AVIN TV

Latest Online Breaking News

ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಮಂಡಳಿ ಸ್ಥಾಪನೆಗೆ ಮುಂದಾದರೆ ಆಮ್ ಆದ್ಮಿ ಪಕ್ಷದಿಂದ ಉಗ್ರ ಹೋರಾಟ #avintvcom

Featured Video Play Icon

ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಮಂಡಳಿ ಸ್ಥಾಪನೆಗೆ ಮುಂದಾದರೆ ಆಮ್ ಆದ್ಮಿ ಪಕ್ಷದಿಂದ ಉಗ್ರ ಹೋರಾಟ: ಶಾಂತಲಾ ದಾಮ್ಲೆ
ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಬಿಬಿಎಂಪಿ
ಬೆಂಗಳೂರು ನವಂಬರ್ 25: ಬೆಂಗಳೂರಿನ ಬೃಹತ್ ಸಮಸ್ಯೆಯಾಗಿ, ಮಾಫಿಯಾವಾಗಿ ಬದಲಾಗಿರುವ ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಸ್ವಾಯತ್ತ ಮಂಡಳಿ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದು. ಈ ನಡೆಯನ್ನು ಆಮ್ ಆದ್ಮಿ ಪಕ್ಷ ವಿರೋಧಿಸುತ್ತದೆ ಎಂದು ಬಿಬಿಎಂಪಿ ಕ್ಯಾಂಪೇನ್ ಉಸ್ತುವಾರಿ, ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ ಹೇಳಿದರು.
ಬುಧವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ಬದಲಾಗುವುದಕ್ಕಿಂತ ಮೊದಲು ಬೆಂಗಳೂರಿನ ಕಸ ನಿರ್ವಹಣೆ ಆರೋಗ್ಯ ಅಧಿಕಾರಿಗಳ ಅಡಿಯಲ್ಲಿ ಬರುತ್ತಿತ್ತು ಆನಂತರ ಇದನ್ನು ಎಂಜಿನಿಯರಿಂಗ್ ವಿಭಾಗಕ್ಕೆ ವರ್ಗಾಯಿಸಲಾಯಿತು, ಇದಾದ ನಂತರ ಕಸದ ಮಾಫಿಯಾ ಕೈಗೆ ಸಿಲುಕಿದ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಇಡೀ ಬೆಂಗಳೂರು ಕಸದ ಕೊಂಪೆಯಾಗಿ ಮಾರ್ಪಟ್ಟಿದೆ ಎಂದರು ಆರೋಪಿಸಿದರು. ಇಡೀ ಸರ್ಕಾರವನ್ನೇ ನಿಯಂತ್ರಣ ಮಾಡುವಷ್ಟು ಬೆಳೆದಿರುವ ಕಸದ ಮಾಫಿಯಾಗಳ ಚಿತಾವಣೆಯಿಂದ ಈ ಕೆಲಸಕ್ಕೆ ಬಿಬಿಎಂಪಿ ಕೈ ಹಾಕಿದೆ. 150 ಕೋಟಿ ವೆಚ್ಚದ ಕಸ ನಿರ್ವಹಣೆ ಬಜೆಟ್ ಈಗಾಗಲೇ 1200 ಕೋಟಿಗೆ ಮುಟ್ಟಿದೆ. ಪ್ರತ್ಯೇಕ ಮಂಡಳಿ ರಚಿಸಿ ಮತ್ತಷ್ಟು ಜನರ ಹಣವನ್ನು ತಿನ್ನುವ ಹುನ್ನಾರ ಎಂದು ಹೇಳಿದರು.
ಪ್ರಸ್ತುತ ಹಲ್ಲು ಕಿತ್ತು ಹಾವಿನಂತಾಗಿರುವ ಬಿಬಿಎಂಪಿ ಯನ್ನು ಮತ್ತಷ್ಟು ದೌರ್ಬಲ್ಯವಾಗಿಸುವ ಹುನ್ನಾರ ಇದಾಗಿದೆ. ನೀರು ಸರಬರಾಜನ್ನು ಜಲ ಮಂಡಳಿಗೆ ನೀಡಲಾಗಿದೆ, ಆಸ್ತಿ ನಿರ್ವಹಣೆ, ಶಾಲೆಗಳ, ಆಸ್ಪತ್ರೆಗಳ ನಿರ್ವಹಣೆ ಹೀಗೆ ಒಂದೊಂದೆ ನಿಯಂತ್ರಣವನ್ನು ಕಿತ್ತುಹಾಕಿ ಕೊನೆಗೊಂದು ದಿನ ಕೇವಲ ಅತೃಪ್ತರನ್ನು ಕೂರಿಸುವ ಆವಾಸಸ್ಥಾನ ಆಗಲಿದೆ ಎಂದು ವ್ಯಂಗ್ಯವಾಡಿದರು.
ಈ ಮೂಲಕ ಜನತೆಯು ಪ್ರಶ್ನೆ ಮಾಡುವ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ. ಜನಪ್ರತಿನಿಧಿಗಳಿಗೆ ಇರುವ ಸಮುದಾಯ ಆರೋಗ್ಯ ಜವಾಬ್ದಾರಿಯನ್ನು ಮರೆಮಾಚಿ ಇಡೀ ಮಾಫಿಯಾವನ್ನು ಪ್ರಭಾವಿ ಶಾಸಕರು, ಸಚಿವರು ತಮ್ಮ ಕೈಯಲ್ಲಿ ಹಿಡಿಯುವ ಹುನ್ನಾರ ಇದಾಗಿದೆ ಎಂದರು. ಕಿಡ್ನಿ ವೈಫಲ್ಯದಿಂದ ರೋಗಿ ಹಂತ ಹಂತವಾಗಿ ಸಾಯುವಂತೆ ಬಿಬಿಎಂಪಿಯನ್ನು ಹಂತ ಹಂತವಾಗಿ ಸಾಯಿಸಲಾಗುತ್ತಿದೆ. ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಯಾರ ಮರ್ಜಿಗೆ ಒಳಗಾಗಿ ಈ ಕೆಲಸಕ್ಕೆ ಕೈಹಾಕಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಈ ಕೆಲಸಕ್ಕೆ ಬಿಬಿಎಂಪಿಯಾಗಲಿ ಸರ್ಕಾರವಾಗಲಿ ಕೈ ಹಾಕಿದರೆ ಆಮ್ ಆದ್ಮಿ ಪಕ್ಷ ಬೃಹತ್ ಹೋರಾಟ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದರು.

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!