು.

ನಂತರ ವ್ಯಾಲ್ಯೂ ಪ್ರಾಡಕ್ಟ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ ಶ್ರೀನಿವಾಸಮೂರ್ತಿಯವರು ಮಾತನಾಡಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾ ಇದ್ದ ನನಗೆ ಮರುಜನ್ಮ ನೀಡಿದಂತ ನೋನಿ ಇವತ್ತು ಅಮೃತ್‍ನೋನಿಯಾಗಿ ಲಕ್ಷಾಂತರ ಜನಕ್ಕೆ ಆರೋಗ್ಯ ಕೊಡ್ತಾ ಇರೋದು ಬಹಳ ಹೆಮ್ಮೆಯ ವಿಷಯ ಆಗಿದೆ. ಜನರ ಹಾರೈಕೆ ಶುಭಾಶೀರ್ವಾದದ ಫಲವೇ ಇಂದು ವ್ಯಾಲ್ಯೂ ಪ್ರಾಡಕ್ಟ್ಸ್‌ ಸಂಸ್ಥೆಗೆ ಶ್ರೀರಕ್ಷೆಯಾಗಿದೆ. ನಾವು ಪ್ರಾರಂಭದಿಂದ ಇಲ್ಲಿನವರೆಗೂ ನಮ್ಮ ಉತ್ಪನ್ನಗಳ ತಯಾರಿಕೆಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾ ಬಂದಿದ್ದೇವೆ. ಎಷ್ಟೇ ಕಷ್ಟವಾದರೂ ಗುಣಮಟ್ಟಕ್ಕೆ ಕೊರತೆ ಆಗಬಾರದು ಅನ್ನೋದೇ ನಮ್ಮ ಉದ್ದೇಶ. ಆ ಗುಣಮಟ್ಟವೇ ಇವತ್ತು ಜನರ ಹೃದಯದಲ್ಲಿ ಅಮೃತ್‍ನೋನಿಗೆ ಒಂದು ಅತ್ಯುನ್ನತ ಸ್ಥಾನವನ್ನು ಗಳಿಸಿಕೊಟ್ಟಿದೆ ಅಂತ ಹೇಳೊಕೆ ನನಗೆ ಹೆಮ್ಮೆ ಆಗ್ತಾ ಇದೆ. ನಮ್ಮ ಅಮೃತ್‍ನೋನಿ ಡಿ ಪ್ಲಸ್, ಅಮೃತ್‍ನೋನಿ ಆರ್ಥೊಪ್ಲಸ್, ಅಮೃತ್‍ನೋನಿ ಪವರ್‌ ಪ್ಲಸ್‌ ಹಾಗೂ ಅಮೃತ್‍ನೋನಿ ಸ್ತ್ರೀ ಸಂಜೀವಿನಿ ಉತ್ಪನ್ನಗಳು ಈಗಾಗಲೇ ಹತ್ತು ವರ್ಷಗಳಿಂದ ಲಕ್ಷಾಂತರ ಜನರ ಆರೋಗ್ಯಕ್ಕೆ ಕಾರಣವಾಗಿ ಅವರ ನಂಬಿಕೆ ಭರವಸೆಯನ್ನು ಗಳಿಸಿವೆ. ಈಗ ಬಿಡುಗಡೆಯಾಗಿರುವ ಅಮೃತ್‍ನೋನಿ ಪೇನ್ ಆಯಿಲ್ ಕೂಡಾ ಆಯುರ್ವೇದ ತಜ್ಞರ ಸಂಶೋಧನೆಯ ಒಂದು ಅತ್ಯುನ್ನತ ಉತ್ಪನ್ನವಾಗಿದೆ. ನೋವು ಹಾಗೂ ಉರಿಯೂತದಿಂದ ತೊಂದರೆ ಅನುಭವಿಸುತ್ತಿರುವವರಿಗೆ ಈ ನಮ್ಮ ಪೇನ್ ಆಯಿಲ್ ಪರಿಣಾಮಕಾರಿಯಾದ ಫಲಿತಾಂಶ ನೀಡುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.

ಓಂ ಶ್ರೀ ಎಂಟರ್‌ಪ್ರೈಸಸ್‌ನ ವ್ಯವಸ್ಥಾಪಕ ನಿರ್ದೇಶಕಿಯಾದ ಶ್ರೀಮತಿ ಮಂಗಳಾಂಬಿಕೆಯವರು ಮಾತನಾಡಿ ಸುಮಾರು ಮೂರು ವರ್ಷಗಳಿಂದ ಅಮೃತ್‍ನೋನಿ ಉತ್ಪನ್ನಗಳನ್ನು ನಮ್ಮ ಸಂಸ್ಥೆಯಡಿಯಲ್ಲಿ ಗ್ರಾಹಕರಿಗೆ ನೀಡುತ್ತಾ ಬಂದಿದ್ದೇವೆ. ಅಮೃತ್‍ನೋನಿ ಉತ್ಪನ್ನಗಳಿಗೆ ಗ್ರಾಹಕರ ಅಭಿಪ್ರಾಯ ತುಂಬಾ ಚೆನ್ನಾಗಿದೆ. ನಾವು ಕೇವಲ ಅಮೃತ್‍ನೋನಿಯನ್ನ ತಲುಪಿಸೋದಷ್ಟೇ ಅಲ್ಲ ಅವರ ಜೊತೆ ನಮ್ಮ ಕಸ್ಟಮರ್‌ ಕೇರ್‌ ಮೂಲಕ ನಿರಂತರ ಸಂಪರ್ಕದಲ್ಲಿದ್ದು ಅವರ ಆರೋಗ್ಯ ಸುಧಾರಣೆಗೆ ಅಗತ್ಯವಾದ ಸಲಹೆಗಳನ್ನು ಕೂಡಾ ನೀಡುತ್ತಾ ಬಂದಿದ್ದೇವೆ. ಜೊತೆಗೆ ನಮ್ಮದೇ ಆದ ನುರಿತ ವೈದ್ಯರ ಮೂಲಕ ಅಗತ್ಯ ಇರೋರಿಗೆ ಉಚಿತವಾದ ಸಲಹೆಯನ್ನು ಕೂಡಾ ಕೊಡ್ತಿವಿ. ನಮ್ಮ ಶ್ರಮಕ್ಕೆ ವ್ಯಾಲ್ಯೂ ಪ್ರಾಡೆಕ್ಟ್ಸ್ ಸಂಸ್ಥೆ ನೀಡ್ತಾ ಬಂದಿರೋ ಗುಣಮಟ್ಟದ ಉತ್ಪನ್ನ ಕೂಡಾ ಕಾರಣ ಆಗಿದೆ. ಮುಂದಿನ ದಿನಗಳಲ್ಲಿ ಹೊಸ ಹೊಸ ಉತ್ಪನ್ನಗಳನ್ನ ಪರಿಚಯಿಸುವುದರ ಜೊತೆ ಅಮೃತ್‍ನೋನಿ ಉತ್ಪನ್ನಗಳನ್ನ ದೇಶದ ಉದ್ದಗಲಕ್ಕೂ ಕೊಂಡೊಯ್ಯಬೇಕು ಅನ್ನೋದೆ ನಮ್ಮ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವ್ಯಾಲ್ಯೂಪ್ರಾಡೆಕ್ಟ್ಸ್ ಹಾಗೂ ಓಂ ಶ್ರೀ ಎಂಟರ್‍ಪ್ರೈಸಸ್ ನೆಡೆದುಬಂದ ಹಾದಿಯ ಬಗ್ಗೆ ಒಂದು ಕಿರುಚಿತ್ರ ಹಾಗೂ ಅಮೃತ್‍ನೋನಿ ಪೇನ್‍ಆಯಿಲ್ ತಯಾರಿಕೆಯ ಹಾಗೂ ಅದರ ಉಪಯೋಗದ ಬಗ್ಗೆ ತಿಳುವಳಿಕೆ ನೀಡುವ ಚಿತ್ರವನ್ನು ಪ್ರದರ್ಶಿಸಲಾಯಿತು.

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!